ಸಪ್ತಸಾಗರ ವಾರ್ತೆ, ವಿಜಯಪುರ, ಫೆ.3
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಜನವರಿ 2026ನೇ ಸಾಲಿನ ಪದವಿ, ಸ್ನಾತಕ, ಡಿಪ್ಲೋಮಾ ಹಾಗೂ ಪ್ರಮಾಣಪತ್ರ ಕೋರ್ಸ್‌ಗಳಿಗೆ ಪ್ರವೇಶ ಹಾಗೂ ಮರುಪ್ರವೇಶಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 15 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರಿಯ ನಿರ್ದೇಶಕರು,ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ,ಒಂದನೇ ಮಹಡಿ,ಪ್ಲಾಜಾ-2 ಪ್ರವಾಸೋದ್ಯಮ ಇಲಾಖಾ ಕಟ್ಟಡ ಇವರನ್ನು ದೂ.08352-252006 ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


