ಸಪ್ತಸಾಗರ ವಾರ್ತೆ,ವಿಜಯಪುರ, ಏ. 1 : ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ” ಪಾಲಕ-ಶಿಕ್ಷಕರ ಸಭೆ”ಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸಿದ್ದು, ವಿದ್ಯಾರ್ಥಿಗಳ ಪ್ರಗತಿಯ ಕುರಿತು ಚರ್ಚಿಸಲಾಯಿತು. ಸಹ ಪ್ರಾಧ್ಯಾಪಕ ಡಾ.ಎಂ.
ಎಸ್. ಹಿರೇಮಠ ಮಹಾವಿದ್ಯಾಲಯ ಬೆಳೆದು ಬಂದ ಬಗೆಯನ್ನು ತಿಳಿಸಿದರು. ಸಹ ಪ್ರಾಧ್ಯಾಪಕ ಡಾ.ಎಂ.ಬಿ. ಕೋರಿ ಮಹಾವಿದ್ಯಾಲಯದ ಸೌಲಭ್ಯಗಳ ಕುರಿತು ತಿಳಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಜೆ.ಎಸ್. ಪಟ್ಟಣಶೆಟ್ಟಿ ಮಹಾವಿದ್ಯಾಲಯವು ಹೊಂದಿರುವ ವಿವಿಧ ಘಟಕಗಳ ಕುರಿತು ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಎಸ್.ಎಸ್. ಪಾಟೀಲ ಮಹಾವಿದ್ಯಾಲಯದ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಕುರಿತು ತಿಳಿಸಿದರು. ಸಹಾಯಕ ಪ್ರಾಧ್ಯಾಪಕ ಪಿ.ಡಿ. ಮುಲ್ತಾನಿ ವಿದ್ಯಾರ್ಥಿಗಳ ಪ್ರಗತಿಯ ಕುರಿತು ತಿಳಿಸಿದರು. ವಿದ್ಯಾರ್ಥಿಗಳ ಪೋಷಕರು ಮಹಾವಿದ್ಯಾಲಯದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅವರಲ್ಲಿ ಶ್ರೀಮತಿ ಸಿರಿನ್ ರಮಲಿ ಅವರು ಈ ಮಹಾವಿದ್ಯಾಲಯವು ಬಹಳಷ್ಟು ಗುಣಾತ್ಮಕ ಶಿಕ್ಷಣ ನೀಡುವ ಕೇಂದ್ರವಾಗಿದೆ ಎಂದರು.
ಸಂಗಮೇಶ ಗುಂಡಳ್ಳಿ ಅವರು ಮಾತನಾಡಿ, ಈ ಮಹಾವಿದ್ಯಾಲಯದಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುತ್ತಾರೆ. ಹೀಗಾಗಿ ಈ ಸಂಸ್ಥೆಯ ಕುರಿತು ನನಗೆ ಬಹಳಷ್ಟು ಹೆಮ್ಮೆ ಇದೆ ಎಂದರು.
ಎ.ಎಚ್ ಕೆಂಭಾವಿ. ಅವರು ಮಾತನಾಡಿ, ನಮ್ಮ ಮಕ್ಕಳು ಉತ್ತಮ ಶಿಕ್ಷಕರಾಗಲು ಈ ಸಂಸ್ಥೆಯು ದಾರಿದೀಪವಾಗಿದೆ ಎಂದರು.
ಎಸ್.ಎಸ್. ನಾಯ್ಕೋಡಿ ಅವರು ಮಾತನಾಡಿ, ಮಕ್ಕಳನ್ನು ಶಿಸ್ತಿನ ಸಿಪಾಯಿಗಳಂತೆ ತಯಾರಿಸುವ ಮಹಾವಿದ್ಯಾಲಯ ಇದಾಗಿದೆ ಎಂದರು. ಎಸ್.ಎಂ. ಬಿರಾದಾರ ಅವರು ಮಾತನಾಡಿ, ನಾನು ಇದೇ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದೇನೆ ಎಂದು ಸ್ಮರಿಸಿದರು.
ಎನ್.ಡಿ. ಕಾಂಬಳೆ ಅವರು ಮಾತನಾಡಿ, ಪಾಲಕರಾದ ನಾವು ನಮ್ಮ ಮಕ್ಕಳಿಗಾಗಿ ಒಳ್ಳೆಯ ಮಹಾವಿದ್ಯಾಲಯವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ವಿಜಯಕುಮಾರ. ಶಿರಶ್ಯಾಡ ಅವರು ಮಾತನಾಡಿ, ಇಲ್ಲಿನ ಎಲ್ಲಾ ಗುರು, ಗುರುಮಾತೆಯರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿದರು.
