ಸಪ್ತಸಾಗರ ವಾರ್ತೆ,ವಿಜಯಪುರ, ಜ. 9:
ವಿಜಯಪುರ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಶುಕ್ರವಾರ ವಿಜಯಪುರ ನಗರದ ದರಬಾರ ಹೈ ಸ್ಕೂಲ್ ಮೈದಾನದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಯ ಕಾಮಗಾರಿಗಳ ಉದ್ಘಾಟನೆ
ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹೋರಾಟ ಮಾಡಲಾಗಿದೆ
ಹಿಂದೆ ಬಿಜೆಪಿ ಸರ್ಕಾರ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿತ್ತು. ಸಚಿವರಾದ
ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರು ಜಿಲ್ಲೆಯಲ್ಲಿಸರ್ಕಾರಿ ಮೆಡಿಕಲ್ ಗೆ ಬೇಡಿಕೆ ಇಟ್ಟಿದ್ದರು.
ನಮ್ಮ ಸರ್ಕಾರ ಜಿಲ್ಲೆಯಲ್ಲಿ ಖಂಡಿತವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುತ್ತದೆ ಎಂದು ಘೋಷಣೆ ಮಾಡಿದರು.
ಯಾರೂ ಇದಕ್ಕಾಗಿ ಹೋರಾಟ ಮಾಡುವುದು ಅವಶ್ಯಕತೆಯಿಲ್ಲ ಎಂದು ಹೇಳಿದರು.
ಸಮಯದ ಅಭಾವದ ಕಾರಣ ಹೆಚ್ಚಿಗೆ ಮಾತನಾಡಲ್ಲ. 4-45 ರ ಮೇಲೆ ಸಮಯವಾದರೆ ಹೆಲಿಕಾಪ್ಟರ್ ಹೋಗಲ್ಲ ಎಂದರು.
82 ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆ, 731 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ
56 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ.
ಇಂದು ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ನಾಮಕರಣ ಮಾಡಿದ್ದೇವೆ.
ಚೆನ್ನಮ್ಮನವರು 1857 ರ ಸಿಪಾಯಿ ದಂಗೆಗೂ ಮುನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಚೆನ್ನಮ್ಮ ಬ್ರಿಟಿಷರ ವಿರುದ್ದ ಛಲದಿಂದ ಹೋರಾಟ ಮಾಡಿ ಥ್ಯಾಕರೆಯನ್ನು ಸೋಲಿಸಿದ್ದರು.
ನಂತರ ಎರಡನೇ ಯುದ್ದದಲ್ಲಿ ಚೆನ್ನಮ್ಮ ಸೋತರರು. ಅದಕ್ಕೆ ಕಾರಣ ನಮ್ಮವರೇ.
ಇನ್ನೂರು ವರ್ಷಗಳ ಕಾಲ ಬ್ರಿಟಿಷರು ನಮ್ಮನ್ನಾಳಲು ನಮ್ಮವರನ್ನೇ ಅಧೀನರನ್ನಾಗಿ ಮಾಡಿಕೊಂಡು ಆಳಿದರು.
ಚೆನ್ನಮ್ಮನ ವಿಚಾರದಲ್ಲಿಯೂ ನಮ್ಮವರೇ ಅವರ ಸೋಲಿಗೆ ಕಾರಣರಾದರು ಎಂದರು.
ಅತ್ಯಂತ ಸಂತೋಷದಿಂದ ಚೆನ್ನಮ್ಮರ ಮೂರ್ತಿ ಅನಾವರಣ ಮಾಡಿದ್ದೇವೆ.
ಜಿಲ್ಲೆಯಲ್ಲಿ ವೆಲೋಡ್ರಮ್ ಲೋಕಾರ್ಪಣೆ ಮಾಡಿದ್ದೇವೆ.
ಈ ಭಾಗದಲ್ಲಿ ಸೈಕ್ಲಿಸ್ಟ್ ಗಳು ಹೆಚ್ಚು.
