ಸಪ್ತಸಾಗರ ವಾರ್ತೆ ವಿಜಯಪುರ, ಜ. 2:
ನಗರದ ಯೋಗಾ ಗಾರ್ಡನ್ ನಲ್ಲಿ ಸ್ನೇಹಿತರ ಕೂಟದ ನೇತೃತ್ವದಲ್ಲಿ ನಡೆದ ಡಬಲ್ ಬ್ಯಾಡ್ಮಿಂಟನ್ ರೋಚಕ ಪಂದ್ಯಾವಳಿಯಲ್ಲಿ ಹಿರಿಯ ಪತ್ರಕರ್ತರೂ ಆದ ಡಾ. ಎಂ. ಎ. ಮಾಲಬಾವಡಿ ಹಾಗೂ ಜಯರಾಮ ಚವ್ಹಾಣ ಅವರು ಪ್ರಥಮ ಬಹುಮಾನವನ್ನು ಗೆದ್ದು ಬೀಗಿದರು.
ಹುಸೇನಸಾಬ ಮನಗೂಳಿ, ಜಗದೀಶ ರಾಠೋಡ ಅವರು ದ್ವಿತೀಯ ಬಹುಮಾನ ಗಳಿಸಿದರು.
ಇಸ್ಮಾಯಿಲ್ ಮನಗೂಳಿ ಹಾಗೂ ಲಕ್ಷ್ಮಣ ರಾಠೋಡ ತೃತೀಯ ಸ್ಥಾನ ಪಡೆದುಕೊಂಡರು.
ಸಿದ್ದಣ್ಣ ಸಕ್ರಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ತಂಡದ ನಿರ್ಣಾಯಕರಾಗಿ ಮೆಹಬೂಬ್ ಹತ್ತುರಕರ ಆಗಮಿಸಿದ್ದರು.
ಸೋಮು ರಾಥೋಡ್, ದಶರಥ ರಾಥೋಡ್, ಸಂಗನಗೌಡ ಪಾಟೀಲ್, ಮೋಹನ್ ರಾಥೋಡ್, ಡಾ. ರಮೇಶ್ ನಾಯಕ, ಹಿರಿಯರು ಹಾಗೂ ಕ್ರೀಡಾಭಿಮಾನಿಗಳು ಇದ್ದರು.
ಬ್ಯಾಡ್ಮಿಂಟನ್ ಪಂದ್ಯಾವಳಿ: ಡಾ. ಮಾಲಬಾವಡಿ ಪ್ರಥಮ


