ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 5: ಕೃಷಿಯಲ್ಲಿ ವಿಶಿಷ್ಟ ಸಾಧನೆ ಅದರಲ್ಲೂ ಸಾವಯವ, ಸುಸ್ಥಿರ, ಶೂನ್ಯಬಂಡವಾಳ, ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವದರ ಜೊತೆಗೆ ಇತರೆ ರೈತರಿಗೂ ತಮ್ಮ ಸಾಧನೆಯನ್ನು ತಿಳಿಸಿಕೊಡುತ್ತ ಅವರನ್ನು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸುವಂತೆ ಪ್ರೆರೇಪಿಸುತ್ತಿರುವ ವಿಜಯಪುರ ಜಿಲ್ಲೆಯ ಅರ್ಹ ರೈತರಿಂದ ವಿಜಯಪುರ ತಾಲೂಕಿನ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸೇವಾ ಸಂಸ್ಥೆಯ ವತಿಯಿಂದ ಅರ್ಜಿಯನ್ನು ಆವ್ಹಾನಿಸಲಾಗಿದೆ.
ಡಿ. ೧೩ ರಂದು ಜರುಗುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೃಷಿ ಕಾಯಕಯೋಗಿ ಪ್ರಶಸ್ತಿ ಜೊತೆಗೆ ರೂ. ೨೫,೦೦೦ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುತ್ತಿದೆ. ಕಾರಣ ಇಚ್ಛೆಯುಳ್ಳ ಜಿಲ್ಲೆಯ ರೈತರು ತಮ್ಮ ಸಾಧನೆಯ ವಿವರಗಳು, ಸಂಬಂಧಿಸಿದ ಸೂಕ್ತ ದಾಖಲಾತಿಗಳೊಂದಿಗೆ ಡಿ. ೦೯ ಸಾಯಂಕಾಲ ಒಳಗಾಗಿ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಾಟ್ಸಾಪ್ ಮೂಲಕವು ಕೂಡಾ ಮಾಹಿತಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಯೋಗಶ್ರೀ ಬಸನಗೌಡ ಹರನಾಳ ಅವರನ್ನು ಮೊ.9632600582 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
Editor
Rudrappa B Asangi
Editor
Managing Editor
Chetan Asangi
Managing Editor


