ಸಿಬಿಎಸ್ ಇ 10ನೇ ತರಗತಿ ಫಲಿತಾಂಶ: ಬಿಎಲ್ ಡಿಇ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ ನೂರಕ್ಕೆ ನೂರರಷ್ಟು ಸಾಧನೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 16: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯು ಶೇ. 100 ರಷ್ಟು ಪಲಿತಾಂಶ ದಾಖಲಿಸಿದೆ.
ಶಾಲೆಯ ವಿದ್ಯಾರ್ಥಿನಿ ಅನುಪ್ರಿಯಾ ರಾಘವೇಂದ್ರ ಕುಲಕರ್ಣಿ ಶೇ. 97.80 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದರೆ, ಸಾನ್ವಿ ಬಸವರಾಜ ಎಲಿಗಾರ ಶೇ. 97.20 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ನೇಹಾ ಗಿರೀಶ ಪಾಟೀಲ ಶೇ. 95.40 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ.
ಪರೀಕ್ಷೆಗೆ ಹಾಜರಾದ 94 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು, ಶೇ. 75 ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.‌ 21 ವಿದ್ಯಾರ್ಥಿಗಳು ಶೇ. 60 ರಿಂದ ಶೇ. 70 ರಷ್ಟು ಅಂಕ ಗಳಿಸಿದ್ದು, ಮೂರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಸಾಧನೆಗೆ ಬಿ.ಎಲ್.ಡಿ.ಇ‌ ಸಂಸ್ಥೆಯ ಅಧ್ಯಕ್ಷ ಎಂ ಬಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ‌ ಶೈಕ್ಷಣಿಕ್ಕೆ ಶುಭ ಹಾರೈಸಿದ್ದಾರೆ.
ಅದೇ ರೀತಿ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಪ್ರಾಚಾರ್ಯ ಡಾ. ಶೈಜೂ ಕೆ. ನಾಯರ, ಹಿರಿಯ ಕಾರ್ಯಸಂಯೋಜಕಿ ದೀಪಾ ಜಂಬೂರೆ, ಶಾಲಾ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದಿಸಿದ್ದಾರೆ.

Share this