ವೀರರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ ಪ್ರದರ್ಶಿನಿ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25:
ವಿದ್ಯಾರ್ಥಿಗಳಿಗೆ ಸಮಸ್ಯೆ ಬಂದಾಗ ಹಲವಾರು ಕಡೆ ಎಬಿವಿಪಿ ಹೋರಾಟಗಳನ್ನು ನಿರ್ಮಿಸಿ ಪರಿಹಾರ ಹುಡುಕಿಕೊಟ್ಟಿದೆ ಎಂದು ಸಿದ್ದೇಶ್ವರ ಆಶ್ರಮದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮೀಜಿಗಳು ಪ್ರಶಂಸಿಸಿದರು.
ಎಬಿವಿಪಿಯ 45 ನೇ ಪ್ರಾಂತ ಸಮ್ಮೇಳನದ ವೀರರಾಣಿ ಅಬ್ಬಕ್ಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರದರ್ಶಿನಿಯನ್ನು ಸಿದ್ದೇಶ್ವರ ಆಶ್ರಮದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮೀಜಿಗಳು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಮಸ್ಯೆ ಬಂದಾಗ ಹಲವಾರು ಕಡೆ ಎಬಿವಿಪಿ ಹೋರಾಟಗಳನ್ನು ನಿರ್ಮಿಸಿ ಪರಿಹಾರ ಹುಡುಕಿಕೊಟ್ಟ ನಿದರ್ಶನಗಳನ್ನು ನಾನು ಸ್ವತ ಕೇಳಿದ್ದೇನೆ. ಅಂತಹ ಉತ್ತಮ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ ಎಂದರು.
ಸಿದ್ದೇಶ್ವರ ಸ್ವಾಮೀಜಿಗಳ ನಾಡಿನಲ್ಲಿ ಸಮ್ಮೇಳನ ಮಾಡುತ್ತಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರಡ್ಡಿ,ರಾಜ್ಯ ಸಹ ಕಾರ್ಯದರ್ಶಿ ಸುಜ್ಞತಾ ಕುಲಕರ್ಣಿ ಉಪಸ್ಥಿತರಿದ್ದರು.
ಪ್ರದರ್ಶಿನಿಯ ವಿಶೇಷತೆ
ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವಿಜಯೋತ್ಸವ ಹಾಗೂ ರಾಣಿ ಅಬ್ಬಕ್ಕ ಅವರ 500 ನೇ ಜಯಂತೋತ್ಸವ ಅಂಗವಾಗಿ ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದಲ್ಲಿ ನಡೆದ ರಥಯಾತ್ರೆ ಕುರಿತು, ರಾಜ್ಯದ ಶಾಖೆಗಳಲ್ಲಿ ನಡೆದ ಕಾರ್ಯಕ್ರಮ ಹಾಗೂ ಹೋರಾಟಗಳ ಕುರಿತು, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ಹಿನ್ನಲೆ ಪಂಚ ಪರಿವರ್ತನೆ ಕುರಿತು ಸಂವಿಧಾನಕ್ಕೆ 75 ಕುರಿತು, ವಂದೇ ಮಾತರಂಗೆ 150 ವರ್ಷದ ಕುರಿತು ಹಾಗೂ ಸರ್ದಾರ್ ವಲ್ಲಬಾಯಿ ಪಟೇಲರ ಕುರಿತು ಪ್ರದರ್ಶನ ಮಾಡಲಾಯಿತು.
ಪ್ರಾಂತ ಸಮ್ಮೇಳನದ ಧ್ವಜಾರೋಹಣವನ್ನು ರಾಜ್ಯ ಅಧ್ಯಕ್ಷ ಡಾ. ಆನಂದ ಹೊಸೂರ, ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಅವರು ನೆರವೇರಿಸಿದರು.
ಕರ್ನಾಟಕ ಉತ್ತರ ಪ್ರಾಂತದಲ್ಲಿ ಕಳೆದ 2025 ರಲ್ಲಿ ನಡೆದ ಕಾರ್ಯಕ್ರಮ, ಹೋರಾಟ ಹಾಗೂ ವಿವಿಧ ಚಟುವಟಿಕೆಗಳ ಕುರಿತು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ವರದಿ ನೀಡಿದರು. ರಾಜ್ಯದಲ್ಲಿ ಈ ವರ್ಷ 03,03,786 ಸದಸ್ಯತ್ವವನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳು, ಕುರಿತು ವರದಿಯನ್ನು ನೀಡಿದರು.
ವಿಜಯಪುರದಲ್ಲಿ ಎಬಿವಿಪಿ 45ನೇ ಉತ್ತರ ಪ್ರಾಂತ ಸಮ್ಮೇಳನ.
ರಾಷ್ಟ್ರೀಯತೆ, ಕೌಶಲ್ಯ ಮತ್ತು ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿ ಡಾ. ಭಟ್ಟು ಸತ್ಯನಾರಾಯಣ
ವಿಜಯಪುರ :ಯುವಕರು ಹೊಸ ಕೌಶಲ್ಯದೊಂದಿಗೆ ತಂತ್ರಜ್ಞಾನ ಸಹಾಯದಿಂದ ದೇಶದ ಅಭಿವೃದ್ಧಿಗೆ ಶ್ರಮಿಸಿ, ವಿಕಸಿತ ಭಾರತದ ಕನಸು ಸಾಧ್ಯವಾಗುವುದು ಎಂದು ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಟ್ಟು ಸತ್ಯನಾರಾಯಣ ನುಡಿದರು.