ಎ.ಆರ್. ಮಸಳಿ. ಅವರು ಮಾತನಾಡಿ, ನಮ್ಮ ಮಕ್ಕಳು ಈ ಮಹಾವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ ಎಂದರೆ ಅದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಇನಾಮದಾರ ಮಾತನಾಡಿ, ಇಡೀ ಕರ್ನಾಟಕ ರಾಜ್ಯದಲ್ಲಿಯೇ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇದಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ, ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್.ಆವರಣದ ಆಡಳಿತಾಧಿಕಾರಿ ಪ್ರೊ.ಐ. ಎಸ್.ಕಾಳಪ್ಪನವರ ಅವರು ಮಾತನಾಡಿ, ಡಾ.ಎಂ.ಬಿ. ಪಾಟೀಲ ಸಾಹೇಬರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ನಮ್ಮ ಬಿ. ಎಲ್.ಡಿ.ಇ.ಶಿಕ್ಷಣ ಸಂಸ್ಥೆಯು ಇದೊಂದು ವ್ಯಾಪಾರಿಕರಣದ ಶಿಕ್ಷಣ ಸಂಸ್ಥೆ ಅಲ್ಲ. ಬದಲಾಗಿ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ, ಸಂಸ್ಕಾರ, ಶಿಸ್ತು ಬದ್ಧತೆಯನ್ನು ಬೆಳೆಸುವ ಸಂಪನ್ಮೂಲ ಕೇಂದ್ರವಾಗಿದೆ ಎಂದರು.
ಅಕ್ಷರ ಜ್ಞಾನಕ್ಕಿಂತ ಸಂಸ್ಕಾರ ಜ್ಞಾನ ಅತಿ ಅವಶ್ಯಕವಾಗಿದ್ದು, ಅಕ್ಷರ ಕಲಿತ ವ್ಯಕ್ತಿ ಬದುಕಿನಲ್ಲಿ ಕೆಲವೊಮ್ಮೆ ತಪ್ಪು ಮಾಡಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಬದುಕಿನಲ್ಲಿ ಎಂದಿಗೂ ತಪ್ಪು ಮಾಡಲಾರ. ಹೀಗಾಗಿ ನಮ್ಮ ಮಕ್ಕಳನ್ನು ಜ್ಞಾನವಂತ ಮತ್ತು ಸಂಸ್ಕಾರವಂತರನ್ನಾಗಿ ಮಾಡೋಣ ಎಂದು ಹೇಳಿದರು. ಅಧ್ಯಕ್ಷರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು ಡಾ.ಭಾರತಿ. ವಾಯ್.ಖಾಸನೀಸ್ ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಮತ್ತು ಪಾಲಕರು ಒಳ್ಳೆಯ ಅನುಭವಗಳನ್ನು ನೀಡುವುದು ಬಹಳಷ್ಟು ಮುಖ್ಯವಾಗಿದೆ. ವಿದ್ಯಾರ್ಥಿಗಳ ಪ್ರಗತಿಗಾಗಿ ನಾವೆಲ್ಲರೂ ಬದ್ಧತೆಯಿಂದ ಶ್ರಮಿಸೋಣ. ಪಾಲಕರ ಸಲಹೆ ಸೂಚನೆಗಳು ನಮಗೆ ಎಂದಿಗೂ ಸ್ವೀಕರಾರ್ಹ, ನಾವು ಅವುಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ಸಹಾಯಕ ಪ್ರಾಧ್ಯಾಪಕ ಎಂ.
ಪಿ.ಕುಪ್ಪಿ. ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಸ್. ಹಿರೇಮಠ ನಿರೂಪಿಸಿದರು. ಲಕ್ಷ್ಮಿ ಡಗ್ಗಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಪಿ. ಶೇಗುಣಸಿ ವಂದಿಸಿದರು.
ಬಿಎಲ್ ಡಿಇ ಸಿದ್ದೇಶ್ವರ ಶಿಕ್ಷಣ ಕಾಲೇಜಿನಲ್ಲಿ ಪಾಲಕರ ಸಭೆ


