ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 16: ಜಿಲ್ಲಾಡಳಿತ ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಮತ್ತು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಎಸ್ ಎಸ್ ‘ಎ’ ಶಾಲೆಯ ವಿದ್ಯಾರ್ಥಿನಿ ಕುಮಾರಿ ಹರ್ಷಿತಾ ಭಜಂತ್ರಿ 2 ಕಿಮೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 4—6ಕಿಮೀ ನಲ್ಲಿ ದ್ವಿತೀಯ ಸ್ಥಾನ ಹಾಗೂ ಶ್ರೀದೇವಿ ಹಿರೇಗೋಳ 500 ಮೀಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಮತ್ತು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ . ಅದೇ ರೀತಿ ಇನ್ನೊಬ್ಬ ವಿದ್ಯಾರ್ಥಿ ರವಿ ಶಂಕರಪ್ಪಗೋಳ ತೃತೀಯ ಸ್ಥಾನ ಪಡೆದಿದ್ದಾನೆ.ಈ ವಿದ್ಯಾರ್ಥಿಗಳಿಗೆ ಬಿ. ಎಲ್. ಡಿ .ಇ ಸಂಸ್ಥೆಯ ಅಧ್ಯಕ್ಷ ಎಮ್ ಬಿ ಪಾಟೀಲ,ಕಾರ್ಯದರ್ಶಿ ಸುನೀಲಗೌಡ ಬಿ ಪಾಟೀಲ್ , ಉಪಾಧ್ಯಕ್ಷ ಜಿ.ಕೆ. ಪಾಟೀಲ್, ಆಡಳಿತಾಧಿಕಾರಿಗಳು,ಸಂಸ್ಥೆಯ ಆಡಳಿತ ಮಂಡಳಿಯ ಸರ್ವಸದಸ್ಯರು, ಶಾಲೆಯ ಉಪ ಪ್ರಾಚಾರ್ಯ ಕೆ. ಬಿ. ಪಾಟೀಲ್ ಹಾಗೂ ದೈಹಿಕ ಶಿಕ್ಷಕ ಮಹೇಶ್. ಕೋಟ್ಯಾಳ ಮತ್ತು ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು
ಹರ್ಷವ್ಯಕ್ತಪಡಿಸಿದ್ದಾರೆ.
ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. ‘ಎ’ ಹೈಸ್ಕೂಲ್ ವಿದ್ಯಾರ್ಥಿಗಳು ಸೈಕ್ಲಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ


