ಮಿನಿ ಕರ್ನಾಟಕ ಕ್ರೀಡಾ ಕೂಟ: ವಿದ್ಯಾರ್ಥಿಗಳ ಸಾಧನೆ

ಸಪ್ತಸಾಗರ ವಾರ್ತೆ, ವಿಜಯಪುರ, ನ.24: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಓಲಿಂಪಿಕ್ ಸಂಸ್ಥೆ ವತಿಯಿಂದ ಮಿನಿ ಕರ್ನಾಟಕ ಕ್ರೀಡಾ ಕೂಟ ೨೦೨೫ ನವೆಂಬರ ೩ ರಿಂದ ೯ ವರೆಗೆ ಶ್ರೀ ಕಂಠಿರವ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳಾದ ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೊಹಮ್ಮದ್ ಅಕ್ಡಸ್ ಹಳ್ಳಿ, ೫೬ ದೇಹ ತೂಕ ನಲ್ಲಿ ೨ ನೇ ಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟದ ಮಿನಿ ಒಲಿಂಪಿಕ್ ನಲ್ಲಿ ೪೮ ದೇಹ ತೂಕ ದಲ್ಲಿ ಮನವ್ ನಿತಿನ್ ಪವಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ೫೬ ದೇಹ ತೂಕ ದಲ್ಲಿ ಪ್ರತಿಕ್ ಪರಶುರಾಮ ಸಿಂಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಕೆ. ಆನಂದ, ಕ್ರೀಡಾ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವೈಟ್ ಲಿಫ್ಟಿಂಗ್ ತರಬೇತಿದಾರರು, ಮೊಹಮ್ಮದ್ ಅಮೀರ್, ವೈಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಸಾಹೇಬ ಬಾಗಾಯತ್, ವೈಟ್ ಲಿಫ್ಟಿಂಗ್ ಕಾರ್ಯದರ್ಶಿ ಚಂದ್ರಕಾಂತ ತಾರನಾಳ ಉಪಸ್ಥಿತರಿದ್ದರು.

Share this