ಸಪ್ತಸಾಗರ ವಾರ್ತೆ,ವಿಜಯಪುರ, ಏ. 14:
ವಚನಾನಂದ ಸ್ವಾಮಿಜಿ ಸತ್ಯ ಹರಿಶ್ಚಂದ್ರ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಉಚ್ಛಾಟನೆ ವಿಚಾರ ಕುರಿತು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ನಮ್ಮದೇ ಸರ್ಕಾರ ಇದ್ದರೂ ವಚನಾನಂದ ಸ್ವಾಮಿಗಳ ವಿರುದ್ದ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಸ್ಪೀಕರ್ ಗೆ ಹೇಳಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದರು.
ಹರಿಹರ ಹಾಗೂ ಕೂಡಲಸಂಗಲ ಪೀಠಗಳ ಟ್ರಸ್ಟ್ ಗಳು ಜನರ ನಂಬಿಕೆ ಕಳೆದುಕೊಂಡಿವೆ. ಎರಡು ಟ್ರಸ್ಟ್ ಗಳು ನಂಬಿಕೆ ಕಳೆದುಕೊಂಡಿವೆ. ಟ್ರಸ್ಟ್ ಗಳನ್ನು ಖಾಸಗಿ ಆಸ್ತಿ ಮಾಡಿಕೊಂಡಿದ್ದಾರೆ.
ಈ ಟ್ರಸ್ಟ್ ಗಳಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ ಎಂದರು.
ಪ್ರಾಮಾಣಿಕರು, ಸಮಾಜಕ್ಕಾಗಿ ಕೆಲಸ ಮಾಡುವವರು ಇಲ್ಲ.
ಉಚ್ಛಾಟನೆ ಮಾಡಿದವರು, ಮಾಡಿಸಿಕೊಂಡುವರು ಅವರೇ ಇದ್ದಾರೆಂದು ಯತ್ನಾಳ ವಾಗ್ದಾಳಿ ಮಾಡಿದರು.
ಟ್ರಸ್ಟ್ ಗಳು ಸರ್ಕಾರಗಳನ್ನು ಬ್ಲ್ಯಾಕ್ಮೇಲ್ ಮಾಡಲು ಇವೆ. ಯಡಿಯೂರಪ್ಪ ಸಿಎಂ ಇದ್ಧಾಗ 11 ಕೋಟಿ ಕೊಟ್ಟಿದ್ದಾರೆ.
ಆದರೆ ಹಣಕಾಸಿನ ದಾಖಲೆಗಳು ನಕಲಿಯಾಗಿವೆ. ಪಿಡಿಒ ಸಹಿ ಸಹಿತ ನಕಲಿ ಮಾಡಿದ್ದಾರೆ. ಬಿಲ್ ಗಳು ನಕಲಿ ಮಾಡಿದ್ದಾರೆ. ಕೂಡಲಸಂಗಮ ಟ್ರಸ್ಟ್ ಸಹ ಇದೇ ಮಾಡಿದೆ. ಎರಡೂ ಟ್ರಸ್ಟ್ ಗಳ ಮೇಲೆ ಜನರು ನಂಬಿಕೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಹಣ ನೀಡಲಾಗಿತ್ತು ಎಂದು ಯತ್ನಾಳ ತಿಳಿಸಿದರು.
ನಮ್ಮ ಸಮಾಜದ 1 ಕೋಟಿ ಮತಗಳಿವೆ ಎಂದು ಬೆದರಿಕೆ ಹಾಕುತ್ತಿದ್ದರು.
ಇವರ ಮನೆ ಬೆಕ್ಕು, ನಾಯಿ ಇವರ ಮಾತು ಕೇಳಲ್ಲ ಎಂದು ಟಾಂಗ್ ನೀಡಿದರು.
ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿಯಿಂದ ಮಹಿಳೆ ಹಾಗೂ ಇತರರ ಮೇಲೆ ದೂರು ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಬೆಂಗಳೂರಿನ ತ್ರಿವೇಣಿ ಎಂಬುವರು ದೂರು ನೀಡಿದ ವಿಚಾರ ಹಾಗೂ ಯೂ ಟರ್ನ್ ವಿಚಾರ
ಮಹಿಳೆ ಸ್ವಾಮೀಜಿ ವಿರುದ್ದ ದೂರು ನೀಡಿಲ್ಲವೆಂದಿದ್ದಾರೆ ಈ ಕುರಿತು ತನಿಖೆಯಾಗಲಿ. ನಕಲಿ ಸಹಿ ಮಾಡಿ ದೂರು ನೀಡಿದ್ದಾರೆಂದು ಮಹಿಳೆ ಹೇಳಿದ್ದಾರೆ ತನಿಖೆಯಲ್ಲಿ ಏನು ಬರುತ್ತದೆ ನೋಡೋಣ. ನಕಲಿ ಸಹಿ ಯಾರು ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಲಿ
ತಮ್ಮ ಮೇಲಿನ ಆರೋಪದಿಂದ ಸ್ವಾಮೀಜಿ ಮುಕ್ತವಾಗಬೇಕು.
ಸಮಾಜದಲ್ಲಿ ಮೂಡಿರುವ ಸಂಶಯದಿಂದ ಸ್ವಾಮೀಜಿ ಹೊರ ಬರಲಿ ಎಂದು ಯತ್ನಾಳ ಹೇಳಿದರು.
ವಚನಾನಂದ ಶ್ರೀ ಸತ್ಯ ಹರಿಶ್ಚಂದ್ರ ಅಲ್ಲ: ಯತ್ನಾಳ


