ಸಪ್ತಸಾಗರ ವಾರ್ತೆ ವಿಜಯಪುರ, ಡಿ.28:
ನಗರ ಹೊರ ವಲಯದ ಹಿಟ್ನಳ್ಳಿ ಫಾರ್ಮ್ ನಲ್ಲಿ ಜನೆವರಿ ನಾಲ್ಕರಿಂದ ಆರರವರೆಗೆ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹಿಟ್ನಳ್ಳಿ ಫಾರ್ಮ್ ಆವರಣಲ್ಲಿ ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್, ಆತ್ಮಾ ಯೋಜನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕೃಷಿ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ವಿವಿಧ ಬೆಳೆಗಳು ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳುಳ್ಳ ಪ್ರಾಯೋಗಿಕ ತಾಕುಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ.
ಈ ಸಂದರ್ಭದಲ್ಲಿ ರೈತರಿಗೆ ವಿವಿಧ ವಿಷಯಗಳಾದ ಒಣ ಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿ ಅಭಿವೃದ್ದಿ, ಮಳೆನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಕಡಲೆ ಮತ್ತು ತೊಗರಿಯ ತಳಿಗಳು, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಕೃಷಿ ಸ್ಟಾರ್ಟ್ಅಪ್, ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಕೃಷಿ ಹವಾಮಾನ ಮಾಹಿತಿ, ಕೃಷಿ ಯಾಂತ್ರಿಕತೆ, ಬೀಜೋತ್ಪಾದನೆ, ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ, ಗೃಹ ವಿಜ್ಞಾನ ಮಾಹಿತಿ, ಬೃಹತ್ ಜಲಾನಯನ ಅಭಿವೃದ್ದಿ ಪ್ರಾತ್ಯಕ್ಷಿಕೆ, ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು ಬಗ್ಗೆ ಮಾಹಿತಿ ಪಡೆಯಬಹುದು.
ರೈತರ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನಿಡಲು ಕೃಷಿ ಸಲಹಾ ಕೇಂದ್ರವು ಇದೆ. ಇದಲ್ಲದೆ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಬೇರೆ ಬೇರೆ ವಿಷಯಗಳ ಮೇಲೆ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳಲಾಗಿದೆ.
ಜ. 4ರಂದು ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ, 5 5ರಂದು ಕೃಷಿ ಉದ್ದಿಮೆ ಅಭಿವೃದ್ದಿ ಮತ್ತು ಮಾರುಕಟ್ಟೆ ಹಾಗೂ 6ರಂದು
ಸುಸ್ಥಿರ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು, ವಿವಿಧ ಬೆಳೆಗಳ ಬೀಜ, ಪೀಡೆನಾಶಕಗಳು, ಗೊಬ್ಬರಗಳ ಹಾಗೂ ಕೃಷಿ ಯಂತ್ರೋಪಕರಣಗಳನ್ನೂಳಗೊಂಡ ವಿವಿಧ ಕಂಪನಿಗಳ ಪ್ರರ್ದಶನವನ್ನು ಕ್ರೃಷಿ ವಸ್ತು ಪ್ರರ್ದಶನದಲ್ಲಿ ಏರ್ಪಡಿಸಲಾಗಿದೆ. ರೈತರು ಕೃಷಿ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಹಿಟ್ನಳ್ಳಿ ಫಾರ್ಮ್ ದಲ್ಲಿ ಜ. 4 ರಿಂದ 6ರವರೆಗೆ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನ


