ಶ್ರೀರಾಮನ ವೇಷಧಾರಿಯಾಗಿ ಅನುಶ್ರೀ-ಶ್ರೀನಿಧಿ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 26:
ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗನಾಗಿ ಶ್ರೀರಾಮನು ಜನಿಸಿದ ದಿನವನ್ನು ರಾಮನವಮಿಯನ್ನಾಗಿ ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ 1 ನೇ ವರ್ಗದ ಅವಳಿ ಸಹೋದರಿಯರಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಶ್ರೀ ರಾಮನ ವೇಷಧಾರಿಗಳಾಗಿ ಗಮನ ಸೆಳೆದರು.
ಶ್ರೀ ರಾಮ ನವಮಿಯು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುವ ಭಗವಾನ್ ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನ ಜನ್ಮದಿನವಾಗಿದೆ. ಇದು ಅಧರ್ಮದ ಮೇಲೆ ಧರ್ಮದ ವಿಜಯ, ದುಷ್ಟರ ಸಂಹಾರ, ಮತ್ತು ಸತ್ಯ-ಸದಾಚಾರದ ಸಂಕೇತವಾಗಿದೆ. ಈ ದಿನದಂದು ಭಕ್ತರು ಉಪವಾಸ, ಪೂಜೆ, ರಾಮಾಯಣ ಪಠಣ, ರಾಮನ ಆದರ್ಶಗಳನ್ನು ಸ್ಮರಿಸುತ್ತಾರೆ.
ರಾಮನು ಒಬ್ಬ ಆದರ್ಶ ರಾಜ, ಮಗ, ಪತಿ ಮತ್ತು ಸಹೋದರನಾಗಿದ್ದು, ಅವನ ಜೀವನದ ಮೌಲ್ಯಗಳಾದ ತ್ಯಾಗ, ಭಕ್ತಿ, ವಿನಮ್ರತೆ ಮತ್ತು ಸಹಾನುಭೂತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಈ ಹಬ್ಬದ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ.

Share this