ಡಾ. ಕುಸಾಲ ದಾಸ ಅವರಿಗೆ ಡಾ. ಡಿ. ಕೆ. ಅಗರವಾಲ ಓರಿಯೇಶನ್ ಅವಾರ್ಡ್

ಸಪ್ತಸಾಗರ ವಾರ್ತೆ,ವಿಜಯಪುರ, ಫೆ. 11: ನಗರದ ಪ್ರತಿಷ್ಠಿತ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ ದಾಸ ಅವರಿಗೆ ಡಾ. ಡಿ. ಕೆ. ಅಗರವಾಲ ಓರಿಯೇಶನ್ ಅವಾರ್ಡ್-2026 ಲಭಿಸಿದೆ.
ಫೆ. 5 ರಂದು ಗುರುವಾರ ನವದೆಹಲಿಯ ಜಾಮೀಯಾ ಹಮದರ್ದ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಹೃದಯ ರಕ್ತನಾಳ ವಿಜ್ಞಾನ ಅಕಾಡೆಮಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸರ್ಬಿಯಾದ ಕರಗುಜೆವಿಕ್ ವಿವಿಯ ಶರೀರಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಯುರೋಪ ಅಕಾಡೆಮಿಯ ಆಫ್ ಕಾರ್ಡಿಯಾಲಜಿ ವಿಭಾಗದ ಅಧ್ಯಕ್ಷ ಡಾ. ವ್ಲಾದಿಮಿರ ಜಾಕೊಜೆವಿಕ್ ಪ್ರಶಸ್ತಿ ಪ್ರಧಾನ ಮಾಡಿದರು.
ಡಾ. ಕುಸಾಲ ದಾಸ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ. ಎಂ. ಪಾಟೀಲ, ಹಂಗಾಮಿ ಕುಲಪತಿ ಡಾ. ಅರುಣ ಸಿ. ಇನಾಮದಾರ, ರಜಿಸ್ಚ್ರಾರ ಡಾ. ಆರ್. ವಿ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

Share this