ಕನ್ನಡ ಅನ್ನದ ಭಾಷೆಯೊಂದಿಗೆ ಅಂತರಂಗದ ಭಾಷೆಯಾಗಲಿ- ಡಾ. ಜಿ.ಡಿ.ಕೊಟ್ನಾಳ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ,ಜ. 4 : ಹಿರಿಯರನ್ನು ನೆನಪಿಸಿಕೊಳ್ಳಲು ದತ್ತಿ ಗೋಷ್ಠಿಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಜಿ.ಡಿ. ಕೊಟ್ನಾಳ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ. ದ.ಪಿ.ಕೊಟ್ನಾಳ ಹಾಗೂ ದಿ. ಕೊಟ್ನಾಳ ಶಿಕ್ಷಕರ ದಂಪತಿ ಸ್ಮರಣಾರ್ಥ ದತ್ತಿ. ವಿಷಯ: ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ನಾಳ ಮನೆತನದ ಕೊಡುಗೆ ಹಾಗೂ ಮಾತೋಶ್ರೀ ರಾಚಮ್ಮ ನೀಲಕಂಠ ಅಥರ್ಗಾ ದತ್ತಿ. ವಿಷಯ: ಆಧ್ಯಾತ್ಮಿಕ ಕ್ಷೇತ್ರ. ಹಾಗೂ ಶ್ರೀಮಂತ ಸುಶೀಲಾ ಬಾಯಿ ಮತ್ತು ಬೋಜಪ್ಪ ದೇಸಾಯಿ ಸ್ಮರಣಾರ್ಥ ದತ್ತಿ. ವಿಷಯ: ಆಧುನಿಕ ಸಮಾಜದಲ್ಲಿ ಗುಣಮಟ್ಟ ಶಿಕ್ಷಣದ ಮಹತ್ವ. ಎಂಬ ವಿವಿಧ ದತ್ತಿಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ನಮ್ಮ ಅನ್ನದ ಭಾಷೆಯೊಂದಿಗೆ ಅಂತರಂಗದ ಭಾಷೆಯಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ನಾವೆಲ್ಲರೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡಪರ ಚಿಂತನೆ ಮಾಡಿ ತಾಯಿ ಕನ್ನಡಾಂಬೆಯ ಕೀರ್ತಿಯನ್ನು ಹೆಚ್ಚಿಸೋಣ ಎಂದರು.
“ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ನಾಳ ಕುಟುಂಬದ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ಇಡೀ ಕೊಟ್ನಾಳ ಕುಟುಂಬವೇ ಶಿಕ್ಷಕರಿಂದ ತುಂಬಿ ಹೋಗಿದ್ದು, ಆದರ್ಶ ವಿಚಾರಗಳು ಮೌಲ್ಯಗಳನ್ನು ಈ ಸಮಾಜಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಕೊಟ್ನಾಳ ಕುಟುಂಬದ್ದು ಎಂದರು.
“ಆಧ್ಯಾತ್ಮ ಮತ್ತು ಗುಣಮಟ್ಟದ ಶಿಕ್ಷಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಯುವಪೀಳಿಗೆಗೆ ಇಂದು ಆಧ್ಯಾತ್ಮ ಅತ್ಯಂತ ಅವಶ್ಯಕವಾಗಿದ್ದು, ಆಧ್ಯಾತ್ಮದ ನೆಲೆಗಟ್ಟಿನಲ್ಲಿಯೇ ಇಂದು ಗುಣಮಟ್ಟದ ಶಿಕ್ಷಣ ನೀಡಿ ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರ ನೀಡಿ ಭವಿಷ್ಯದ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಪಾಲಕರು, ಶಿಕ್ಷಕರು ಸಮಾಜ ಸಹಕರಿಸಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಎಸ್.ಆರ್. ಮೇತ್ರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು ಹಾಗೂ ಗ್ರಾಮೀಣ ಜನರ ಸಂಪ್ರದಾಯದ ಹಾಡುಗಳನ್ನು ಹಾಡಿಸಬೇಕೆಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಜಿಯಾಬೇಗಂ ಕೊಟ್ನಾಳ, ಬಿ.ಬಿ.ದೇಸಾಯಿ ಆಲಮೇಲ, ಶಿವಶಂಕರ ಮೇಲಿನಮನಿ, ರಾಚಮ್ಮ ನೀಲಕಂಠ ಅಥರ್ಗಾ, ರೂಪಾ ರಜಪೂತ, ದಾನಮ್ಮ ಹೂಗಾರ ಮುಂತಾದವರು ಮಾತನಾಡಿದರು.
