ಸಪ್ತಸಾಗರ ವಾರ್ತೆ,ವಿಜಯಪುರ, ಏ. 19:
ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟರೆ ಪ್ರಧಾನಿ ಭಾಷಣದಲ್ಲಿ ಘನತೆ ಇರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಭಾನುವಾರ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ನಂದ್ಯಾಳ ಗ್ರಾಮದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು.
ನಿನ್ನೆ ಪ್ರಧಾನಿಗಳ ಭಾಷಣ ನೋಡಿದರೆ ಭಾಷಣದಲ್ಲಿ ಘನತೆ ಗೌರವ ಇರಬೇಕು. ಅದು ಇರಲಿಲ್ಲ. ಪದೇ ಪದೇ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಪಕ್ಷಗಳನ್ನು ವಿರೋಧಿಸಿ ಮಾತನಾಡಿದರು.
ತರಾತುರಿಯಲ್ಲಿ ಮಾಸೂದೆ ಮಂಡನೆ ಮಾಡಿದರು. ಅವರು ಆಲ್ ಪಾರ್ಟಿ ಮಿಟಿಂಗ್ ಕರೆಯಬೇಕಿತ್ತು.
ಅದರ ಬಗ್ಗೆ ಸಾಧಕ ಭಾಧಕ ಬಗ್ಗೆ ಚರ್ಚೆ ಮಾಡಬೇಕಿತ್ತು ಎಂದರು.
ಹಾಗಾದರೆ ದಕ್ಷಿಣ ಭಾರತದ ರಾಜ್ಯಗಳು ನಿರ್ಲಕ್ಷ್ಯ ಕ್ಕೆ ಒಳಾಗುಗುತ್ತಿದ್ದವು.
ನಾವೆಲ್ಲರೂ ಅತಿ ಹೆಚ್ಚು ಜಿಡಿಪಿ ಕೊಡುಗೆ ಕೊಡುತ್ತಿದ್ದೇವೆ. ಜನಸಂಖ್ಯೆ ನಿಯಂತ್ರಣ ನಾವು ಪಾಲಿಸಿದ್ದೇವೆ. ದಕ್ಷಿಣ ಭಾರತ ನಿರ್ಲಕ್ಷ್ಯ ಉತ್ತರ ಭಾರತ ಅಭಿವೃದ್ಧಿ ಆಗುತ್ತಿತ್ತು ಎಂದು ತಿಳಿಸಿದರು.
ಪ್ರಧಾನಿ ಮಂತ್ರಿಗಳು ಮಸೂದೆ ಮಂಡನೆಯಲ್ಲಿ ಎಡವಿದ್ದಾರೆ.
ತಮಿಳುನಾಡು ಮತ್ತು ಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ.
ಮಹಿಳೆಯರನ್ನು ನಮ್ಮ ವಿರುದ್ದ ಎತ್ತಿಕಟ್ಟುವ ಹಾಗೆ ಮಾಡಿದ್ದಾರೆ.
ಮೋದಿಯವರ ಭಾಷಣ ನಾನು ವೈಯುಕ್ತಿಕವಾಗಿ ಒಪ್ಪಲ್ಲ. ಹಿಂದೇ ವಾಜಪೇಯಿ, ಇಂದಿರಾಗಾಂಧಿ, ನರಸಿಂಹರಾವ್, ಮನಮಮೋಹನ ಸಿಂಗ್ ಇದ್ದರು. ಅವರೆಲ್ಲ ಮೋದಿ ಅವರ ಹಾಗೆ ಇರಲಿಲ್ಲ. ನಿನ್ನೆ ರಾಜಕೀಯ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದಂತೆ ಪ್ರಧಾನಿ ಮಾತನಾಡಿದರು ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಭಾಷಣದಲ್ಲಿ ಘನತೆ ಇರಲಿಲ್ಲ: ಸಚಿವ ಎಂ.ಬಿ. ಪಾಟೀಲ್


