ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 19:
ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದ ಬಗ್ಗೆ ಬಿ ಫಾರಂ ಯಾರಿಗೆ ದೊರೆಯುತ್ತದೆ ಎಂಬುದನ್ನು ತಿಳಿದುಕೊಂಡು ಪ್ರಚಾರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ
ಬಿಜೆಪಿ ಪಕ್ಷದಿಂದ
ದಾವಣಗೆರೆಗೆ ಶ್ರೀನಿವಾಸ ಹಾಗೂ ಬಾಗಲಕೋಟೆಗೆ ವೀರಣ್ಣ ಚರಂತಿಮಠ ಅಭ್ಯರ್ಥಿ ಘೋಷಣೆ ಕುರಿತು ಪ್ರಚಾರದ ಬಗ್ಗೆ ಅವರು ನಗರದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ನಮ್ಮ ಅವಶ್ಯಕತೆ ಕುರಿತು ಚರಂತಿಮಠ ಹೇಳಿದ್ದಾರೆ. ವೀರಣ್ಣ ಚರಂತಿಮಠ ಹಾಗೂ ನಮ್ಮ ಮಧ್ಯೆ ಪರಸ್ಪರ ಉಪಕಾರವಿದೆ. ಸೂಕ್ತ ಸಂದರ್ಭದಲ್ಲಿ ಹೇಗೆಲ್ಲಾ ಬೆಂಬಲ ಮಾಡಬೇಕೆಂದು ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
ದಾವಣಗೆರೆಯ ಒಳ ಚಿತ್ರಣ ಏನೆಂದು ನೋಡುತ್ತೇನೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಬಿ ಫಾರ್ಮ ಯಾರಿಗೆ ಸಿಗುತ್ತದೆ. ಯಾರು ಪಕ್ಷದ ಅಭ್ಯರ್ಥಿಯಾಗುತ್ತಾರೆಂದು ತಿಳಿದ ಬಳಿಕ ತೀರ್ಮಾನಿಸುವೆ ಎಂದು ಯತ್ನಾಳ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಯಾರೆಂದು ಫೈನಲ್ ಆದ ಬಳಿಕ ಬೆಂಬಲಿಸುವ ಕುರಿತು ತೀರ್ಮಾನ ಮಾಡುತ್ತೇನೆಂದು ಯತ್ನಾಳ ಸ್ಪಷ್ಟಪಡಿಸಿದರು.
ಬಾಗಲಕೋಟೆ, ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಸೂಕ್ತ ನಿರ್ಧಾರ:ಯತ್ನಾಳ


