ಸಪ್ತಸಾಗರವಾರ್ತೆ,ವಿಜಯಪುರ,ಮಾ.23:
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸದೇ ಇರುವ ಹಾಗೂ ಗುಂಪುಗಳನ್ನು ರಚಿಸದೇ ಇರುವ ಚೀಟಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು
ತಿಳಿಸಿದ್ದಾರೆ.
ಈ ಪ್ರಕಟಣೆ ಹೊರಡಿಸಿದ 07 ದಿನದಲ್ಲಿ ಸಂಬಂಧಪಟ್ಟ ಚೀಟಿ ಕಂಪನಿಯ ಪೋರಮನ್ಗಳು ಆಕ್ಷೇಪಣೆಗಳಿದ್ದರೆ ನೇರವಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಂಪರ್ಕಿಸಬಹುದಾಗಿದೆ.
ಒಂದು ವೇಳೆ ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ ಗುಂಪುಗಳ ರಚಿಸದೆ ಇರುವಂತಹ ಕಂಪನಿಗಳ ಹೆಸರನ್ನು ಇಲಾಖೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 38 ಚೀಟಿ ನಿಧಿಗಳ ಕಂಪನಿಗಳಿದ್ದು ಅವುಗಳ ಪೈಕಿ ಕೇವಲ 18 ಚೀಟಿ ಕಂಪನಿಗಳು ಕಾರ್ಯನಿರತವಾಗಿರುತ್ತವೆ. 20 ಚೀಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ಚೀಟಿ ಅಧಿನಿಯಮ 1982 ಪ್ರಕರಣ 20(1)ರ ಪ್ರಕರಣ ಚೀಟಿ 4ರಡಿಯಲ್ಲಿ ಈ ಕಾರ್ಯಾಲಯದ ಪೂರ್ವಾನುಮೋದನೆ ಪಡೆದು ಚಾಲ್ತಿಯಲ್ಲಿರುವ ಗುಂಪುಗಳ ಮಾಹಿತಿ ಹಾಗೂ ಮತ್ತು ಮುಕ್ತಾಯಗೊಂಡ ಗುಂಪುಗಳ ಮಾಹಿತಿ ಕುರಿತು 3 ವರ್ಷದ ಅಢಾವೆ ಪತ್ರಿಕೆಯ ಮಾಹಿತಿ ಕೇಳಿದ್ದು ಇರುತ್ತದೆ. ಅದರಂತೆ ಕಾರ್ಯ ನಿರ್ವಹಿಸುತ್ತಿರುವ ಚೀಟಿ ಕಂಪನಿಗಳು ಮಾಹಿತಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


