ತನುಶ್ರೀ ಇಜೇರಿ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 11: ಸಂತ ಜೋಸೆಫ್ ವಿದ್ಯಾರ್ಥಿನಿ ತನುಶ್ರೀ ಇಜೇರಿ ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ೧೭ ವಯೋಮಿತಿಯ ಬಾಲಕಿಯರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಚಿನ್ನದ ನಾಡಿನಲ್ಲಿ ನಡೆದ ೨೦೨೫-೨೬ ನೇ ಸಾಲಿನ ೧೭ ವಯೋಮಿತಿಯ ಬಾಲಕಿಯರ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಕೋಲಾರ ಜಿಲ್ಲೆ ಕೋಲಾರವರ ಆಶ್ರಯದಲ್ಲಿ ಜರುಗಿತು.
ಈ ಪಂದ್ಯಾವಳಿಯಲ್ಲಿ ತನುಶ್ರೀ ಇಜೇರಿ ಭರ್ಜರಿ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ನಿಂದ ಬೆಳಗಾವಿ ವಿಭಾಗದ ತಂಡ ರನ್ನರ್ಸ್ ಅಪ್ ಆಗಲು ಒಳ್ಳೆಯ ಪ್ರದರ್ಶನ ನೀಡಿದಳು.
ಸಮಯದ ಕೊರತೆಯಿಂದ ಪ್ರತಿ ಇನ್ನಿಂಗ್ಸ್ ಕೇವಲ ೮ ಓವರ್ ಗಳಿಗೆ ಸೀಮಿತ ಮಾಡಲಾಗಿತ್ತು. ಬ್ಯಾಟಿಂಗ್‌ನಲ್ಲಿ ೩ ಇನ್ನಿಂಗ್ಸ್ ನಲ್ಲಿ ೯೬ ರನ್ಸ್ ಹಾಗೂ ೩ ಪಂದ್ಯಗಳಲ್ಲಿ ೬ ವಿಕೆಟ್ ತೆಗೆದಕೊಳ್ಳಲು ಯಶಸ್ವಿ ಹಾಗೂ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದರು.
ಅತ್ಯುತ್ತಮ ಪ್ರದರ್ಶನ ತೋರಿದಕ್ಕೆ ತನುಶ್ರೀ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಕೆಯಾಗಿದ್ದಾರೆ.

Share this