ಕನ್ನೂರ ಶಾಂತಿಕುಟೀರ ಆಶ್ರಮದಲ್ಲಿ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರ: ಏಪ್ರಿಲ್ 10 ರಿಂದ ಮೇ 10 ರ ವರೆಗೆ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 9: ಗ್ರಾಮೀಣ ಭಾಗದ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಹಾಗೂ ಶೈಕ್ಷಣಿಕ ಪ್ರಗತಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕನ್ನೂರಿನ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜ ಶಾಂತಿಕುಟೀರ ಟ್ರಸ್ಟ್, ಭಾರತೀಯ ಸುರಾಜ್ಯ ಸಂಸ್ಥೆ ಹಾಗೂ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 10 ರಿಂದ ಮೇ 10 ರ ವರೆಗೆ ಒಂದು ತಿಂಗಳ ಕಾಲ ‘ಉಚಿತ ಶೈಕ್ಷಣಿಕ-ಆಧ್ಯಾತ್ಮಿಕ ಬೇಸಿಗೆ ಶಿಬಿರ-2026’ ಅನ್ನು ಆಯೋಜಿಸಲಾಗಿದೆ.
ವ್ಯಕ್ತಿತ್ವ ವಿಕಸನಕ್ಕೆ ಒತ್ತು ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ಆಶಯದಂತೆ ಶಾಂತಿ ಕುಟೀರ ಆಶ್ರಮದ ಸುತ್ತಮುತ್ತಲಿನ ಗ್ರಾಮೀಣ ಭಾಗದ
ಮಕ್ಕಳನ್ನು ನೀತಿವಂತ, ಗುಣವಂತ ಹಾಗೂ ಆರೋಗ್ಯವಂತರನ್ನಾಗಿ ರೂಪಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಸಂಡೂರಿನ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಸಂಸ್ಥಾಪಕರಾದ ದಿವಂಗತ ಎಸ್ ವಿ ನಾನಾವಟೆ ಗುರುಗಳು 2002 ರಂದು ಶಾಂತಿ ಕುಟೀರ ಆಶ್ರಮದ ಸುತ್ತಮುತ್ತಲಿನ ಗ್ರಾಮೀಣ ಭಾಗದ
ಮಕ್ಕಳ ಶೈಕ್ಷಣಿಕ,ನೈತಿಕ ಮಟ್ಟ ಉನ್ನತೀಕರಿಸುವ ಉದ್ದೇಶದಿಂದ ಈ ಶಿಬಿರವನ್ನು ಪ್ರಾರಂಭಿಸಿದ್ದು ಅಂದಿನಿಂದ ಇಂದಿನವರೆಗೆ ಸಾವಿರಾರು ಮಕ್ಕಳಿಗೆ ಉಚಿತವಾಗಿ ಒಂದು ತಿಂಗಳಗಳ ಕಾಲ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕತೆಯನ್ನು ಕಲಿಸಿಕೊಡಲಾಗುತ್ತದೆ. ಈ ಶಿಬಿರದಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಪ್ರತಿದಿನ ಬೆಳಿಗ್ಗೆ 8:30 ರಿಂದ ಸಂಜೆ 5:30 ರವರೆಗೆ ವಿವಿಧ ಚಟುವಟಿಕೆಗಳು ನಡೆಯಲಿವೆ.
ಶಿಬಿರದ ವಿಶೇಷತೆಗಳು :
ಪಠ್ಯ ಮತ್ತು ಅಧ್ಯಾತ್ಮ: ಗಣಿತ, ವಿಜ್ಞಾನ, ಇಂಗ್ಲಿಷ್ ವ್ಯಾಕರಣ ಬೋಧನೆಯೊಂದಿಗೆ ಏಕಾಗ್ರತೆಗಾಗಿ ಧ್ಯಾನ, ಪ್ರಾರ್ಥನೆ ಹಾಗೂ ನಾಮಸ್ಮರಣೆಯ ತರಬೇತಿ ನೀಡಲಾಗುತ್ತದೆ.
ಸರಳ ಗಣಿತ : 2 ರಿಂದ 99 ರವರೆಗಿನ ಮಗ್ಗಿಗಳನ್ನು ಸುಲಭವಾಗಿ ಬರೆಯುವ ಸರಳ ತಂತ್ರಗಳನ್ನು ಕಲಿಸಿಕೊಡಲಾಗುವುದು ಹಾಗೂ ಅಬಾಕಸ್ ಕಲಿಸಿಕೊಡಲಾಗುತ್ತದೆ.
