ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿಜಿ ಹುತಾತ್ಮ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 30:
ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹುತಾತ್ಮ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ಶಾಂತಿ-ಅಹಿಂಸಾ ಮಾರ್ಗದಲ್ಲಿ ದೇಶವನ್ನು ದಾಸ್ಯಮುಕ್ತಗೊಳಿಸಲು ತಮ್ಮನ್ನೆ ತಾವು ಸಮರ್ಪಣೆಗೊಳಿಸಿ ಮನುವಾದಿಗಳ ಕುತಂತ್ರಕ್ಕೆ ಬಲಿಯಾಗಿ ಇಂದಿಗೆ 78 ವರ್ಷಗಳು ಕಳೆದ ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಗೌರವವನ್ನು ಸಲ್ಲಿಸಲಾಯತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಾಗಲಾವ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದರ, ಐ.ಎಂ.ಇಂಡೀಕರ, ವಸಂತ ಹೊನಮೊಡೆ, ಸಂತೋಷ ಬಾಲಗಾವಿ, ಅಬ್ದುಲ್ ಪೀರ ಜಮಖಂಡಿ, ಮೈಬೂಬ ಕಲಾದಗಿ, ವಿಜಯಕುಮಾರ ಕಾಳೆ, ಕೃಷ್ಣಾ ಲಮಾಣಿ, ಮಂಜುಳಾ ಗಾಯಕವಾಡ, ಕುಲದೀಪಸಿಂಗ, ಅಶೋಕ ನಾಯ್ಕೋಡಿ, ಸರಿತಾ ನಾಯಕ, ದೀಲಿಪ, ಪ್ರಭಾಕರ, ನಿರು ಚವ್ಹಾಣ, ಬಸವರಾಜ ಬೂದಿಹಾಳ, ಮುಂತಾದವರು ಉಪಸ್ಥಿತರಿದ್ದರು.

Share this