ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 4: ಇಂದಿನ ದಿನಮಾನದಲ್ಲಿ ಹಲವಾರು ರೀತಿಯ ಚರಂಡಿ ನೀರು ಮೂಲಗಳಿಂದ ಅಂತರ್ಜಲ ಸೇರಿಕೊಂಡು ಕಲುಷಿತಗೊಂಡಿರುವ ನೀರು ಜನ ಸಮುದಾಯಕ್ಕೆ ಸಿಗುವಂತಾಗಿದೆ.
ಅಂತಹ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ನೀರಿನ ಮೂಲಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿಜಯಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರು ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಆಹೇರಿ, ಐನಾಪುರ, ಅಲಿಯಾಬಾದ, ಗುಣಕಿ, ಹಡಗಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ವಾಟರ್ ಮ್ಯಾನ್ ಗಳು VWSC ಸದಸ್ಯರು, DEO ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ FTK ಕಿಟ್ ಮೂಲಕ ನೀರಿನ ಗುಣಮಟ್ಟವನ್ನು ಪರಿಶೀಲನೆ ಕುರಿತು ಪ್ರಾತ್ಯಕ್ಷಕೆಯಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯದ ವತಿಯಿಂದ ತರಬೇತಿಯ ಕಾರ್ಯಗಾರದಲ್ಲಿ ನೀರಿನ ಪೈಪ್ ಲೈನ್ ಲೀಕೇಜ್ ಗಳನ್ನು ಸರಿಪಡಿಸಿ ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ಪರಿಶೀಲಿಸಬೇಕು. ಜನ ಸಮುದಾಯಕ್ಕೆ ನೀಡುವಂತಹ ಕಾರ್ಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಬೇಕಾಗಿದೆ. ಅದಕ್ಕಾಗಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತರಬೇತಿದಾರರಾದ ಲ್ಯಾಬ್ ಟೆಕ್ನಿಷಿಯನ್ ಲಕ್ಷ್ಮಣ್ ಹೊರವಾಳ ಮತ್ತು ಸೋಮನಾಥ ಚನ್ನಗೊಂಡ ಅವರು ಪ್ರಾತ್ಯಕ್ಷಿಕೆಯಾಗಿ ಎಫ್ಟಿಕೆ ಕಿಟ್ಟುಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಲು ತಿಳಿಸಿದರು.
ಪ್ರತಿಯೊಂದು ಗ್ರಾಮ ಪಂಚಾಯತಿಗಳ ನೀರು ಗಂಟೆಗಳು ಅತ್ಯಂತ ಕಾಳಜಿ ವಹಿಸಿ ನೈರ್ಮಲ್ಯತೆಯನ್ನು ಕಾಪಾಡುವಲ್ಲಿ ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕೆಂದು ತರಬೇತುದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾರ್ಗದರ್ಶಿಗಳು ಮತ್ತು ನೀರು ಗಂಟೆಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ
ತಾಲೂಕು ಪಂಚಾಯಿತಿಯ ವ್ಯವಸ್ಥಾಪಕ ವಿಜಯಕುಮಾರ ಬಿಸಸನಾಳ ಮತ್ತು ಸಹಾಯಕ ನಿರ್ದೇಶಕ (ಉಗ್ರಾ) ಎಸ್. ಆರ್. ಕಟ್ಟಿ ಹಾಗೂ ಎಸ್.ಎಸ್. ಅಳ್ಳಗಿ TPO ತಾಲೂಕ ಐ ಇ ಸಿ ಸಂಯೋಜಕರಾದ ರಾಘವೇಂದ್ರ ಭಜಂತ್ರಿ ಹಾಗೂ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಅಭಿಯಾನ


