ಯಡ್ಡಿ ಅಭಿಮಾನೋತ್ಸವ ಕಾರ್ಯಕರ್ತರ ಪಾಲಿಗೆ ಒಂದು ಅಪೂರ್ವ ಹಬ್ಬ-ರಜಪೂತ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 3:
ಚಿತ್ರದುರ್ಗದಲ್ಲಿ ನಡೆಯಲಿರುವ ಶ್ರೀ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ ಬಿಜೆಪಿ ಕಾರ್ಯಕರ್ತರ ಪಾಲಿಗೆ ಒಂದು ಅಪೂರ್ವ ಹಬ್ಬವಿದ್ದಂತೆ. ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಭ ಕೋರಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಕೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿ.ಎಸ್. ಯಡಿಯೂರಪ್ಪ ಓರ್ವ ನಾಡು ಕಂಡ ಶ್ರೇಷ್ಠ ನೇತಾರ, ಸೈಕಲ್ ಮೇಲೆ ಹೆಮ್ಮೆಯ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಆಡಳಿತದ ಹೆಬ್ಬಾಗಿಲು ತೆರೆಯುವಂತೆ ಮಾಡಿದರು. ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ನೀ ಯೋಜನೆ, ಶಾಲಾ ಮಕ್ಕಳಿಗೆ ಸೈಕಲ್ , ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಹೀಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ, ಸರ್ವ ಜನಾಂಗದ ಹಿತ ಬಯಸಿದ ಅವರು ನಾಡಿಗೆ ನೀಡಿದ ಕೊಡುಗೆ ಅನನ್ಯ, ಅವರ ಅಭಿಮಾನಿಗಳು ಸಂಘಟಿಸಿರುವ ಅಭಿಮಾನೋತ್ಸವದಲ್ಲಿ ಹೆಮ್ಮೆಯಿಂದ ಪಾಲ್ಗೊಳ್ಳಬೇಕಾಗಿದೆ, ವಿಜಯಪುರಕ್ಕೂ ಯಡಿಯೂರಪ್ಪ ಅವರಿಗೂ ಅವಿನಾಭಾವ ಬಾಂಧವ್ಯ ಇದೆ ಎಂದರು, ಇಲ್ಲಿ ಬಿಜೆಪಿ ಪಕ್ಷ ನೆಲೆಯೂರಲು ಯಡಿಯೂರಪ್ಪ ಅವರ ಶ್ರಮ ಅಧಿಕವಾಗಿದೆ. ಹೀಗಾಗಿ ವಿಜಯಪುರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಅವರು ಹೇಳಿದ್ದಾರೆ.

Share this