ದೇಶದ ಸಾಮರಸ್ಯಕ್ಕೆ ಅಂಬೇಡ್ಕರವರ ತಾಯ್ತನದ ನಿಲುವು ಅವಶ್ಯಕ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಏ. 14: ಅಂಬೇಡ್ಕರ್ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳವಾಗಿದ್ದು, ಇಂದಿನ ಸಮಾಜದಲ್ಲಿನ ಅಸಮಾನತೆ,
ಅಶಾಂತಿ ಹೋಗಲಾಡಿಸಲು ಅವರ ವಿಚಾರಗಳು ದಿವ್ಯ ಮಂತ್ರಗಳಾಗಿವೆ ಎಂದು ಸಂಪನ್ಮೂಲ ವ್ಯಕ್ತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ
1-5 ನೇ ವರ್ಗದ ಶಿಕ್ಷಕರ ದ್ವಿಭಾಷಾ ತರಬೇತಿಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಭಾರತದಂತಹ ಸಂಪ್ರದಾಯ ದೇಶದಲ್ಲಿ ಸಾಮರಸ್ಯ ಭಾವನೆ ಮೂಡಿಸಲು ಅಂಬೇಡ್ಕರವರ ತಾಯ್ತನದ ನಿಲುವು ಅವಶ್ಯಕ. ಭೇದ-ಭಾವ ತೊಲಗಿಸಿ ಸಮ ಸಮಾಜ ಕಟ್ಟಲು ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಹೇಳಿದರು.
ಬಿ ಆರ್ ಪಿ ಅಶೋಕ ರಾಠೋಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಷಿತರ ಹಕ್ಕುಗಳಿಗಾಗಿ ಹೋರಾಡಿ, ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಶ್ರಮಿಸಿದ ಅಂಬೇಡ್ಕರರು, ಪ್ರಜಾಪ್ರಭುತ್ವ, ಸಮಾನತೆ, ಶಿಕ್ಷಣದ ಮಹತ್ವವನ್ನು ಸಾರಿದ ಮಹಾನ್ ಚೇತನ. ಅವರ ವಿಚಾರಗಳು ಇಂದಿನ ಯುವ ಪೀಳಿಗೆಯ ಬದುಕಿಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಬಿ ಆರ್ ಪಿ ಗಳಾದ ಆಂಜನೇಯ ಸ್ವಾಮಿ ಹೊಸಮನಿ, ರಂಗರಾವ ಕುಲಕರ್ಣಿ, ಸಿ ಆರ್ ಪಿ ಗಳಾದ ಎಸ್ ಆರ್ ಚಾಳೇಕರ, ಮಂಜುನಾಥ ತೇಲಿ, ಎಸ್ ಎಸ್ ಕ್ಯಾತಾ,ಕೆ ಡಿ ಪಾಚುಂಗೆ,ಆರ್ ಎ ಪಾಟೀಲ, ತಾಲೂಕ ಸಂಪನ್ಮೂಲ ವ್ಯಕ್ತಿಗಳಾದ ಆರ್ ಎಲ್ ಹಜೇರಿ, ದಾದಾ ಶ್ಯಾಮನವರ, ಎಸ್ ಎ ಮೊಮಿನ್, ಆರ್ ಎಸ್ ಸುರಗಿಹಳ್ಳಿ, ಜಟ್ಟಪ್ಪ ಮಾದರ, ಶಿವಾನಂದ ಡಬ್ಬಿಗಾರ, ಎಚ್ ಆರ್ ಪೂಜಾರಿ, ರಾಹುಲ್ ಭೀಮನಗರ, ಸಂಜೀವ ಗುಡಿಮನಿ, ಅಜಯ ಲೋಣಾರೆ, ಸಿ ಎಂ ಮೇತ್ರಿ, ಕವಿತಾ, ಕೆಂಪರಾಜು, ರಮೇಶ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ಹಾಗೂ 1-5 ನೇ ವರ್ಗ ಬೋಧಿಸುವ 400ಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು.

Share this