ಸಪ್ತಸಾಗರ ವಾರ್ತೆ,ವಿಜಯಪುರ, ಏ. 21:
ಇತ್ತೀಚೆಗೆ ಗ್ಯಾರಂಟಿ ಸುದ್ದಿ ವಾಹಿನಿಯಿಂದ ಹುಬ್ಬಳ್ಳಿ ಕ್ಯೂಬೆಕ್ಸ ಹೋಟೇಲ್ ದಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಇವರಿಗೆ 2026 ರ ಕನಾ೯ಟಕ ಕಾಯಕಯೋಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಾಯ೯ಕ್ರಮದ ಸಾನ್ನಿಧ್ಯ ಮ.ನಿ.ಪ್ರ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭಾವೈಕ್ಯತಾ ಸಂಸ್ಥಾನಮಠ ಶಿರಹಟ್ಟಿ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಡಾ. ಚಿಗುರುಪಾಟಿ ಪ್ರಸಾದ, ವಿ.ಆರ್.ಎಲ್ ಗ್ರುಪ್ ನಿದೇ೯ಶಕ ಆನಂದ ಸಂಕೇಶ್ವರ,
ಪೋಲಿಸ ಆಯುಕ್ತ ಎನ್. ಶಶಿಕುಮಾರ ಸುದ್ದಿ ವಾಹಿನಿ ಸಂಪಾದಕಿ ರಾಧಾ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರಗೆ ಕನಾ೯ಟಕ ಕಾಯಕಯೋಗಿ ಪ್ರಶಸ್ತಿ


