ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 11 : ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ಸದಸ್ಯರು ನಗರದ ಖಾಸಗಿ ಹೊಟೇಲ್ ಸಭಾ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಭಿನ್ನವಾಗಿ ಮಹಿಳಾ ದಿನಾಚರಣೆ ಆಚರಿಸಿದರು.
ಪಿಎಸ್ ಐ ರೇಣುಕಾ ದಿನ್ನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ವಿಶ್ರಾಂತ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಸಂಘದ ಸಂಸ್ಥಾಪಕಿ ಸುಮಿತ್ರಾ
ಮಾನೆ ಮಾತನಾಡಿ, ರಾಜಮಾತೆ ಅಹಲ್ಯಾಬಾಯಿ ಹೊಳಕರ್ 12 ಜ್ಯೋತಿರ್ಲಿಂಗಗಳನ್ನು ಜೀರ್ಣೋದ್ಧಾರ ಮಾಡಿ ಹಲವಾರು ದೇವಾಲಯಗಳನ್ನು ಅಭಿವೃದ್ಧಿಗೊಳಿಸಿ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಅಂತವರ ಹೆಸರಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸಂಘ ರಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಸಂಗೀತಾ ದಿನ್ನಿ, ಸುಜಾತಾ ಕಳ್ಳಿಮನಿ, ಜಿಪಂ ಮಾಜಿ ಸದಸ್ಯರಾದ ಶಾಂತಾ ನಾಗರಾಳ, ಗೌರಮ್ಮ ಮುತ್ತತ್ತಿ, ಕಾಳಿದಾಸ ಶಿಕ್ಷಣ ಸಂಸ್ಥೆಯ ಸುಜಾತಾ ಜಿದ್ದಿ, ಜ್ಯೋತಿ ರಾಜು ಕುರಿಯವರ, ಭಾರತಿ ಬಿರಾದಾರ, ನೀಲಮ್ಮ ಲಕ್ಷ್ಮಣ ಹಂದ್ರಾಳ, ಮೀನಾಕ್ಷಿ ಮನೂರ್, ಶಾಂತಾ ಹೆರಕಲ್ , ಸಾವಿತ್ರಿ ಕೆಳಗಡೆ, ಶೋಭಾ ರಾಜು ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಕುರುಬ ಸಮಾಜವಿದ್ದರೂ ರಾಜಕೀಯವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಈ ಸಮಾಜದವರು ಮುಂಚೂಣಿಯಲ್ಲಿ ಇಲ್ಲ. ಹಾಗಾಗಿ ನಮ್ಮ ಸಂಘದ ಮಹಿಳೆಯರೆಲ್ಲರೂ ಈ ದಿಸೆಯಲ್ಲಿ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಲು ಈ ಸಂಘ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೇಣುಕಾ ಪೂಜಾರಿ ಸುನಂದಾ ಧನಗೊಂಡ. ಶೈಲಾ ಬಿರಾದಾರ, ರುಕ್ಮಿಣಿ ಕೆಂಭಾವಿ. ಉಮಾ ಪೂಜಾರಿ, ಜಯಶ್ರೀ ಗದ್ದನಕೇರಿ, ರೇಖಾ ಹುಡೇದ, ರೇಖಾ ಸಂಖ, ಪಾರ್ವತಿ ನಾಗರಾಳ, ಶ್ರೀದೇವಿ ಎಮ್ ಯಂಕಂಚಿ, ಸುಜಾತ ಹುಗ್ಗಿ. ವಿಜಯಲಕ್ಷ್ಮಿ ಪೂಜಾರಿ, ಸುಮಿತ್ರಾ ಆಕಳವಾಡಿ, ಯಮುನಾ ಫೈಟನ್. ಶಾರದಾ ರೇವಡಿಗಾರ, ಶರಣಮ್ಮ ಡೋಣಿ, ಸವಿತಾ ಕೆಂಭಾವಿ, ದಾನಮ್ಮ, ರಮ್ಯಾ, ಇಂದಿರಾ ಬಾಡಗಂಡಿ, ಶ್ರುತಿ ಗಿರಗಾವಿ, ಅನಿತಾ ಉಕ್ಕಲಿ, ರೇಣುಕಾ ಅಕ್ಕಿ. ಶೋಭಾ ಆಸಂಗಿ. ಸುನಂದಾ. ಶಾರದಾ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಜಿಲ್ಲಾ ಆಸ್ಪತ್ರೆಯ ಹಿರಿಯ ಆಪ್ತ ಸಮಾಲೋಚಕಿ ಆರತಿ ರವಿ ಕಿತ್ತೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಲಕ್ಷ್ಮಿ ಅಗಸಬಾಳ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ತಳೆವಾಡ ವಂದಿಸಿದರು.
ಸಮಾಜದ ಅಭಿವೃದ್ಧಿಗೆ ಸಂಘದ ಸದಸ್ಯರು ಶ್ರಮಿಸಬೇಕು : ಸುಮಿತ್ರಾ ಮಾನೆ


