ಬಸವಜ್ಯೋತಿ ಪಾದಯಾತ್ರೆಗೆ ಭವ್ಯ ಸ್ವಾಗತ

ಸಪ್ತಸಾಗರ ವಾರ್ತೆ ವಿಜಯಪುರ, ಏ. 20:
ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಬಸವಜ್ಯೋತಿ ಪಾದಯಾತ್ರೆಯನ್ನು ನಗರದ ಬಸವ ಸಮಿತಿ ಹಾಗೂ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮತ್ತು ಗಣ್ಯರು ಸ್ವಾಗತಿಸಿದರು.
ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಜಿಲ್ಲೆಯ ಹಂದಿಗನೂರ ಗ್ರಾಮದ ಬಿ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಹಾಗೂ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಹಯೋಗದಲ್ಲಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿ ಬಸವನ ಬಾಗೇವಾಡಿಯಿಂದ ಆರಂಭಗೊಂಡ ಈ ಪಾದಯಾತ್ರೆಯು ಮಸಬಿನಾಳ, ಉಕ್ಕಲಿ ಹಾಗೂ ಉಕುಮನಾಳ ಮಾರ್ಗವಾಗಿ ಇಂದು ನಸುಕಿನ ಜಾವ ಶಿವಗಿರಿಗೆ ತಲುಪಿತು. ಈ ಸಂದರ್ಭದಲ್ಲಿ ಶಿವಗಿರಿ ಕ್ಷೇತ್ರದಲ್ಲಿ ಪಾದಯಾತ್ರಿಕರಿಗೆ ಸ್ವಾಗತ ಕೋರಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಪಾದಯಾತ್ರೆಯ ಸಾಗಿದ ಮಾರ್ಗದುದ್ದಕ್ಕೂ ಗ್ರಾಮಸ್ಥರು ಭಕ್ತಿಯಿಂದ ಪಾದಯಾತ್ರಿಕರಿಗೆ ಪುಷ್ಪಗುಚ್ಚ ನೀಡಿ, ಬಸವಣ್ಣನವರ ಘೋಷಣೆಗಳನ್ನು ಕೂಗುತ್ತಾ ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು.
ಈ ಯಾತ್ರೆಯಲ್ಲಿ ಬೆಂಗಳೂರಿನ ಜಗದೀಶ ದಮನಿಯಾ, ಸಂದೀಪ ಡಿಯೋ, ಉಮಾಶಂಕರ ಮೆಳ್ಳಿಗೆರೆ, ಬಿ. ಎಸ್. ಸಜ್ಜನ, ಕೃಪಾಕರ, ಹುಬ್ಬಳ್ಳಿಯ ರೂಪಾ ಕಳ್ಳಿಗುಡ್ಡ ಹಾಗೂ ಡಾ. ಶಿಲ್ಪಾ ಚರಂತಿಮಠ ಪಾಲ್ಗೊಂಡಿದ್ದರು.
ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಡಾ. ರಾಜು ಯಲಗೊಂಡ, ಡಾ. ಮಹಾಂತೇಶ ಹೊಸಮನಿ, ಡಾ. ಉದಯಕುಮಾರ ಜಾಧವ, ಸಚಿನ ಪಾಟೀಲ, ಡಾ. ಪ್ರವೀಣ ಚೌರ, ಡಾ. ಚೌಕಿಮಠ ಶಿವಕುಮಾರ, ಅಮೋಘ ಬಸನಾಳ, ಧ್ರುವ ಮಠ, ಸೋಮು ಮಠ, ಸಂದೀಪ ಮಡಗೊಂಡ, ಸತ್ಯ ವಿಜಯನ್, ಶಿವಾನಂದ ಯರನಾಳ, ಸಂಕೇತ ಬಗಲಿ, ಉಮೇಶ ಮೇಟಗಾರ, ನದೀಶ ಹುಂಡೇಕರ, ಶ್ರೀನಿವಾಸ, ವಿನಯ ಪಾಟೀಲ ಸೇರಿದಂತೆ ನೂರಾರು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.

Share this