ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆ ಯೋಗ ಶಿಕ್ಷಕ ಅಂತರಾಷ್ಟ್ರೀಯ ಮಟ್ಟದ ಸಾಧನೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಜ. 27:
ವರ್ಡ್ ಯೋಗಾ ಮತ್ತು ಸ್ಪೋರ್ಟ್ಸ್ ಎಜ್ಯುಕೇಶನ ಇಂಡೋ ಮಲೆಶೀಯಾ ವತಿಯಿಂದ ಏರ್ಪಡಿಸಿದ ಯೋಗಾ ಚಾಂಪಿಯನಶಿಪ್‌ನಲ್ಲಿ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಯೋಗ ಶಿಕ್ಷಕ ಪ್ರಕಾಶ ಚವ್ಹಾಣ ಅವರು ಮಲೇಶಿಯಾದ ಕೌಲಾಲಂಪುರ್‌ದಲ್ಲಿ ನಡೆದ ಅಂತರರಾಷ್ಟ್ರೀಯ ಇಂಡೋ ಮಲೇಶಿಯಾ ಯೋಗಾ ಚಾಂಪಿಯನಶಿಪ್‌ನಲ್ಲಿ ಸ್ಪರ್ಧಿಸಿ 3 ವಿಭಾಗಗಳಲ್ಲಿ 1, ರ‍್ಟಿಸ್ಟಿಕ್ ಯೋಗಾ ಚಾಂಪಿಯನಶಿಪ್ 2. ರಿದಮಿಕ್ ಯೋಗಾ ಚಾಂಪಿಯನಶಿಪ್, 3 ಟ್ರೇಡಿಶನಲ್ ಯೋಗಾ ಚಾಂಪಿಯನಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ನಮ್ಮ ಶಾಲೆಯ ಹಾಗೂ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಈ ಸಾಧನೆಯನ್ನು ಮೆಚ್ಚಿ ನಮ್ಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ .ಎನ್. ಕೆಲೂರ, ಮುಖ್ಯ ಗುರುಗಳಾದ ತುಳಜಾರಾಮ ಸುಕ್ತೆ, ಶ್ರೀಶೈಲ ಹೆಗಳಾಡಿ ಹಾಗೂ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿವೃಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share this