14ರಿಂದ 18ರವರೆಗೆ ಮಹಾಲ ಐನಾಪುರ ತಾಂಡಾದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 13: ತಾಲೂಕಿನ ಮಹಲ ಐನಾಪೂರ ತಾಂಡಾದಲ್ಲಿ ಏ. 14 ರಿಂದ 18 ರವರೆಗೆ ದುರ್ಗಾದೇವಿ ಜಾತ್ರಾ ಮಹೋತ್ಸವ ನಡೆಯಲಿದೆ.
ಏ. 14 ರಂದು ಆಲಮಟ್ಟಿಯ ಚಂದ್ರಗಿರಿಯ ಹೊಳೆ ಮೂಲಕ ಗಂಗೆ ಸೀತಾಳ ಕಾರ್ಯಕ್ರಮ ನಡೆಯಲಿದೆ. ಏ 16 ಹಾಗೂ 17 ರಂದು ಮನೆ ಮನೆ ದೇವಿ ಭೇಟಿ ಕಾರ್ಯಕ್ರಮ ನಡೆಯಲಿದೆ.
ಏ. 18 ರಂದು ಹೋಮ ಹವನ, ರುದ್ರಾಭಿಷೇಕ , ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದುರ್ಗಾದೇವಿ ಗದ್ದುಗೆಯ ಆರಾಧಕ ಪುಜಾರಿಗಳಾದ ಪ. ಪೂ. ಶ್ರೀ ರೂಪಸಿಂಗ ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this