ವಿಜ್ಞಾನ ಪ್ರಯೋಗ: ಅಗಸ್ತ್ಯ ಫೌಂಡೇಶನ್ ಸಹಯೋಗದೊಂದಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಮಕ್ಕಳ ಅಂದ ಬರವಣಿಗೆ ಹೆಚ್ಚಿಸುವ ದೃಷ್ಟಿಯಿಂದ ಪ್ರಿಂಟ್ ಹ್ಯಾಂಡ್ ರೈಟಿಂಗ್ ಕಲಿಸಿಕೊಡಲಾಗುತ್ತದೆ. ಚಿತ್ರಕಲೆ ಮತ್ತು ಸಂಗೀತವನ್ನು ಸಹ ಕಲಿಸಿಕೊಡಲಾಗುವುದು.
ಪಾಲಕರ ಸಭೆ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರದ ಕುರಿತು ಶಿಕ್ಷಣ ತಜ್ಞರಿಂದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು.
ಉದ್ಘಾಟನಾ ಸಮಾರಂಭ
ಏಪ್ರಿಲ್ 10ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶಾಂತಿಕುಟೀರ ಆಶ್ರಮದಲ್ಲಿ ಶಿಬಿರದ ಉದ್ಘಾಟನೆ ನಡೆಯಲಿದೆ. ವಿಜಯಪುರದ ಕೃಪಾಮಯಿ ಶಾರದಾಶ್ರಮದ ಪ. ಪೂ. ಕೈವಲ್ಯಮಯಿ ಮಾತಾಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಶ್ರೀ ಗೋವಿಂದ ಬಾಹೇತಿ ಅಧ್ಯಕ್ಷತೆ ವಹಿಸಲಿದ್ದು, ವೇದ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಶಿವಾನಂದ ಎನ್ ಕೆಲೂರ ಉದ್ಘಾಟಿಸಲಿದ್ದಾರೆ. ಉಪಸ್ಥಿತಿ: ಶ್ರೀ ಶ್ರೀಕೃಷ್ಣ ಸಂಪಗಾಂವಕರ,ಅಧ್ಯಕ್ಷರು ರಾಮರಾಜ್ಯ ಕಲಾಮೇಳ ಶಾಂತಿ ಕುಟೀರ ಕನ್ನೂರ. ಶ್ರೀ ರಮೇಶ ಕನ್ನೂರ,ಗುರು ಘರಾಣೆಯ ಹಿರಿಯರು. ಶ್ರೀ ಬಿ. ಬಿ. ಪೂಜಾರ. ಅಧ್ಯಕ್ಷರು ಭಾರತೀಯ ಸುರಾಜ್ಯ ಸಂಸ್ಥೆ. ಶ್ರೀಕುಮಾರ ಎಸ್. ನಾನಾವಟೆ, ಆಡಳಿತಾಧಿಕಾರಿಗಳು ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ಸಂಡೂರು.
ಉಪಸ್ಥಿತಿ: ಶ್ರೀಮತಿ
ಭಾರತಿ ವಿ ಹೊನ್ನಳ್ಳಿ/ಪಾಟೀಲ ಸಂಯೋಜಕರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ
ಗಮನಿಸಿ : ಏಪ್ರಿಲ್ 10, 11 ಮತ್ತು 12 ರಂದು ಶಿಬಿರಕ್ಕೆ ಹಾಜರಾಗಿ ನೋಂದಾಯಿಸಿದವರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗುವುದು. ಈ ಚೀಟಿ ಹೊಂದಿದವರಿಗೆ ಮಾತ್ರ ಮುಂದಿನ 27 ದಿನಗಳ ಉಚಿತ ತರಬೇತಿ ಹಾಗೂ ಸಮಾರೋಪದಲ್ಲಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಗುವುದು.
ಸೌಲಭ್ಯಗಳು :
ಶಿಬಿರಾರ್ಥಿಗಳ ಅನುಕೂಲಕ್ಕಾಗಿ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮತ್ತು ವೇದ ಅಕಾಡೆಮಿಯ ವತಿಯಿಂದ ಉಚಿತ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.
ಸಂಪರ್ಕಿಸಿ : ಹೆಚ್ಚಿನ ಮಾಹಿತಿಗಾಗಿ ಶ್ರೀಕೃಷ್ಣ ಸಂಪಗಾಂವಕರ 9880419364 ಅಥವಾ ಕುಮಾರ ಎಸ್ ನಾನಾವಟೆ 9880072744 ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

Share this