ಸಪ್ತಸಾಗರ ವಾರ್ತೆ, ವಿಜಯಪುರ, ನ. 30
ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಪತಿ ಡಾ. ವಿಜಯಾ ಕೋರಿಶೆಟ್ಟರ ಹೇಳಿದರು.
ಪರೀಕ್ಷಾ ವಿಭಾಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಗರ್ಲ್ಸ್ ಅಂಡ್ ಎಸ್.ಸಿ./ ಎಸ್.ಟಿ ಸ್ಟೂಡೆಂಟ್ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾಜ ಬದಲಾವಣೆ ಆದಂತೆ ಶೈಕ್ಷಣಿಕ ವ್ಯವಸ್ಥೆ ಬದಲಾವಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರಲು ಸರ್ಕಾರ ರೂಸಾ ಎಂಬ ವ್ಯವಸ್ಥೆ ತಂದಿತು. ಪ್ರಸ್ತುತ ಅದನ್ನು ರೂಸಾ ಎಂದು ಹೆಸರಿಸಿ ಅದರ ಅಡಿಯಲ್ಲಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಎಂಬ ಕಾರ್ಯಗಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಪಡೆದ ಕ್ರೆಡಿಟನ್ನು ಬ್ಯಾಂಕಿನಲ್ಲಿರುವ ಡಿಪಾಸಿಟ್ ತರಹ ದಾಖಲೆ ಆಗುತ್ತದೆ. ನಂತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ನಮೂದಿಸಿ ನೀಡಲಾಗುವುದು. ಇನ್ನು ಪದವಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸಾಕಷ್ಟು ಅವಕಾಶವಿದೆ. ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ವಿಶ್ವವಿದ್ಯಾಲಯ ಹಿರಿಯ ಪ್ರಾಧ್ಯಾಪಕ ಪ್ರೊ.ಪಿ. ಬಿ. ತಡಸದ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಉನ್ನತ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಕಾರ್ಯಕ್ರಮವಾಗಿದೆ. ಇದು ವಿದ್ಯಾರ್ಥಿಗಳು ಸಾಧಿಸಿದ ಸಾಧನೆಯ ಒಟ್ಟು ಮೊತ್ತವಾಗಿದೆ. ವಿದ್ಯಾರ್ಥಿನಿಯರ ಸರ್ವಾಂಗೀಣ ಅಭಿವೃದ್ಧಿಯೆ ಈ ಯೋಜನೆಯ ಮುಖ್ಯ ಉದ್ದೇಶ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಆರ್. ಎಸ್. ಕಲ್ಲೂರುಮಠ ಅವರು ಮಾತನಾಡಿ, ವಿದ್ಯಾರ್ಥಿನಿಯರು ತಾವು ಕಲಿಕೆ ಜೊತೆಗೆ ಹೊಡೆದ ವಿಶೇಷ ಅಂಕಗಳೆ ಕ್ರೆಡಿಟ್ ಆಗುತ್ತದೆ ಅದನ್ನು ವಿದ್ಯಾರ್ಥಿನಿಯರ ಡಿಜಿ ಲಾಕರನಲ್ಲಿ ಅಧಿಕೃತ ದಾಖಲೆಗಳಾಗಿ ಇರುತ್ತವೆ. ಎಂದು ಹೇಳಿದರು ನಂತರ ಸಂಪನ್ಮೂಲ ವ್ಯಕ್ತಿಗಳಾದ ಡಾ.ರೂಪೇಶ್ ಕುಮಾರ ಎ., ಡಾ. ಅನಿಲ ಕುಮಾರ್ ಪಾಟೀಲ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಪ್ರೊ. ಸಚಿನ ಕುಮಾರ ಪಾಟೀಲ ಸ್ವಾಗತಿಸಿದರು.ಡಾ. ಭಾರತಿ ಹೊಸಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಪಿ.ಬಿ.ಬಿರಾದಾರ ಕಾರ್ಯಕ್ರಮ ನಿರ್ಮಿಸಿದರು. ಡಾ. ಭಾರತ ಹಾಲು ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ರಾಜಶೇಖರ ಬೆನಕಹಳ್ಳಿ ಕಾಲೇಜಿನ ಬೋಧಕ, ಬೋಧಕತರ ಸಿಬ್ಬಂದಿಗಳು ಮತ್ತು ಎಲ್ಲ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು-ಡಾ. ವಿಜಯಾ ಕೋರಿಶೆಟ್ಟರ


