ಸಪ್ತಸಾಗರ ವಾರ್ತೆ,ವಿಜಯಪುರ, ಏ. 20:
ವಚನಗಳ ಮೂಲಕ ಅನಿಷ್ಟ ಪದ್ದತಿಗಳನ್ನು ತೊಲಗಿಸಿ ಮಹಾ ಕ್ರಾಂತಿ ಮಾಡಿದವರು ಕ್ರಾಂತಿಯೋಗಿ ಬಸವಣ್ಣನವರು ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳರು ಹೇಳಿದರು.
ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಸಮಾಜ ಸುಧಾಕರಾದ ಬಸವಣ್ಣನವರ ತತ್ವ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದರು.
ಮೇಯರ್ ಎಂ.ಎಸ್.ಕರಡಿ, ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಎಸ್.ಎಚ್.ನಾಡಗೌಡ, ಸದಾಶಿವ ಗುಡ್ಡೋಡಗಿ, ರಮೇಶ ಹಳ್ಳದ, ಬಸವರಾಜ ಗಣಿ, ಸಾಯಿಬಣ್ಣ ಭೋವಿ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ರಾಹುಲ್ ಜಾಧವ, ವಿಠ್ಠಲ ಹೊಸಪೇಟೆ, ಮಲ್ಲಿಕಾರ್ಜುನ ಗಡಗಿ, ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ರಾಜೇಶ ದೇವಗಿರಿ, ಶೀತಲಕುಮಾರ ಓಗಿ, ಅನೀಲ ಸಬರದ, ಲಕ್ಷ್ಮಣ ಜಾಧವ, ವಿಕ್ರಮ ಗಾಯಕವಾಡ, ಶರಣು ಕಾಖಂಡಕಿ, ಪಾರೀಶ ಶಿರಹಟ್ಟಿ, ದತ್ತಾ ಗೊಲಂಡೆ, ಸಂತೋಷ ತಲಕೇರಿ, ರಮೇಶ ಪಡಸಲಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಸವಣ್ಣನವರ ತತ್ವ ಆದರ್ಶಗಳು ಎಂದೆಂದಿಗೂ ಪ್ರಸ್ತುತ-ಯತ್ನಾಳ


