ವಿವಿಧ ಕೋರ್ಸುಗಳ ಪ್ರವೇಶಾತಿ : ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.9 :
2025–26ನೇ ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಯದ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ , ಬಿ ಎಸ್ ಡಬ್ಲ್ಯೂ, ಬಿಎಲ್‌ಐಎಸ್‌ಸಿ, ಎಂಎಲ್‌ಐಎಸ್‌ಸಿ,ಎಂ ಎಸ್ಸಿ,
ಎಂಎ, ಎಂಕಾಂ, ಎಂಬಿಎ, ಎಂಎಸ್ಸಿ, ಎಂಸಿಎ, ಎಂಎಸ್‌ಡಬ್ಲ್ಯೂ ಸೇರಿದಂತೆ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಆಸಕ್ತರು, ಈ ವೆಬ್‌ಸೈಟ್‌ನಲ್ಲಿ www.ksoumysuru.ac.in ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದ್ದು,ಈ ಬಗ್ಗೆ
ಹೆಚ್ಚಿನ ಮಾಹಿತಿಗಾಗಿ ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಜಯಪುರ ಪ್ರಾದೇಶಿಕ ಕೇಂದ್ರದ ಸಂಪರ್ಕ ಸಂಖ್ಯೆ 9483920065, 9110256738 ಹಾಗೂ 7892550053 ಸಂಪರ್ಕಿಸಬಹುದಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this