ವಿಕಸಿತ ಭಾರತಕ್ಕಾಗಿ ತಪ್ಪದೇ ಮತದಾನ‌ ಮಾಡಿ: ಡಾ ಔದ್ರಾಮ, ಅಪರ ಜಿಲ್ಲಾಧಿಕಾರಿಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜ. 29: ಪ್ರತಿಯೊಂದು ಮತದಾನ ದೇಶಕಟ್ಟುವ ಮಹಾತ್ ಕಾರ್ಯಕ್ಕೆ ಮುನ್ನುಡಿ ಎಂದು
ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರು ತಿಳಿಸಿದ್ದಾರೆ.
ಭಾರತ ಸರ್ಕಾರದ ಮೇರಾ ಯುವ ಭಾರತ ಕೇಂದ್ರ, ಜಿಲ್ಲಾಡಳಿತ, ಕೇಂದ್ರ ಸಂವಹನ ಇಲಾಖೆ, ಬಿ ಎಲ್‌ ಡಿ ಇ ಎ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯ, ಎನ್‌ಎಸ್‌ಎಸ್‌ ಘಟಕ, ಭಾರತ ಸೇವಾ ದಳ, ರೆಡ್‌ ಕ್ರಾಸ್‌ ಘಟಕ, ವಿಜಯಪುರ ಮತ್ತು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕ್ರತಿಕ ಕ್ರೀಡಾ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿ ಸಂಸ್ಥೆ,(ಪರಿಶಿಷ್ಟ ಜಾತಿ),ನಾಗಾಠಾಣ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ ಎಲ್‌ ಡಿ ಇ ಎ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರ ದಿನಾಚರಣೆಯ ಉದ್ದೇಶ, ನಮ್ಮ‌ ಹಕ್ಕು‌ ಮತ್ತು ಕರ್ತವ್ಯವನ್ನು ನೆನಪಿಸುವ ಸದುದ್ದೇಶ ಹೊಂದಿದೆ. ಮತದಾನವು ಬದಲಾವಣೆಗೆ ನಾಂದಿಯಾಗಲಿದೆ. ಸಂವಿಧಾನಾತ್ಮವಾಗಿ ನಮಗೆ ಸಿಕ್ಕಿರುವ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ದೇಶ ಸೇವೆ ಮಾಡುವ ಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಈ ಮೂಲಕ ವಿಕಸಿತ ಭರತದ ಪಯಣಕ್ಕೆ ಸಹಕರಿಸಬೇಕು ಎಂದರು.
ಯುವಕರು ರೀಲ್ಸ್ ಮಾಡುವ ಗೀಳಿನಿಂದ ಹೊರ ಬರಬೇಕು.
ಚಿಕ್ಕವಯಸ್ಸಿನಲ್ಲೇ ಮತದಾನ ಮಹತ್ವವನ್ನು ತಿಳಿಸುವುದು ಇಂದಿನ ಅದ್ಯತೆಯಾಗ ಬೇಕು ಎಂದರು.
ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಸಮೂಹದಿಂದ ರಾಷ್ಟ್ರವನ್ನು ಕಟ್ಟಬಹುದಾಗಿದೆ. ಹಾಗಾಗಿ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.
18 ವರ್ಷ ತುಂಬಿದವರು ಸೂಕ್ತ ದಾಖಲೆಗಳೊಂದಿಗೆ ಚುನಾವಣಾ ಆಯೋಗದ ವೆಬ್ ಸೈಟ್ ಮೂಲಕ ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಚುನಾವಣಾ ಸಾಕ್ಷಾರತ ಕ್ಲಬ್ ಗಳ ಮೂಲಕವು ಸಹ ಮತದಾರ ಪಟ್ಟಿಯನ್ನು ಸೇರಿಕೊಳ್ಳಬೇಕು‌ ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಮತದಾನ ಮಾಡುವ ಹಕ್ಕು ಪಡೆದವರನ್ನು ಸನ್ಮಾನಿಸಲಾಯಿತು. ತದನಂತರ ಮತದಾರರ ದಿನದ ಅಂಗವಾಗಿ ಬೃಹತ್ ಪಾದಯಾತ್ರೆಗೆ ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ್‌ ಅವರು ಚಾಲನೆ ನೀಡಲಿದ್ದಾರೆ.
ಬಿ ಎಲ್‌ ಡಿ ಇ ಎ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯದಿಂದ ಪ್ರಾರಂಭವಾದ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಿಕ್ಷಣಾರ್ಥಿಗಳು ಹೆಜ್ಜೆ ಹಾಕಿದರು. ಪಾದಯಾತ್ರೆ ನಗರದ ಪ್ರಮುಖ ಜನ ನಿಬಿಡ ಸ್ಥಳಗಳ ಮೂಲಕ ಸಾಗಿ ಗಾಂಧಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಗಾಂಧಿ ವೃತ್ತದಲ್ಲಿ ಅಪರ‌ ಜಿಲ್ಲಾಧಿಕಾರಿಗಳು ಎಲ್ಲರಿಗೂ ಮತದಾನದ ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಬಿ ಎಲ್‌ ಡಿ ಇ ಎ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಖಾಸ್ನೀಸ್, ಮೈ ಭಾರತ ಕೇಂದ್ರದ ಸುರ್ಜಿತ್ ರೆಡ್ಡಿ
ಕೇಂದ್ರ ಸಂವಹನ‌ ಇಲಾಖೆಯ ಸಿ ಕೆ ಸುರೇಶ್, ಎಸ್ ಯೂ ಜಮಾದಾರ್, ಭಾರತ ಸೇವಾದಳದ ನಾಗೇಶ್ ಡೊಣ್ಣೊರ,ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

Share this