ಇಂಗಳೇಶ್ವರ ಚನ್ನಬಸವ ಸ್ವಾಮಿಜಿ ಕಾಯಕ ಸವ೯ಶ್ರೇಷ್ಠ: ಸಿದ್ಧರಾಮ ಶ್ರೀ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 28:
ಆಧ್ಯಾತ್ಮಿಕ ಜೀವನದ ಮೌಲ್ಯಯುತ ತತ್ವಗಳನ್ನು ಪ್ರವಚನಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಪ್ರಥಮರು. ಶಿಲೆಗಳಲ್ಲಿ ವಚನಗಳನ್ನು ಅರಳಿಸಿ ದೇಶದ ಗಮನ ಸೆಳೆದ ಇಂಗಳೇಶ್ವರ ಚನ್ನಬಸವ ಸ್ವಾಮಿಜಿ ಕಾಯಕ ಸವ೯ಶ್ರೇಷ್ಠವಾಗಿದೆ ಎಂದು ಮಸಬಿನಾಳ ವಿರಕ್ತಮಠದ ಸಿದ್ಧರಾಮ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು
ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಹಾಗೂ ಇಂಗಳೇಶ್ವರದ ಚನ್ನಬಸವ ಸ್ವಾಮಿಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಆಧ್ಯಾತ್ಮಿಕ ಹಾಗೂ ವಚನ ಸಾಹಿತ್ಯ ಕ್ಷೇತ್ರಕ್ಕೆ ಇವ೯ರ ಸೇವೆ ಶ್ಲಾಘನೀಯ ಎಂದರು.
ನುಡಿನಮನ ಕಾರ್ಯಕ್ರಮ ಉದ್ಘಾಟಿಸಿದ ಮನಗೂಳಿಯ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಸ್ವಾಮಿಜಿ ಮಾತನಾಡಿ, ಸರಳತೆಯಿಂದಲೆ ಜನರ ಬಾಳಬೆಳಗಿದ ಸಿದ್ಧೇಶ್ವರ ಶ್ರೀಗಳು ಮನೆಮಾತಾಗಿದ್ದರು. ವಚನಗಳಿಂದ ಶಿಲೆಗಳನ್ನು ಮಾತನಾಡಿಸಿ ಶಿಲೆಗಳಿಗೂ ಹಾಗೂ ವಚನಗಳಿಗೆ ಜೀವತುಂಬಿದ ಚನ್ನಬಸವ ಶ್ರೀ ಶ್ರೇಷ್ಠರು ಎಂದರು.
ಅಧ್ಯಕ್ಷತೆ ವಹಿಸಿದ ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಸಿದ್ಧೇಶ್ವರ ಶ್ರೀ ಹಾಗೂ ಚನ್ನಬಸವ ಶ್ರೀ ಶತಮಾನದ ಶ್ರೇಷ್ಠ ಸಂತರಾಗಿ ಅನಂತ ಭಕ್ತರ ಆರಾಧ್ಯ ದೈವರಾಗಿದ್ದರು ಎಂದರು.
ಸಿದ್ದೇಶ್ವರ ಶ್ರೀ ಕುರಿತು ಉಪನ್ಯಾಸ ನೀಡಿದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಮಾತನಾಡಿ, ಭಾರತ ಸರಕಾರ ನೀಡಿದ ಪದ್ಮಶ್ರೀ ಪುರಸ್ಕಾರ ಪಡೆಯದೇ ಸರಳತೆ ಮೆರೆದರು. ದೇಶದ ಪ್ರಧಾನಿಗೆ ಆಧ್ಯಾತ್ಮ ಚಿಂತನೆಯನ್ನು ಬೊಧಿಸಿದ ಮಹಾನ್ ಚೇತನ ಸಿದ್ಧೇಶ್ವರ ಶ್ರೀಗಳು ಎಂದರು.
ಇಂಗಳೇಶ್ವರ ಚನ್ನಬಸವ ಸ್ವಾಮಿಜಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಹಾಗೂ ತಾಲೂಕ ಕಸಾಪ ಗೌರವ ಕಾರ್ಯದರ್ಶಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ವಚನ ಶಿಲಾ ಮಂಟಪ ನಿಮಿ೯ಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ ಎಂದರು. ಬೊಮ್ಮನಹಳ್ಳಿ ಗವಿಮಠದ ಗುರುಶಾಂತ ಶಿವಾಚಾರ್ಯರು, ಬುರಣಾಪೂರ ಆರೂಢ ಆಶ್ರಮದ ಯೋಗೇಶ್ವರಿ ಮಾತಾ, ಗುಣದಾಳ ಹಿರೇಮಠ ಸಂಸ್ಥಾನದ ವಿವೇಕಾನಂದ ಸ್ವಾಮಿಜಿ ನುಡಿನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹುಬ್ಬಳ್ಳಿ ಪೊಲೀಸ್ ನಿರೀಕ್ಷಕ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಮೂಹ ಸಂಪನ್ಮೂಲ ವ್ಯಕ್ತಿ ರಾಜಶೇಖರ ಬನಸೋಡೆ ಹಾಗೂ ಸಾಹಿತಿ ಅಶೋಕ ಲೋಣಿ ಮಾತನಾಡಿದರು.
ಸುನಂದಾ ಕೋರಿ ಪ್ರಾಥಿ೯ಸಿದರು. ಶೋಭಾ ಮೇಡೆಗಾರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಯಮನಪ್ಪ ಪವಾರ ಮಾತನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ರಿಯಾಜ ಪಿಂಜಾರ ವಂದಿಸಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಪದಾಧಿಕಾರಿಗಳಾದ ರೂಪಾ ರಜಪೂತ, ರೇವತಿ ಬೂದಿಹಾಳ, ಅಜು೯ನ ಶಿರೂರ, ಜಿ.ಎಸ್. ಬಳ್ಳೂರ, ಎಸ್.ಎಲ್. ಇಂಗಳೇಶ್ವರ, ಮಂಜುಳಾ ಕಾಳಗಿ, ಮಹೆತಾಬ ಕಾಗವಾಡ, ಪೀರಸಾಬ ವಾಲಿಕಾರ, ಶ್ರೀಕಾಂತ ನಾಡಗೌಡ, ಪರವೀನ ಶೇಖ, ಮಹಾದೇವಿ ತೆಲಗಿ, ಕೆ. ಎಸ್. ಹಣಮಾಣಿ, ಎ.ಎಂ. ಹಳ್ಳೂರ, ಲತಾ ಗುಂಡಿ, ಎಸ್.ಎ. ರಡ್ಡಿ, ಗಂಗಮ್ಮ ರೆಡ್ಡಿ, ಶೋಭಾ ಬಡಿಗೇರ, ಬಸವರಾಜ ಪಟ್ಟಣಶೆಟ್ಟಿ, ಆನಂದರಾವ ಕುಲಕರ್ಣಿ, ಶಿವಾಜಿ ಮೋರೆ ಮುಂತಾದವರು ಉಪಸ್ಥಿತರಿದ್ಧರು.

Share this