ಶಶಿಕಲಾ ನಾಯ್ಕೋಡಿ ಹಾಗೂ ಸಿದ್ದು ಮೇಲಿನಮನಿ ಪ್ರಾರ್ಥಿಸಿದರು. ರಿಯಾಜ ಪಿಂಜಾರ ಸ್ವಾಗತಿಸಿ ಗೌರವಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಮನಪ್ಪ ಪವಾರ ವಂದಿಸಿದರು. ಪರವೀನಬಾನು ಶೇಖ ದತ್ತಿ ಪ್ರಶಸ್ತಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಜಮಖಂಡಿ ಓಂ ಶಾಂತಿ ಆಶ್ರಮದ ಪೂಜ್ಯ ಬಿ.ಕೆ.ಜ್ಯೋತಿ ಅಕ್ಕನವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಶಿಕ್ಷಣ ಇಂದು ತುಂಬಾ ಅವಶ್ಯಕವಾಗಿದೆ ಎಂದು ಪೂಜ್ಯ ಬಿ.ಕೆ. ಜ್ಯೋತಿ ಅಕ್ಕನವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ಜಗದೀಶ ಬೋಳಸೂರ, ಬಿ.ಎಂ.ಅಜೂರ, ಅರ್ಜುನ ಶಿರೂರ, ಕಮಲಾ ಮುರಾಳ ಎನ್.ಆರ್.ಕುಲಕರ್ಣಿ, ವಿ.ಎಸ್ ಖ್ಯಾಡಿ, ಮಹ್ಮದಗೌಸ ಹವಾಲ್ದಾರ, ಶ್ರೀಕಾಂತ ನಾಡಗೌಡ, ಎ.ಎಂ.ಹಳ್ಳೂರ, ಎಸ್.ಎಲ್ ಇಂಗಳೇಶ್ವರ, ಬಿ.ಎಂ..ಮಸಬಿನಾಳ, ಮೋಹನ ಕಟ್ಟಿಮನಿ, ಶೋಭಾ ಬಡಿಗೇರ, ಗಂಗಮ್ಮ ರಡ್ಡಿ, ಜಿ.ಎಸ್.ಬಳ್ಳೂರ, ರಾಮಣ್ಣ ಅಥರ್ಗಾ, ರಾಘವೇಂದ್ರ ಗುಡಿಮನಿ, ಬಿ.ಎನ್.ವಡಿಗೇರಿ, ಉಮೇಶ ಅಥರ್ಗಾ,ಎಂ.ಜಿ ಕಾಜೂರ, ಶ್ರೀನಾಥ ಪೂಜಾರಿ, ಬಸನಗೌಡ ಬಿರಾದಾರ, ಆಶಾ ಬಿರಾದಾರ, ಲಕ್ಷ್ಮೀ ಪಾಟೀಲ, ಮಲ್ಲಿಕಾರ್ಜುನ ಕೆಳಗಡೆ, ಎನ್.ವಿ.ಆಲಗೂರ (ದೇಸಾಯಿ) ಮಾರುತಿ ಬೂದಿಹಾಳ, ವಿಜಯಾ ಬಿರಾದಾರ, ಅಹ್ಮದ ವಾಲಿಕಾರ,ಅಶೋಕ ಚಳಗೇರಿ, ವಿಜಯಾ ಬಿರಾದಾರ, ತಾರಾನಾಥ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

Share this