ಹಿಂದೆ 2013 -18 ರಲ್ಲಿ ಸಿಎಂ ಆಗಿದ್ದಾಗ ವೆಲೋಡ್ರಮ್ ಗೆ ಶಿಲಾನ್ಯಾಸ ಮಾಡಿದ್ದೇವೆ.
ಇಂದು ವೆಲೋಡ್ರಮ್ ಉದ್ಘಾಟನೆ ನಾವೇ ಮಾಡಿದ್ದೇವೆ ಎಂದು ಹೇಳಿದರು.
ಇದು ಯತ್ನಾಳ ಕ್ಷೇತ್ರವೆಂದು ಗೊತ್ತು.
ಇಲ್ಲಿ ಯತ್ನಾಳ ಅಭಿಮಾನಿಗಳು ಇದ್ದಾರೆ. ನೀವು ನಮ್ಮ ಅಭಿಮಾನಿಗಳೂ ಕೂಡಾ.
ನಿಮ್ಮಿಂದಲೇ ಕಳೆದ ಚುನಾವನೆಯಲ್ಲಿ 136 ಸ್ಥಾನ ಗೆದ್ದಿದ್ದು, ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ.
ಅದರಿಂದಲೇ ನಾವು ಸರ್ಕಾರ ಮಾಡಲು ಸಾಧ್ಯವಾಗಿದೆ. 136 ಸ್ಥಾನ ಗೆಲ್ಲಲು ನಿಮ್ಮ ಆಶಿರ್ವಾದ ಕಾರಣ ಎಂದು ತಿಳಿಸಿದರು.
45 ವರ್ಷಗಳಿಂದ ರಾಜ್ಯ ಸುತ್ತಾಡುತ್ತಿದ್ದೇನೆ. ಹಲವಾರು ಬಾರಿ ವಿಜಯಪುರಕ್ಕೆ ಬಂದಿದ್ದೇನೆ. ಬಂದಾಗ ನೀವು ಆಶಿರ್ವಾದ ಮಾಡಿದ್ದೀರಿ.
ಇಂದು ಯತ್ನಾಳ ಹಲವಾರು ಬೇಡಿಕೆಗಳನ್ನು ನೀಡಿದ್ದಾರೆ.
ನಗರದಲ್ಲಿ ಮೇಲ್ಸೇತುವೆಗೆ 162 ಕೋಟಿ ಹಣ ಕೇಳಿದ್ದಾರೆ. ಅದನ್ನು ಮಾಡಿಕೊಡುತ್ತೇನೆಂದು ಸಿದ್ಧರಾಮಯ್ಯ ಘೋಷಣೆ ಮಾಡಿದರು.
ಕನಕದಾಸ ವೃತ್ತದಿಂದ ಶಿವಾಜಿ ಚೌಕ್ ವರೆಗೂ ಮೇಲ್ಸೇತುವೆ ಮಾಡುತ್ತೇನೆ ಎಂದೂ ಹೇಳಿದರು.
7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ಅರಸು ಅವರಿಗಿಂತ ಹೆಚ್ಚು ಕಾಲ ನಾನು ಸಿಎಂ ಆಗಿದ್ದೇನೆ.
ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಖರ್ಗೆ ಅವರ ಆಶೀರ್ವಾದ ಕಾರಣ. ಹೆಚ್ಚು ಕಾಲ ಸಿಎಂ ಆಗಲು ಜನರು ಕಾರಣ. ಅದಕ್ಕಾಗಿ ಎಲ್ಲ ಜನರಿಗೆ ಅಭಿನಂದಿಸುತ್ತೇನೆ ಎಂದರು.
ಜಿಲ್ಲೆಯ ಸಚಿವ ಎಂ.ಬಿ. ಪಾಟೀಲ ಹಾಗೂ ಇತರರು ನನಗೆ ಸನ್ಮಾನ ಮಾಡಿದ್ದಾರೆ. ಕಾರಣ ಅವರನ್ನೂ ಅಭಿನಂದಿಸುವೆ
ತಡವಾಗಿ ಬಂದ ಕಾರಣ ತಪ್ಪಾಗಿದೆ ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ: ಸಿದ್ದರಾಮಯ್ಯ ಘೋಷಣೆ


