ಸಪ್ತಸಾಗರ ವಾರ್ತೆ, ವಿಜಯಪುರ, ಜ. 14: ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಕ್ರಮಣದ ಮಹೋತ್ಸವ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಸಂಕ್ರಮಣ ಎಂದರೆ ಕೂಡಿ ಬಾಳುವುದು ಎಂದರ್ಥ ಇಂದು ಎಳ್ಳು ಬೆಲ್ಲ ವಿತರಣೆಯೊಂದಿಗೆ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವ ಶ್ರೀ ಸಿದ್ಧೇಶ್ವರ ಜಾತ್ರೆಯ ವಿಶಿಷ್ಠ ಕಾರ್ಯಕ್ರಮವಾದ “ಹೋಮ ಹವನ” ದೇವಾಲಯದ ಆವರಣದ ಮುಂದೆ ಶ್ರೀ ಸಿದ್ಧೇಶ್ವರ ಸಂಸ್ಥೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಇವರ ನೇತೃತ್ವದಲ್ಲಿ ಮಧ್ಯಾಹ್ನ ೧೨-೪೫ ಗಂಟೆಗೆ ಸಹಸ್ರಾರು ಭಕ್ತಾಧಿಗಳ ಮಧ್ಯೆ “ಹೋಮ ಹವನ” ಭಕ್ತಿ ಶ್ರದ್ಧೆಗಳಿಂದ ಮನಸೆಳೆಯಿತು ಶುದ್ದೋದಕರಿಂದ ಶುಚಿಗೊಳಿಸಿದ ಹೋಮ ಕಟ್ಟೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳಿಂದ ಸಿಂಗಾರಗೊAಡಿತ್ತು ಆರ್ಘ್ಯ, ಪಾದ್ಯ ಆಚಮನಗಳೊಂದಿಗೆ ಅಭಿಷೇಕ ಸಲ್ಲಿಸಲಾಯಿತು.
ಚಂದನದ ಕಟ್ಟಿಗೆ ಎಳ್ಳುಧಾನ್ಯಗಳಿಂದ ಕೂಡಿದ ಕಟ್ಟೆಯ ಮೇಲೆ ಹಾವೇರಿ ಜಿಲ್ಲೆಯ ಪಕಿರಯ್ಯಾ ಶಾಸ್ತ್ರಿಗಳು, ಸಿದ್ಧರಾಮಯ್ಯಾಶಾಸ್ತ್ರೀಗಳು, ಬಸಯ್ಯಾಶಾಸ್ತ್ರೀಗಳು, ಬೂದಯ್ಯ ಹಿರೇಮಠ, ಷಢಕ್ಷರಯ್ಯ ಹಿರೇಮಠ, ನೇತೃತ್ವದಲ್ಲಿ ಹೋಮ ಹವನ ಕಾರ್ಯಕ್ರಮ ನೆರೆವೆರಿಯಿತು. ನಂತರ ನಗರ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿ ಹಾಗೂ ಪಡಿನಂದಿಕೋಲ ಮೆರವಣಿಗೆ ಜರುಗಿತು.
ಸಂಸ್ಥೆಯ ಉಪಾಧ್ಯಕ್ಷರಾದ ಸಂ. ಗು. ಸಜ್ಜನ, ಚೇರಮನ್ರಾದ ಬಸಯ್ಯಾ ಎಸ್. ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ ಜಂಟಿ ಕಾರ್ಯದರ್ಶಿ, ಎಂ.ಎA. ಸಜ್ಜನ ಕೋಶ್ಯಾಧ್ಯಕ್ಷರಾದ ಶಿವಾನಂದ ನೀಲಾ ಜಾತ್ರಾ ಸಮಿತಿಯ ಗುರು ಎಸ್. ಗಚ್ಚಿನಮಠ, ಎಸ್.ಎಚ್.ನಾಡಗೌಡ, ಡಾ ಸುನೀಲ ಉಕಮನಾಳ, ಎಮ್.ಎಸ್.ರುದ್ರಗೌಡರ, ಸಾಯಿಬಣ್ಣ ಭೂವಿ, ನಾಗಪ್ಪ ಗುಗ್ಗರಿ, ಉಮಾಕಾಂತ ವಣರೊಟ್ಟಿ, ಬಸವರಾಜ ಕೋರಿ, ಸುಧೀರ ಚಿಂಚಲಿ, ರಾಜಶೇಖರ ಮಗಿಮಠ, ರಾಹುಲ ಜಾಧವ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ಎಸ್.ಎಂ.ಪಾಟೀಲ ಬಬಲಾದಿ, ರಮೇಶ ಹಳ್ಳದ, ಶ್ರೀಮಂತ ಜಂಬಗಿ, ಎಮ್.ಎಸ್. ಕರಡಿ, ಸಂತೋಷಕುಮಾರ ತಳಕೇರಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಹಾದೇವ ಜಂಗಮಶೇಟ್ಟಿ, ಅಮೃತ ತೋಶ್ನಿವಾಲ, ಮಲಕಪ್ಪಣ್ಣ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಬಸವರಾಜ ಬಿರಾದಾರ, ಅನೀಲ ಸಬರದ, ಮಹಾದೇವ ಜಂಗಮಶೆಟ್ಟಿ. ಶ್ರೀಶೈಲ ದೇವರ, ಉಮೇಶ ಕೋರಿ, ಪ್ರವೀಣ ಬಿಜ್ಜರಗಿ, ವಿಶಾಲ ಧಾರವಾಡಕರ, ಸೋಮಶೇಖರ ವಾಲಿ, ಪ್ರಶಾಂತ ಚೌಧರಿ, ವಿರೇಶ ವಾಲಿ, ದತ್ತಾ ಗೊಲಾಂಡೆ, ಚಂದ್ರು ಚೌಧರಿ, ಸಾಹೇಬಗೌಡ ಬಸರಕೋಡ, ಈರಣ್ಣ ಹಿಪ್ಪರಗಿ, ಶಂಕರ ಬನ್ನೂರ, ಚನ್ನಪ್ಪ ಡಮಾಗಾರ, ಚಂದ್ರಕಾAತ ವಂದಾಲ, ಆನಂದಗೌಡ ಪಾಟೀಲ, ಅರವಿಂದ ಜಿರಲಿಮಠ, ಶ್ರೀಕಾಂತ ಸಂಗೋಗಿ, ಈರಣ್ಣ ಪಾಟೀಲ, ವೀರೇಶ ಮುದಕಾಮಠ, ಸಿದ್ದಯ್ಯ ಹಿರೇಮಠ, ಈರಯ್ಯ ಗಣಕುಮಾರಮಠ, ಶಿವಾನಂದಯ್ಯ ಹಿರೇಮಠ ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು.
ಅರುಣ ಹುಂಡೇಕಾರ ಇವರಿಂದ ಸರ್ವ ಭಕ್ತಾಧಿಗಳಿಗೆ ಪ್ರಸಾದ ಸೇವೆ ನೇರೆವೆರಿತು.
ಮಕರ ಸಂಕ್ರಮಣ: ಹೋಮ ಹವನಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ


