ಸಪ್ತಸಾಗರ ವಾರ್ತೆ ವಿಜಯಪುರ, ಡಿ. 28:
ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದ್ದಾರೆ.
ಭಾನುವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ. ಅದನ್ನು ಯಥವತ್ತಾಗಿ ಕಾರ್ಯರೂಪಕ್ಕೆ ತರುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷವು ಸುಮಾರು ೧೪೦ ವರ್ಷಗಳ ಇತಿಹಾಸವಿದ್ದು ಈ ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕರು ಜೀವ ಬಲಿದಾನವನ್ನು ಮಾಡಿ ದೇಶವನ್ನು ಸದೃಢವಾಗಿ ಕಟ್ಟಿರುವರು. ಇಂಥಹದೊಂದು ಇತಿಹಾಸವಿರುವ ಪಕ್ಷದಲ್ಲಿ ನಾವೆಲ್ಲರೂ ಕೂಡಾ ಕೆಲಸ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಹಾಗಾಗಿ ಕಾರ್ಯಕರ್ತರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಎಲ್ಲ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವೆಲ್ಲರೂ ಕೂಡಾ ಪಕ್ಷದ ಸಿದ್ಧಾಂತವನ್ನು ಪಾಲಿಸುತ್ತಾ ಪಕ್ಷ ಮಾಡಿರುವ ಐತಿಹಾಸಿಕ ಕೆಲಸಗಳನ್ನು ಮನೆ ಮನೆಗೆ ತಲುಪಿಸುವದರ ಮುಖಾಂತರ ಪಕ್ಷವನ್ನು ಗಟ್ಟಿಗೊಳಿಸುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ೧೮೮೫ ರಲ್ಲಿ ಸ್ಥಾಪನೆಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾಯಿತು. ಮಹಾತ್ಮಾ ಗಾಂಧಿಜಿ, ಜವಾಹರ ನೆಹರು, ಡಾ. ಬಿ. ಆರ್. ಅಂಬೇಡ್ಕರ, ಸರದಾರ ವಲ್ಲಭಭಾವಿ ಪಟೇಲ, ಇಂದಿರಾಗಾಂಧಿ, ರಾಜೀವ ಗಾಂಧೀಜಿ ಅವರಂಥಹ ಮಹಾನ್ ನಾಯಕರು ಕಟ್ಟಿದ ಈ ಪಕ್ಷವು ಸದಾ ಬಡವರ, ದಲಿತರ, ಅಲ್ಪಸಂಖ್ಯಾತರ, ರೈತರ, ಕಾರ್ಮಿಕರ, ಮತ್ತು ಮಹಿಳೆಯರ ಧ್ವನಿಯಾಗಿ ನಿಂತಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ, ಮಹಿಳಾ ಕಾಂಗ್ರೆಸ್ ಆಧ್ಯಕ್ಷ ರಮೇಜಾ ನದಾಫ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಾಹಪೂರ, ಜಿ. ಪಂ.ಮಾಜಿ ಸದಸ್ಯ ಗೌರಮ್ಮ ಮುತ್ತತ್ತಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಸುಭಾಷ ಕಾಲೇಬಾಗ, ಆಜಾದ ಪಟೇಲ, ಉಸ್ಮಾನ ಪಟೇಲ, ವಿಶ್ವನಾಥ ಮಠ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಚನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಮೀರ ಅಹ್ಮದ ಬಕ್ಷಿ, ಬಿ. ಸಿ. ಸಾಹುಕಾರ, ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಪೀರಾ ಜಮಖಂಡಿ, ಸರ್ಫರಾಜ ಮಿರ್ದೆ, ಕೃಷ್ಣಾ ಕಾಮಟೆ, ವಿಜಯಕುಮಾರ ಕಾಳೆ, ಸಬೀನಾ ಮಂಟೂರ, ಪ್ರದೀಪ ಪಾಟೀಲ, ಪರಶುರಾಮ ಹೊಸಮನಿ, ಗುಲಾಬ ಚವ್ಹಾಣ, ಮಹಿಬೂಬ ಕಲಾದಗಿ, ಭಾರತಿ ನಾವಿ, ಮಲ್ಲಿಕಾರ್ಜುನ ಯಂಕಂಚಿ, ಬಿ. ಎಮ್ ಮುಕ್ಬಿಲ್, ಫರೋಜ ಶೇಖ, ಭುವನೇಶ್ವರಿ ಮಠ, ಹಮೀದಾ ಪಟೇಲ, ಮಹಾದೇವ ಜಾಧವ, ಅಬೂಬಕರ ಕಂಬಾಗಿ, ಲಕ್ಷ್ಮಣ ಚಲವಾದಿ, ಸರಫರಾಜ ಅಗಸಬಾಳ, ಕೆ. ಆರ್. ಬಾಗಮಾರೆ, ಕಲ್ಲಪ್ಪ ಪರಶೆಟ್ಟಿ, ವಿರೇಶ ಕಲಾಲ, ಅಬ್ದುಲ್ ಹಮೀದ ಮನಗೂಳಿ, ದಾದಾಪೀರ ಬಾಗಮಾರೆ, ಬಿ. ಆರ್. ಬಡಿಗೇರ, ಪರವೇಜ ಪೀರಜಾದೆ, ಅರಬಾಜ ಬಾಗಮಾರೆ, ದಿಲೀಪ ಪ್ರಭಾಕರ, ರುಬೀನಾ ಹಳ್ಳೂರ, ಅಶೋಕ ನಾಯ್ಕೋಡಿ, ಸಿದ್ಧಾರ್ಥ ನಿಂಬಾಳಕರ, ಅಶೋಕ ಕಾಂಬಳೆ, ಕಾಶಿಬಾಯಿ ಹಡಪದ, ಲಕ್ಷಮೀ ಶಿವಣಗಿ, ಲಕ್ಷ್ಮಿ ಕ್ಷೀರಸಾಗರ, ಅಲಿಯಾ ಮನ್ಸೂರ, ಸಮಾ ಚಾಂದಕವಠೆ, ಗೀತಾ ಸಿಂದಗಿ, ಭಾರತಿ ದೊಡಮನಿ, ರೇಶ್ಮಾ ಬ್ಯಾಕೋಡ, ಆಸ್ಮಾ ಕಾಲೇಬಾಗ, ಮುಸ್ಕಾನ ಶಿರಗೂರ, ಶಾಹಿನ ನಾಯಿಕ, ಶಹನಾಜ ನದಾಫ, ಬಾಬು ಗುಡಮಿ, ಮಾರುತಿರಾವ ಬಂಡಿ ಹಾಗೂ ಇತರ ಜಿಲ್ಲಾ ಹಾಗೂ ತಾಲೂಕ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ ಕೊಡುಗೆ ಜನಸಾಮಾನ್ಯರಿಗೆ ತಿಳಿಸಿ: ಲೋಣಿ


