ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 25:
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ವ್ಯಾಜ್ಯ ಮತ್ತು ಇತರೆ ವ್ಯಾಜ್ಯಗಳಲ್ಲಿ ಕಾನೂನು ಸಲಹೆ ನೀಡುವಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾನೂನು ಸಲಹೆಗಾರರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ತಿಳಿಸಿದ್ದಾರೆ.
ವಿವಿಧ ನ್ಯಾಯಾಲಯ ಹಾಗೂ ಇತರ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಜಿಲ್ಲಾಧಿಕಾರಿ ಕಚೇರಿ ಕಾನೂನು ಕೋಶಕ್ಕೆ ಓರ್ವ ಕಾನೂನು ಪದವಿ ಹೊಂದಿ (ಎಲ್.ಎಲ್.ಬಿ) ನಿವೃತ್ತರಾಗಿರುವ ಸಿವಿಲ್ ನ್ಯಾಯಾಧೀಶರನ್ನು,ಕಂದಾಯ ಇಲಾಖೆಯ ನಿವೃತ್ತಿ ಹೊಂದಿರುವ ವಿಶೇಷ ಜಿಲ್ಲಾಧಿಕಾರಿ,ನಿವೃತ್ತಿ ಹೊಂದಿರುವ ತಹಶೀಲ್ದಾರ, ನಿವೃತ್ತರಾಗಿರುವ ಉಪತಹಶೀಲ್ದಾರರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ರ ನಿಯಮ 313(ಬಿ) ರನ್ವಯ ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಸರ್ಕಾರ ನಿಗದಿಪಡಿಸಿರುವ ವೇತನ ಪಾವತಿಸಲಾಗುವುದು.
ಆಸಕ್ತರು ಮಾರ್ಚ್ 14 ರೊಳಗಾಗಿ ಸ್ವ-ವಿವರವುಳ್ಳ ಬಯೋಡಾಟಾವನ್ನು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9482945104 ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


