ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 9: ದೇಶದ ರ‍್ಯೆತರ ಮೇಲಿನ ಶೋಷಣೆ ಹೋಗಲಾಡಿಸಿದ ದೇಶದ ಏಕತೆಗಾಗಿ ಹೋರಾಡಿದ ಹರಿಕಾರ ದೇಶಕಂಡ ಅಪರೂಪದ ವ್ಯಕ್ವತ್ವ ಸರದಾರ ವಲ್ಲಭಭಾಯಿ ಪಟೇಲರದು ಎಂದು ಉಪನ್ಯಾಸಕಿ ನಂದಿನಿ ಬಿರಾದಾರ ಹೇಳಿದರು
ನಗರದ ವೀರಶ್ಯೆವ ಲಿಂಗಾಯತ ಸಭಾ ಭವನದಲ್ಲಿ ಅಖಿಲ ಭಾರತ ವೀರಶ್ಯೆವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಟಿಯಲ್ಲಿ ಸರದಾರ ವಲ್ಲಭಭಾಯಿ ಪಟೇಲರ ಬದುಕು ಮತ್ತು ಹೋರಾಟ ಕುರಿತು ಉಪನ್ಯಾಸ ನೀಡಿದ ಅವರು, ಸರದಾರ ವಲ್ಲಭಬಾಯಿ ಪಟೇಲರು ೧೮೭೫ರಲ್ಲಿ ಜನ್ಮತಾಳಿ ಕಾನೂನು ಪದವಿ ಪಡೆದು ಸತ್ಯ,ನಿಷ್ಟೆ, ಪ್ರಾಮಾಣಿಕತೆ ಮ್ಯೆಗೂಢಿಸಿಕೊಂಡು ಜೀವನ ಬದುಕಿನ ಪ್ರಯೋಗಗಳನ್ನು ಹೋರಾಟ ಸತ್ಯ ಅಹಿಂಸೆಗಳಿಂದ ಬದುಕು ಸಾಗಿಸುತ್ತ ಮಹಾತ್ಮಾ ಗಾಂಧೀಜಿ ಅವರ ಜೊತೆಗೂಡಿ ದೇಶದ ಏಕತೆಗಾಗಿ , ಸ್ವಾತಂತ್ರೋತ್ಸವಕ್ಕಾಗಿ ಹೋರಾಡಿದರು. ಬಾರ್ಡೊಲಿ ಸತ್ಯಾಗೃಹದಿಂದ ರ‍್ಯೆತರ ಏಳ್ಗೆಗಾಗಿ ಪಣತೊಟ್ಟು ರ‍್ಯೆತರ ಸುಂಕವನ್ನು ತೆಗೆದು ಹಾಕಿದರು.
ರಾಜಸ್ಥಾನ ವಿಲೀನ ಏಕತೆಗಾಗಿ ಆಂದೋಲನ ಯಶಸ್ವಿಯಾಗಿ ಮಾಡಿ ಭಾರತ ದೇಶದ ಏಕೀಕರಣಗೋಸ್ಕರ ಜೀವನವನ್ನೇ ಪಣಕ್ಕಿಟ್ಟ ವ್ಯಕ್ತಿತ್ವ ಸರದಾರ ವಲ್ಲಭಭಾಯಿ ಪಟೇಲರದು ಎಂದರು.
ಮಹಾಸಭೆಯ ನಿರ್ದೆಶಕಿ ಶಾರದಾ ಕೊಪ್ಪ [ಐಹೊಳ್ಳಿ] ಮಾತನಾಡಿ, ಪಟೇಲರು ಸ್ವಾತಂತ್ರ್ಯ ಹೋರಾಟಗಾರರು, ಉಕ್ಕಿನ ಮನುಷ್ಯ ನಾಯಕತ್ವ, ಮಾನವೀಯ ಗುಣಗಳು, ವೃತ್ತಿಪರತೆ ದೇಶದ ಏಕತೆಗಾಗಿ ಸ್ವಾತಂತ್ರ್ಯ ಒದಗಿಸಿ ಕೊಟ್ಟ ವಿಶ್ವದ ಸಾಧಕರ ಅಗ್ರಸಾಲಿನಲ್ಲಿ ನಿಂತಿದ್ದು ದೇಶದ ಭಾಗ್ಯ ಎಂದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಸರ್ದಾರ ವಲ್ಲಭಭಾಯಿ ಪಟೇಲರ ಬದುಕು, ಹೋರಾಟ, ತತ್ವ, ಅಹಿಂಸೆಯ ಅಸ್ತ್ರದ ಮೂಲಕ ಚಳವಳಿಯಲ್ಲಿ ಪಾಲ್ಗೊಂಡು ರೈತರ ಕಂದಾಯ ಸ್ಥಗಿತಗೊಳಿಸಿದರು. ಸಂಸ್ಥಾನಗಳ ಒಕ್ಕೂಟಕ್ಕೂ ಹೋರಾಡಿದ ಪ್ರಾಮಾಣಿಕ ಉಕ್ಕಿನ ಮನುಷ್ಯ ಅವರ ಮಾರ್ಗದರ್ಶನ ರಾಷ್ಟ್ರ ಭಕ್ತಿ ನಾವು ಕಂಡುಕೊಂಡು ತತ್ವಾದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಅಪ್ಪಾಸಾಹೇಬ ಕೋರಿ ವಚನಗೀತೆ ಹಾಡಿದರು. ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಉಪಾಧ್ಯಕ್ಷ ಸಹದೇವ ನಾಡಗೌಡ ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾದೇವ ಹಾಲಳ್ಳಿ, ಎಸ್.ಎನ್. ಶಿವಣಗಿ, ಮೋದಿ ದಂಪತಿಗಳು, ಭೀಮಣ್ಣ ಭಜಂತ್ರಿ, ಮಲ್ಲಿಕಾರ್ಜುನ ಅಮರಣ್ಣವರ, ಜಗದೀಶ ಮೋಟಗಿ, ವಿಶ್ರಾಂತ ಎ.ಎಸ್.ಐ. ಪಟ್ಟಣಶೆಟ್ಟಿ, ಕಾಶಿನಾಥ ಅಣ್ಣೆಪ್ಪನವರ ಮತ್ತು ಶರಣರು, ಶರಣಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಲ್ಲಭಭಾಯಿ ಪಟೇಲರು ಏಕತೆಯ ಹರಿಕಾರ: ನಂದಿನಿ ಬಿರಾದಾರ


