ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 22:
ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ನಾಡಗೀತೆ ಅರ್ಥ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಆರು ಶಾಲೆಯ ಒಂದನೂರ ಮೂವತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿಜೇತರಾಗಿದ್ದರು. ಇವರಿಗೆ ಮಂಡ್ಯದ ಡಾ.ಹರ್ಡಿಕರ್ ಭವನದಲ್ಲಿ ಮಾರ್ಚ್ 11 ರಂದು ನಾಡಗೀತೆ ಆಥ೯ ಬರೆಯುವ ಸ್ಪರ್ಧೆ ವಿಜೇತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಸಾನ್ನಿಧ್ಯವನ್ನು
ಪೂಜ್ಯ ಚೆನ್ನವೀರ ಮಹಾ ಸ್ವಾಮೀಜಿ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿಗಳು, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ವಿಶಾಲ್ ರಘು ಮಾತನಾಡಿ, ಕದಂಬ ಸೈನ್ಯ ಕನಾ೯ಟಕ ರಾಜ್ಯದಲೇ ಪ್ರಥಮ ಬಾರಿಗೆ ಕನ್ನಡ ನಾಡಗೀತೆ ಆಥ೯ ಬರೆಯುವ ಸ್ಪರ್ಧೆ ಏರ್ಪಡಿಸಿ ನೂರಾರು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತೆ ಮಾಡಿದ್ದು ಕನ್ನಡ ನಾಡು ಹೆಮ್ಮೆ ಪಡುವ ವಿಷಯ ಎಂದು ಶ್ಲಾಘಿಸಿದರು. ಅದರಂತೆ
ಡಾ. ಪ್ರದೀಪ್ ಕುಮಾರ್ ಹೆಬ್ರಿ, ಸಾಹಿತಿಗಳು ನಾಡಗೀತೆ ಪರಿಚಯವನ್ನು ಸವಿಸ್ತಾರವಾಗಿ ಮಾಡಿಕೊಟ್ಟರು. ರಾಜ್ಯ ಅಧ್ಯಕ್ಷರು ಬೇಕ್ರಿ ರಮೇಶ್ ಮಾತನಾಡಿ,
ಕದಂಬ ಸೈನ್ಯ ಕನ್ನಡ ಸಂಘಟನೆ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರ ಇತಿಹಾಸ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಪುಸ್ತಕ ಪ್ರಕಟಿಸುತ್ತಿದೆ ಎಂದರು.
ನಾಡಿನ ಚಕ್ರವರ್ತಿಗಳಾದ
ಕದಂಬ ಮಯೂರ ವರ್ಮ, ಕಾಕುತ್ಸವಮ೯, ತಲಕಾಡು ಗಂಗ ಧುವ೯ನೀತ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ, ರಾಷ್ಟ್ರ ಕೂಟ ನೃಪತುಂಗ ಮತ್ತು
ವೀರ ರಾಣಿ ಕಿತ್ತೂರು ಚೆನ್ನಮ್ಮ , ರಾಣಿ ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ರಾಣಿ ಚೆನ್ನಭೈರಾದೇವಿ, ಕನಾ೯ಟಕ ಏಕೀಕರಣಕ್ಕೆ ಹೋರಾಟ ಮಾಡಿದವರ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಅಪ್ಪಾಜಿ ಗೌಡರು ಮಾತನಾಡಿದರು. ಲಯನ್ ಗೋಲ್ಡನ್ ಟಿ. ಸುರೇಶ್, ಕದಂಬ ಸೈನ್ಯ ರಾಜ್ಯ ಕಾರ್ಯದರ್ಶಿ ವಿನಾಯಕ ಸೊಂಡೂರ ವಿಜಯಪುರ, ಹೊಳೆನರಸೀಪುರ ತಾ. ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ನಾಟಕಕಾರರು ಎಸ್.ಎಸ್. ಪುಟ್ಟೀಗೌಡ ವೇದಿಕೆಯಲ್ಲಿದ್ದರು.
ವಿಜಯಪುರ ಜಿಲ್ಲೆ ಈರಯ್ಯ ಶಾಂತಯ್ಯ ಹಿರೇಮಠ ದಂಪತಿಗಳಿಗೆ ಚಾಲುಕ್ಯ ದಂಪತಿಗಳ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಡಾ. ದೌಲತ್ ರಾವ್ ರೇವಣ್ಣಸಿದ್ಧಪ್ಪ ಮುದ್ದೇಬಿಹಾಳ, ಬೋರೇಗೌಡ ತಾವರಗೆರೆ ಇವರಿಗೆ ಕಾಕುತ್ಸವರ್ಮ ಪ್ರಶಸ್ತಿಯನ್ನು, ರಂಗಭೂಮಿ ಮಳವಳ್ಳಿ ಸುಂದರಮ್ಮ ಪ್ರಶಸ್ತಿಯನ್ನು ಹಾಸನದ ರಾಣಿ ಚರಾಶ್ರೀ ಮತ್ತು ಗಾಯತ್ರಿ ಪ್ರಕಾಶ್ ರವರಿಗೆ ನೀಡಿ ಸನ್ಮಾನಿಸಲಾಯಿತು. ಹಾಸನದ ಸಾಹಿತಿಗಳು ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.
ಕದಂಬ ಸೈನ್ಯ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎ.ಹೆಚ್. ಗಣೇಶ ಸ್ವಾಗತಿಸಿದರು.
ಗಾಯಕರಾದ ಎಂ.ಎನ್. ಶ್ರೀಧರ್
ನಾಡಗೀತೆ ಹಾಡಿದರು.
ಉಮ್ಮಡಹಳ್ಳಿ ನಾಗೇಶ್ ಆರಾಧ್ಯ ಗುಡೆಗೇನಹಳ್ಳಿ, ಕೃಷ್ಣಪ್ಪ ಶೆಟ್ಟಿ ಹೊಂಗನೂರು, ಬೋರೇಗೌಡ ಪಾಂಡವಪುರ, ಉಮೇಶ್ ರಾಂಪುರ ರಾಮನಗರ, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು, ವಿಜಯಪುರ ಜಿಲ್ಲೆ ಉಪಾಧ್ಯಕ್ಷ ಇಪಾ೯ನ್ ಬೀಳಗಿ ಇದ್ದರು.
ಸದ್ವಿದ್ಯಾ ಚಿಲ್ಡ್ರನ್ ಪ್ರೌಢಶಾಲೆ ಮತ್ತು ಕಾಲೇಜು, ಅಭಿನವ ಭಾರತಿ ಪ್ರೌಢಶಾಲೆ, ಕಾಳೇಗೌಡ ಪ್ರೌಢಶಾಲೆ, ಸಂತ ಜೋಸೆಫ್, ಪ್ರೌಢಶಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಂದ ಭಾಗವಹಿಸಿದ್ದ ಎಪ್ಪತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಲಾಡು ಮತ್ತು 5 ಸ್ಟಾರ್ ಚಾಕಲೇಟ್ ವಿತರಿಸಲಾಯಿತು.
ಕದಂಬ ಸೈನ್ಯ ವತಿಯಿಂದನಾಡಗೀತೆ ಅರ್ಥ ಬರೆಯುವ ಸ್ಪರ್ಧೆ: ವಿವಿಧ ಕ್ಷೇತ್ರದಸಾಧಕರಿಗೆ ಸನ್ಮಾನ