ಅವರು ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45 ನೇ ಕರ್ನಾಟಕ ಉತ್ತರ ಪ್ರಾಂತ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಸೃಜನಶೀಲ ಚಿಂತನೆಗಳು ಬೆಳವಣಿಗೆಯಾಗಿ ರಾಷ್ಟ್ರೀಯ ವಿಚಾರಗಳಿಂದ ಉತ್ತಮ ನಾಗರಿಕರಾಗುವರು, ಐಐಟಿ,ಎನ್‌ಐಟಿ ಗಳಿಂದ ಹೊರಬರುವ ಯುವಕರು ನವೋದ್ಯಮ ಪ್ರಾರಂಭಿಸಿ ನಿರುದ್ಯೋಗ ಸಮಸ್ಯೆಗಳನ್ನು ಕಡಿಮೆ ಮಾಡಲು ಸಲಹೆ ನೀಡಿದರು,
ಇನ್ನೋರ್ವ ಅತಿಥಿಗಳಾದ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಅಶೀಶ್ ಚವ್ಹಾಣ ಅವರು ಭಾರತ ದೇಶಕ್ಕೆ ಅಪೂರ್ವವಾದ ಇತಿಹಾಸವಿದೆ. ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ನೌಕಯಾನ ಸೇರಿದಂತೆ ಹಲವಾರು ವಿಜ್ಞಾನ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದರು. ಎಲ್ಲ ಕ್ಷೇತ್ರಗಳಲ್ಲಿ ಅಪೂರ್ವವಾದ ಜ್ಞಾನವನ್ನು ನಮಗೆ ನೀಡಿ ಹೋಗಿದ್ದಾರೆ .ಅದನ್ನು ಪುನರ್ ಅಧ್ಯಯನ ಮಾಡುವುದು ಮುಖ್ಯ ಎಂದು ಹೇಳಿದರು.
ದೇಶದಲ್ಲಿ ಕಳೆದ ಏಳೆಂಟು ದಶಕಗಳಲ್ಲಿ ವಿದ್ಯಾರ್ಥಿ ಚಳವಳಿಗಳು ನಡೆದು ಬಂದ ದಾರಿಯನ್ನು ವಿಶ್ಲೇಷಿಸುತ್ತಾ ಅಭಾವಿಪ ವಿದ್ಯಾರ್ಥಿಗಳು ದೇಶದ ಹಿತ ಬಂದಾಗ ತಕ್ಷಣ ಸ್ಪಂದಿಸುವ ಸ್ವಭಾವದವರು ಎಂದು ಹೇಳಿದರು.
ಕರ್ನಾಟಕ ಉತ್ತರ ಪ್ರಾಂತದ ನೂತನ ಅಧ್ಯಕ್ಷ ಡಾ. ಬಸವರಾಜ ಕುಬಕಡ್ಡಿ ಅವರು, ವಿದ್ಯಾರ್ಥಿಗಳು ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ,ಜ.24-26 ರ ವರೆಗೆ ಆಯೋಜಿಸಿದ ಮೂರು ದಿನಗಳ ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವಿಶ್ವವಿದ್ಯಾಲಯಗಳ ಸ್ಥಿತಿಗತಿ ಕುರಿತು ಚಿಂತನೆ ಮಾಡಿ ಶಿಕ್ಷಣ ವ್ಯಾಪಾರಿಕರಣವಾಗಬಾರದು. ಅದೊಂದು ಸೇವಾ ಕ್ಷೇತ್ರವಾಗಬೇಕೆಂದು ಹೇಳಿದರು. ಎನ್ ಇಪಿ ಮತ್ತು
ಎಸ್ ಇಪಿ ಮದ್ಯ ಗೊಂದಲ ಸೃಷ್ಟಿಗೆ ಆಸ್ಪದ ನೀಡಬಾರದು ಎಂದು ಹೇಳಿದರು. ನೂತನವಾಗಿ ಆಯ್ಕೆಯಾದ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ದರ್ಶನ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುತ್ತಾ ಶೈಕ್ಷಣಿಕ ನೂನ್ಯತೆಗಳನ್ನು ಸರಿಪಡಿಸುವಂತೆ ಶ್ರಮಿಸಬೇಕು. ಪರಿಸರ, ಕಲೆ, ವಿಜ್ಞಾನ ಹೀಗೆ ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ದೇಶವನ್ನು ವಿಶ್ವಗುರು ಆಗಿಸುವತ್ತ ಪ್ರಯತ್ನಿಸಬೇಕು ಎಂದು ಹೇಳಿದರು.
ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಡಾ. ಸುಮಾ ಬೋಳರಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ವಿಕಾಸ ದರಬಾರ ಅವರು ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಮಿಗಳಾದ ರಾಜು ಬಿಜ್ಜರಗಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಉತ್ತರ ಪ್ರಾಂತ ಪ್ರಚಾರಕ ನರೇಂದ್ರ ಜಿ,
ಮಾಜಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಬಸವರಾಜ ಯಾದವಾಡ, ವೀರೇಶ ಬಾಳಿಕಾಯಿ, ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ ಡಾಂಗೆ,ಹೆಚ್ ವೆಂಕಟೇಶ, ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಸಚಿನ ಕುಳಗೇರಿ, ಎಸ್ ಎಸ್ ಡೊಂಗರಗಾಂವ, ಉಮೇಶ ಕಾರಜೋಳ, ಡಾ. ಅರವಿಂದ ಪಾಟೀಲ, ಶಾಂತೇಶ ಕಳಸಗೊಂಡ, ಶ್ರೀದೇವಿ ಕಾರಜೋಳ, ಗೋವಿಂದ ಜೋಶಿ, ಶೀಲಾ ಬಿರಾದಾರ, ಅಧ್ಯಾಪಕರುಗಳು ಹಾಗೂ ನೂರಾರು ವಿದ್ಯಾರ್ಥಿ ಕಾರ್ಯಕರ್ತರು ಉಪಸ್ಥಿತರಿದ್ದರು.

Share this