ಡಾ. ಅಂಬೇಡ್ಕರ್‌ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ. ಔದ್ರಾಮ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 9:
ವಿಜಯಪುರ ಪವಿತ್ರ‌ ಜಿಲ್ಲೆ.‌ ಸಂವಿಧಾನ ಶಿಲ್ಪಿ ಡಾ. ‌ಅಂಬೇಡ್ಕರ್ ಅವರು ನಮ್ಮ‌ ಈ ನೆಲಕ್ಕೆ ಆಗಮಿಸಿ, ಈ ನೆಲವನ್ನು ಪವಿತ್ರಗೊಳಿಸಿದ್ದಾರೆ. ಹಾಗಾಗಿ‌ ರಾಜ್ಯ ಸರ್ಕಾರ ಈ‌ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು‌ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಅಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ಸಂಜೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ‌ ಹಮ್ಮಿಕೊಂಡಿದ್ದ ಭೀಮ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸುವ‌‌ ಮೂಲಕ ಉದ್ಘಾಟಿಸಿ‌ ಅವರು ಮಾತನಾಡಿದರು.
ಈ‌ ಕಾರ್ಯಕ್ರಮದಲ್ಲಿ ಕಲಾವಿದರು‌ ಪ್ರಸ್ತುತ ಪಡಿಸುವ ಭೀಮ ಗೀತೆಗಳ ಗುಚ್ಛ ಕಾರ್ಯಕ್ರಮದ‌ ಮೂಲಕ‌ ಡಾ. ಅಂಬೇಡ್ಕರ್ ಜೀವನ ಹಾಗೂ ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.‌ ಈ ಕಾರ್ಯಕ್ರಮ‌ ಪ್ರಸ್ತುತಿಯೊಂದಿಗೆ‌ ಹರಿದು‌ ಬರಲಿರುವ ಗಾನ ಸುಧೆಯೊಂದಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು‌ ಮತ್ತೆ‌ ಮತ್ತೆ ಸ್ಮರಿಸೋಣ. ಅವರ ಆದರ್ಶದ‌ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಜತೆಗೆ ಆ ಸಂಗೀತದ ಮೂಲಕ ಹೊರಹೊಮ್ಮುವ ಸ್ವರಗಳ‌ನ್ನು ಆಲಿಸುವುದರೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಡಾ.ಔದ್ರಾಮ‌ ಸಲಹೆ‌ ಮಾಡಿದರು.‌
ವೇದಿಕೆಯಲ್ಲಿ ಪಶು ವೈದ್ಯಕೀಯ‌ ಇಲಾಖೆ ಉ‌ಪನಿರ್ದೆಶಕ ಡಾ. ಅಶೋಕ ಘೊಣಸಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ, ಡಾ.‌ಅಂಬೇಡ್ಕರ್ ಅಭಿವೃದ್ಧಿ‌ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಂ. ಎಸ್. ಪಾಟೀಲ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಹಾಯಕ‌ ನಿರ್ದೇಶಕ ಭೋವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ‌ ನಿರ್ದೇಶಕ ಅಮರೇಶ‌ ದೊಡಮನಿ‌, ರಾಜು‌ ಕೂಚಬಾಳ, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಪೀರಪ್ಪ‌ ನಡುವಿನಮನಿ,
ಸುರೇಶ ಘೊಣಸಗಿ, ಭೀಮರಾಯ‌‌ ಜಿಗಜಿಣಗಿ, ಅಡಿವೆಪ್ಪ ಸಾಲಗಲ್, ವಿದ್ಯಾವತಿ ಅಂಕಲಗಿ, ಚನ್ನು‌ ಕಟ್ಟಿಮನಿ ಮತ್ತಿತರರಿದ್ದರು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು
ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ‌ ಡಾ.‌ಅಂಬೇಡ್ಕರ್ ಜೀವನ ಸಾಧನೆ,ಸಮಾನತೆಯ ಹೋರಾಟ,ಅಸ್ಪಶ್ಯತೆ ನಿರ್ಮೂಲನೆ,ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ಕಾರ್ಯಕ್ರಮವನ್ನು ‌ಕಲಾವಿದರು‌ ಪ್ರಸ್ತುತಪಡಿಸಿದರು. ರಂಗಮಂದಿರದಲ್ಲಿ ನಡೆದ ಭೀಮ ಗಾಯನ ಕಾರ್ಯಕ್ರಮವನ್ನು ಸಾರ್ವಜನಿಕರು ಆಸ್ವಾಧಿಸಿದರು.‌
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಕುರಿತ ಸುಮಧುರ ಗೀತ ಗಾಯನ ಮಾಡುವ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆದರು.
ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ‌
ಸಹಾಯಕ‌ ನಿರ್ದೆಶಕ ಸಂತೋಷ ಭೋವಿ‌ ಸಂವಿಧಾನ ಪೀಠಿಕೆ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ‌ ಸಹಾಯಕ‌ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ‌ ಸಹಾಯಕ‌ ನಿರ್ದೇಶಕ ರಾಜಶೇಖರ ದೈವಾಡಿ ನಿರೂಪಿಸಿದರು.

Share this