ಜನಪದರೇ ನಿಜವಾದ ಶರಣತತ್ವ ಪರಿಪಾಲಕರು :- ಪ್ರೊ. ಬಿ.ಎನ್. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21:
12ನೇ ಶತಮಾನದ ನಡೆದ ಸಮಾಜೋಧಾರ್ಮಿಕ ಕ್ರಾಂತಿಯ ನಂತರ ಶರಣರ ಪ್ರಭಾವ ಜನಪದರ ಮೇಲೆ ಅಚ್ಚೊತ್ತಿದಂತಾಗಿದೆ. ಅವರೇ ಶರಣತತ್ವ ಪರಿಪಾಲಕರಾಗಿದ್ದಾರೆ. ಜನಪದರು ತಮ್ಮ ಆಡುಭಾಷೆಯಲ್ಲಿ ಶರಣರ ಬದುಕು, ಧರ್ಮಬೋಧೆ, ನೈತಿಕ ಮೌಲ್ಯಗಳ ಕುರಿತು ಸಾಹಿತ್ಯ ರಚಿಸಿ ಹಾಡಿದ್ದಾರೆ. ಹೀಗೆ ಶಿವಶರಣರು ಜನಪದರ ನುಡಿ ಸಾಹಿತ್ಯದಲ್ಲಿ ಬೆರೆತು ಹೋಗಿದ್ದಾರೆಂದು ಪ್ರೊ.ಬಿ.ಎನ್.ಪಾಟೀಲ (ಇಬ್ರಾಹಿಂಪೂರ) ಹೇಳಿದರು.
ಬಸವೇಶ್ವರ ಸಂಸ್ಥೆಯ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ “ಜನಪದ ಸಾಹಿತ್ಯದಲ್ಲಿ ಶಿವಶರಣರು” ವಿಷಯ ಕುರಿತು ಮಾತನಾಡಿದರು.
ತಾಲ್ಲೂಕ ಶರಣಸಾಹಿತ್ಯ ಪರಿಷತ್ತಿನಡಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಎಸ್.ಟಿ. ಬೋಳರಡ್ಡಿ ಅವರು ಮಾತನಾಡಿ, ಇಂದಿನ ಯುವಕರು ಶರಣರ ವಿಚಾರಧಾರೆಗಳಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ತಾಲ್ಲೂಕಾಧ್ಯಕ್ಷ ಸಾಹೇಬಗೌಡ ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಮೊಬೈಲ್ ಸಂಸ್ಕ್ರತಿಯು ಯುವಕರನ್ನು ಆರೋಗ್ಯವಂತ ಸಮಾಜದಿಂದ ವಿಮುಖರನ್ನಾಗಿ ಮಾಡಿದೆಯೆಂದು ಅಭಿಪ್ರಾಯಪಟ್ಟರು.
ಪಿ.ಆರ್. ಡೋಣೂರ ಸ್ವಾಗತಿಸಿದರು.ದತ್ತಿ ದಾಸೋಹಿಗಳಾದ ಬಸವರಾಜ ಕೆಂಗನಾಳ, ವಿಜಯಕುಮಾರ ಹಲಕುಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಿಂ.ಶರಣಪ್ಪ ಮಂಗಾನವರ, ಲಿಂ.ಬಸಮ್ಮ ಪರಪ್ಪ ಕೆಂಗನಾಳ, ಲಿಂ. ರುದ್ರಮ್ಮ ದಾನಮ್ಮ ಹಲಕುಡೆ ಅವರ ಸ್ಮರಣಾರ್ಥ ನಡೆದ
ಕಾರ್ಯಕ್ರಮದಲ್ಲಿ ವಿ.ಎಂ.ಸಜ್ಜನ, ಶಾರದಾ ಮನಮಿ, ಸುಜಾತಾ ಗೊರನಾಳ, ಬಿ.ಎಸ್.ಮೇತ್ರಿ, ಡಾ.ವಿಜಯಾ, ಸೌಭಾಗ್ಯಾ ಹತ್ತಿ, ಅತ್ತಾರ ಬಾದಶಾ, ಗೌಡಪ್ಪಗೌಡ ಅಂಗಡಗೇರಿ,ಬಸಲಿಂಗಪ್ಪ ಸಾರವಾಡ, ಈರಣ್ಣ ತೊಂಡಿಕಟ್ಟಿ,ಶಿವಯೋಗಿ ಕೆಂಗನಾಳ ಮುಂತಾದವರು ಉಪಸ್ಥಿತರಿದ್ದರು.

Share this