ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 18:
ದೇಶ ಕಾಯುವ ಸೈನಿಕರು ಜೈ ಜವಾನ್. ಅನ್ನ ನೀಡುವ ರೈತರು ಜೈ ಕಿಸಾನ್. ಅದೇ ರೀತಿ ದೇಶ ಕಟ್ಟುವ ಶಿಕ್ಷಕರು ಜೈ ಶಿಕ್ಷಕ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಬುಧವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಕಟ್ಟುವುದು ಮತ್ತು ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪಾಲಕರನ್ನು ಹೊರತುಪಡಿಸಿದರೆ ಮಕ್ಕಳು ಶಿಕ್ಷಕರ ಹತ್ತಿರವೇ ಹೆಚ್ಚು ಬೆಳೆಯುತ್ತವೆ. ಹೀಗಾಗಿ ಭಾವಿ ಶಿಕ್ಷಕರಾಗಿ ಹೊರಹೊಮ್ಮುವ ಬಿ.ಎಡ್. ವಿದ್ಯಾರ್ಥಿಗಳು ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ನಿರಂತರ ಶ್ರಮಿಸಬೇಕು. ರಾಜ್ಯದಲ್ಲಿ ಶಿಕ್ಷಣವು ಅತ್ಯುನ್ನತ ಸ್ಥಾನದಲ್ಲಿರಲು ಬಿ.ಎಲ್.ಡಿ.ಇ.ಸಂಸ್ಥೆಯೂ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ.ಸಂಸ್ಥೆಯ ಎಸ್. ಎಸ್. ಅವರಣದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ಮಾತ.ನಾಡಿ, ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು, ಬಯಸಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಉತ್ತಮ ಶಿಸ್ತು, ಆರೋಗ್ಯ, ಪ್ರಯತ್ನ ಮತ್ತು ಕರ್ತವ್ಯಶೀಲ ಗುಣಗಳನ್ನು ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಿ ಬೆಳೆಯಬೇಕು ಎಂದು ಹೇಳಿದರು.
ಬಿ. ಎಲ್.ಡಿ.ಇ.ಸಂಸ್ಥೆಯ ಆಡಳಿತ ಅಧಿಕಾರಿಗಳು ಪ್ರೊ.ವಿ.ಎಸ್. ಬಗಲಿ ಅವರು ಮಾತನಾಡಿ, ಜೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯವು ಶಿಕ್ಷಕರನ್ನು ತಯಾರಿಸುವ ಒಂದು ಅತ್ಯುತ್ತಮ ಕಾರ್ಖಾನೆಯಾಗಿದ್ದು, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಕೌಶಲ್ಯಭರಿತ ಶಿಕ್ಷಕರಾಗಿ ಹೊರಹೋಮ್ಮಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನೀಸ ಅವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಸಹಪಾಧ್ಯಕ್ಷಕ ಡಾ. ಎಂ. ಎಸ್. ಹಿರೇಮಠ, ಡಾ.ಜ್ಯೋತಿ ಪಟ್ಟಣಶೆಟ್ಟಿ, ಡಾ. ಬಿ. ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಡಾ. ಎಸ್. ಪಿ. ಶೇಗುಣಸಿ, ಎಂ. ಪಿ. ಕುಪ್ಪಿ, ಸುರೇಶ ಬಗಲಿ, ಸುಜಾತಾ ದೇಸಾಯಿ, ಎ.ಎಸ್. ಬರಡ್ಡಿ, ವಿದ್ಯಾ ಭಮಗೊಂಡ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರವೀಣ ಹೊಸಮನಿ, ಐಶ್ವರ್ಯ ಜೋಶಿ ಮತ್ತು ಸಂಗಡಿಗರು ಸಂಸ್ಥಾಪನಾ ಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕ ಪಿ.ಡಿ.ಮುಲ್ತಾನಿ ನಿರೂಪಿಸಿದರು. ಎಸ್. ಎಸ್. ಪಾಟೀಲ ಪರಿಚಯಿಸಿದರು. ಮಹಾವಿದ್ಯಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮತ್ತು ಸಹಪ್ರಾಧ್ಯಾಪಕ ಡಾ. ಎಂ. ಬಿ. ಕೋರಿ ವಂದಿಸಿದರು.
ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯ: ಎಸ್ಪಿ ನಿಂಬರಗಿ


