ಸಪ್ತಸಾಗರ ವಾರ್ತೆ,ವಿಜಯಪುರ, ಏ. 10: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆಯ ಕೌಮಾರಭೃತ್ಯ ವಿಭಾಗದ ವತಿಯಿಂದ ಮಕ್ಕಳಲ್ಲಿ ಕಂಡುಬರುವ ಚಂಚಲತೆ ಹಾಗೂ ಅತೀ ಚಟುವಟಿಕೆ (ADHD) ಕುರಿತು ಉಚಿತ ತಪಾಸಣೆ, ಪಂಚಕರ್ಮ ಚಿಕಿತ್ಸೆ ಮತ್ತು ಔಷಧ ವಿತರಣೆ ಸೌಲಭ್ಯ ಹಾಗೂ ಮಕ್ಕಳಲ್ಲಿ ಕಾಣಿಸುವ ಚರ್ಮರೋಗಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ ಏಪ್ರಿಲ್ 15 ರಿಂದ ಏಪ್ರಿಲ್ 18ರ ವರೆಗೆ ನಡೆಯಲಿದೆ.
ಬುಧವಾರದಿಂದ ಶನಿವಾರದ ವರೆಗೆ 4 ದಿನ ಈ ಶಿಬಿರ ಆಯೋಜಿಸಲಾಗಿದೆ. ಮಕ್ಕಳಲ್ಲಿ ಕಂಡು ಬರುವ ಲಕ್ಷಣಗಳಾದ ಒಂದೇ ಜಾಗದಲ್ಲಿ ಶಾಂತವಾಗಿ ಕುಳಿತುಕೊಳ್ಳಲು ಆಗದಿರುವುದು, ಹೆಚ್ಚು ಓಡಾಡುವುದು ಅಥವಾ ಮಾತನಾಡುವುದು, ತನ್ನ ಸರದಿ ಕಾಯದೆ ಮಾತನಾಡುವುದು, ಚಂಚಲತೆ, ಗಮನ ಕೊರತೆ, ಪಾಠಗಳಲ್ಲಿ ಗಮನ ಕೊಡಲಾಗದಿರುವುದು, ಹೋಂವರ್ಕ್ ಪೂರ್ಣಗೊಳಿಸದಿರುವುದು, ದಿನನಿತ್ಯದ ಕೆಲಸಗಳಲ್ಲಿ ಏಕಾಗ್ರತೆ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳ ಪೋಷಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- ಸಂಪರ್ಕಿಸಬಹುದಾಗಿದೆ. 9513397413 ಸಂಪರ್ಕಿಸಬಹುದಾಗಿದೆ.
Editor
Rudrappa B Asangi
Editor
Managing Editor
Chetan Asangi
Managing Editor


