ಫೆ. 5ರಂದು ದತ್ತಿ ಉಪನ್ಯಾಸ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 4: ವಿಜಯಪುರ ಹಾಗೂ ಬಂಜಾರಾ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಬಂಜಾರಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಫೆ. 5ರಂದು
ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಪ್ರಾಚಾರ್ಯ ಡಾ. ಜಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸುವರು. ಗೆಜ್ಜಿ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ
ಸುರೇಶ ಗೆಜ್ಜಿ ಅವರು ಸರ್ವಜ್ಞನ ಅನುಭಾವ ಕುರಿತು ಉಪನ್ಯಾಸ ನೀಡುವರು.
ಜಿ. ಶ. ಸಾ. ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮ.ಗು. ಯಾದವಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕರ್ನಾಟಕ ಕಾ.ನಿ.ಪ. ಸಂಘದ ಜಿಲ್ಲಾಧ್ಯಕ್ಷ
ಅಶೋಕ ಯಡಹಳ್ಳಿ ಹಾಗೂ
ಕರ್ನಾಟಕ ಕಾ.ನಿ.ಪ. ಸಂಘ
ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಗುವುದು
ಎಂದು ಜಿಲ್ಲಾ ಶರಣ ಪರಿಷತ್ತಿನ ಯುವ ವೇದಿಕೆ ಅಧ್ಯಕ್ಷ ಅಮರೇಶ ಸಾಲಕ್ಕಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this