ತಂದೆ ತಾಯಿಗಿಂತ ಮಿಗಿಲಾದ ದೇವರು ಇಲ್ಲ; ಶಿವಬಸವ ಶಿವಾಚಾರ್ಯ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17:
ತಂದೆ ತಾಯಿಗಿಂತ ಮಿಗಿಲಾದ ದೇವರು ಈ ಭೂಮಿಯ ಮೇಲೆ ಇಲ್ಲ, ತಂದೆ ತಾಯಿಗಳೇ ನಿಜವಾದ ದೇವರು ಎಂದು ಶಿವಬಸವ ಶಿವಾಚಾರ್ಯ ಸ್ಚಾಮೀಜಿ ಹೇಳಿದರು.
ತಾಲ್ಲೂಕಿನ ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಪಾಲಕರ ಪಾದ ಪೂಜೆ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಉಪವಾಸ ವನವಾಸ ಇದ್ದು ಮಕ್ಕಳಿಗೆ ಜೋಪಾನ ಮಾಡಿ ಬೆಳೆಸಿದ ತಂದೆ ತಾಯಿಗಳ ಋಣ ತೀರಿಸಬೇಕು. ವಿದ್ಯೆ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಎಂ.ಬಿ. ಪಾಟೀಲ ಪೌಂಡೇಶನ್ ಕಾರ್ಯದರ್ಶಿ ಯಾಕೂಬ ಜತ್ತಿ ಮಾತನಾಡಿ, ತಂದೆ, ತಾಯಿ, ಸಹೋದರತ್ವ ಭಾವ ಮರೆತು ನಡೆಯುವ ಇಂದಿನ ಕಾಲದಲ್ಲಿ ಮಕ್ಕಳಿಗೆ ತಂದೆ ತಾಯಿಯ ಪಾದ ಪೂಜೆ ಮಾಡುವ ಮೂಲಕ ಉತ್ತಮ ಸಂಸ್ಕೃತಿ ಬೆಳೆಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಭಜಂತ್ರಿ ಮಾತನಾಡಿ, ಮಾನವೀಯ ಮೌಲ್ಯಗಳು ಕಡಿಮೆಯಾಗುವ ಈ ಕಾಲ ಘಟ್ಟದಲ್ಲಿ ತಂದೆ ತಾಯಿಗಳ ಮೇಲೆ ಪ್ರೀತಿ ಹೆಚ್ಚಿಸುವ ಪಾದ ಪೂಜೆ, ಗುರುಗಳಿಗೆ ನಮಿಸುವ ಗುರುವಂದನಾ ಕಾರ್ಯಕ್ರಮ ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕುವ ವಸ್ತು ಪ್ರದರ್ಶನವು ಮಕ್ಕಳಲ್ಲಿ ಅಡಗಿರುವ ನೈಜ ಕಲಿಕೆ ಹೆಚ್ಚಳಕ್ಕೆ ಅನೂಕೂಲವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಓ.ಬಿ. ಗದ್ದಿಗಿಮಠ ಮಾತನಾಡಿ, ಗಣಿತ ಮತ್ತು ವಿಜ್ಞಾನ ಎರಡು ಕಣ್ಣುಗಳಿದ್ದಂತೆ. ಗಣಿತ ಲೆಕ್ಕಾಚಾರ ತೋರಿಸಿದರೆ ವಿಜ್ಞಾನ ಸಂಶೋಧನೆ ಆಲೋಚನೆ ತೋರಿಸುತ್ತದೆ. ಮಕ್ಕಳು ತಯಾರಿಸಿದ ಆ ಕಲಿಕೋಪಕರಣದಲ್ಲಿ ಆ ಮಗುವಿನ ಅಂತರಾಳದ ಪ್ರತಿಭೆ ಅಡಗಿರುತ್ತದೆ ಎಂದರು.
ನಿವೃತ್ತ ಶಿಕ್ಷಕ ಎಚ್.ಎಂ.ಸಂಖ ಮಾತನಾಡಿ, ಇಳಿ ವಯಸ್ಸಿನಲ್ಲೂ ಶಾಲೆಯ ಕರ್ತವ್ಯದ ಹಳೆಯ ನೆನೆಪು ಮೆಲುಕು ಹಾಕಿದರು. ತಮ್ಮ ಕೈಯಲ್ಲಿ ಕಲಿತ ಎಲ್ಲ ಹಳೆಯ ವಿಧ್ಯಾರ್ಥಿಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಎಲ್ಲ ಮಕ್ಕಳು ತಮ್ಮ ಪಾಲಕ ಪೋಷಕರಿಗೆ ಪಾದ ಪೂಜೆ ಮಾಡುತ್ತಾ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತೇನೆ ಎಂದು ಪ್ರಮಾಣೀಕರಿಸಿ ನಮಸ್ಕರಿಸಿದರು.
ಈ ಸಂದರ್ಭದಲ್ಲಿ ಸಿಆರ್ ಪಿ ಕೆ.ಎಂ. ಗಳತಗಿ, ಮುಖ್ಯೋಪಾಧ್ಯಾಯ ಅಂಜನಾ ದೇಶಮುಖ, ಎಸ್ಡಿಎಂಸಿ ಅಧ್ಯಕ್ಷ ಪೈಗಂಬರ್ ಜತ್ತಿ, ಮುರುಗೇಶ ಮಠ, ಸಿದರಾಯ ಸಿದ್ದನಾಥ, ಪಿಂಟುಗೌಡ ಪಾಟೀಲ, ಅಪ್ಪಾಸಾಬ ಮಗದರಿ, ಅಂಜನಾ ಪವಾರ, ಭಾರತಿ, ಶಿಲ್ಪಾ ಮುಚ್ಚಂಡಿ, ಸಿದ್ದು ಮುಚ್ಚಂಡಿ, ಗಂಗೂಬಾಯಿ ಜಮಖಂಡಿ, ವೇದ ವ್ಯಾಸ ಇನಾಂದಾರ, ವಿ.ಎಸ್. ಬಿರಾದಾರ, ಡಿ.ಬಿ. ಪಾಂಡೆಗಾಂವಿ, ಚಿಕ್ಕಯ್ಯಾ ಕಾರಾಜಿಣಗಿ, ಸುರೇಶ ಕುಲಕರ್ಣಿ, ಎಸ್‌.ಎಚ್. ಬಂಡಿವಡ್ಡರ, ಸಿ.ವೈ.ಲಂಗೋಟಿ, ಜೆ.ಎ. ಆಯತವಾಡ, ಆರ್.ಎಂ. ನದಾಫ್, ನಾರಾಯಣ ಜಾಧವ, ಶಂಕರ‌ ಖಂಡೇಖರ, ವಿಜಯಕುಮಾರ ಹಿಪ್ಪರಕರ, ಮಹೇಶ ದೊಡಮನಿ, ರೇವಣಸಿದ್ದ ಕೋಟಿಮನಿ, ಕಾಶಿನಾಥ ಮುಚ್ಚಂಡಿ, ಗಾಯತ್ರಿ ಗೌಡನವರ, ಜೆ.ಎ.ಕಲಘಟಗಿ, ಎಸ್.ಡಿ.ಮುಂಜೆ ಇದ್ದರು.
ಎಸ್.ಬಿ.ದುದ್ದಗಿ ಸ್ವಾಗತಿಸಿದರು. ಎನ್.ಆರ್.ಬಾಣಿಕೋಲ ನಿರೂಪಿಸಿದರು. ಎಂ.ಎನ್. ಮದಬಾವಿ ವಂದಿಸಿದರು.

Share this