ಕ್ಯಾಲಿಫೋರ್ನಿಯಾ ದ್ರಾಕ್ಷಿ ಬೆಳೆದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಸಮರ್ಪಿಸಿದ ತಿಕೋಟಾ ರೈತರು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 4:
ಬರಗಾಲದ ಜಿಲ್ಲೆ ಬ್ರಿಟೀಷರ ಕಾಲದಿಂದಲೂ ಹಿಂದಿನ 100 ವರ್ಷ ಮಳೆಪ್ರಮಾಣವನ್ನು ಅಭ್ಯಸಿಸಿದಾಗ ಅತೀ ಕಡೀಮೆ ಮಳೆ ಬೀಳುವ ಪ್ರದೇಶವಾಗಿದೆ. ಇದೇ ನೆಲದಿಂದ ಬಂದ ಶ್ರೇಷ್ಠ ಸಂತ ಜ್ಞಾನಯೋಗಿ, ಜಗತ್ತಿನ ಪ್ರಮುಖ ದಾರ್ಶನಿಕರಲ್ಲೊಬ್ಬರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರು ಈ ಪ್ರದೇಶ ಅಭಿವೃದ್ಧಿ ಸದಾ ಚಿಂತಿಸಿದವರು.
ಪಂಚ ನದಿಗಳ ಹರಿದು ದಕ್ಷಿಣದ ಪಂಜಾಬ ಎನಿಸಿಕೊಂಡರೂ ಬರಗಾಲದಿಂದ ಇಲ್ಲಿನ ಜನರು ಸದಾ ಗುಳೆ ಹೋಗುತ್ತಿದ್ದರು. ಇದಕ್ಕೆ ಏನಾದರೂ ಇತಿಶ್ರೀ ಹಾಡಬೇಕು. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಮಳೆಯಾದರೂ ಆ ಹನಿ ನೀರು ವಿಜಯಪುರ ಜಿಲ್ಲೆಗೆ ಹರಿದು ಬರುತ್ತದೆ. ಇಲ್ಲಿನ ಹರಿಯುವ ನೀರನ್ನು ಎತ್ತಿ, ಈ ಭೂಮಿಗೆ ಒಂದು ಬೋಗಸೆ ನೀರು ಕೊಟ್ಟರೆ, ಇದು ಅಮೆರಿಕದ ಕ್ಯಾಲಿಪೋರ್ನಿಯಾ ಆಗುತ್ತದೆ ಎಂದಿದ್ದರು. ಈಘ ಸಿದ್ದೇಶ್ವರ ಶ್ರೀಗಳ ಆಶಯ ಕೈಗೂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ಈ ಸಂಬಂಧ ಜನಪ್ರತಿನಿಧಿಗಳ ಸಭೆಗಳನ್ನು ಕರೆದು ಚಿಂತನ-ಮಂಥನ ಮಾಡಿದ್ದರು. ಅವರ ಆಶಯ ಇಂದು ಶಬ್ದಸಹ ಶೇ. ನೂರಕ್ಕೆ ನೂರರಷ್ಟು ಈಡೇರುತ್ತಿದೆ ಎಂದರು.
2013ರಿಂದ 2018ರ ಅವಧಿಯಲ್ಲಿ ಶ್ರೀ ಸಿದ್ದರಾಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿ ವಿಜಯಪುರ ಜಿಲ್ಲೆಗೆ ಮುಳವಾಡ, ತುಬಚಿ-ಬಬಲೇಶ್ವರ, ಚಿಮ್ಮಲಗಿ, ತಿಡಗುಂದಿ ವಿಸ್ತರಣಾ ಕಾಲುವೆ ಸೇರಿದಂತೆ ಹತ್ತಕ್ಕೂ ಹೆಚ್ಚು ನೀರಾವರಿ ಯೋಜನೆಗಳ ಮೂಲಕ 100ಕ್ಕೂ ಹೆಚ್ಚು ಟಿಎಂಸಿ ನೀರನ್ನು ಈ ಭಾಗಕ್ಕೆ ಹರಿಸುವ ಪ್ರಯತ್ನ ಮಾಡಿದ್ದರ ಪರಿಣಾಮ ಇಂದು ಬಿರು ಬೇಸಿಗೆಯ ಕಾಲ, ಚಳಿಗಾಲ ಎಂಬ ಎರಡೇ ಕುಖ್ಯಾತಿಗೆ ಹೆಸರಾಗಿದ್ದ ವಿಜಯಪುರ ಜಿಲ್ಲೆ ಇಂದು ಉತ್ತಮ ಮಳೆಗಾಲ, ಚಳಿಗಾಲ ಮತ್ತು ಕಡಿಮೆ ಬೇಸಿಗೆ ಕಾಲಕ್ಕೆ ಬಂದು ನಿಂತಿದೆ ಎಂದು ನುಡಿದರು.
•ಪ್ರತಿ ವರ್ಷ ಜನವರಿ 15 ಸಂಕ್ರಾಂತಿಯಲ್ಲಿ ಬೇಸಿಗೆ ಆರಂಭವಾಗುತ್ತಿತ್ತು. ಜನವರಿ ಕಳೆದು ಫೆಬ್ರವರಿ ಬರುವಷ್ಟರಲ್ಲಿ ಕೆಂಡದಂತಾಗುತ್ತಿತ್ತು. ಮುಂದಿನ ಮಾರ್ಚ, ಎಪ್ರಿಲ್ ಮತ್ತು ಮೇ ತಿಂಗಳನಲ್ಲಿ ಈ ಮೂರು ಅತ್ಯಂತ ಯಾತನಾದಾಯಕ ಸ್ಥಿತಿ ಬಿರು ಬೇಸಿಗೆಯಲ್ಲಿ ವಿಜಯಪುರದಲ್ಲಿ ಉಂಟಾಗುತ್ತಿತ್ತು. ಆದರೆ ಇಂದು ನೀರು, ನೀರಾವರಿ, ಹಸರೀಕರಣ, ಕೋಟಿವೃಕ್ಷ ಅಭಿಯಾನ ಮತ್ತಿತರ ಎಲ್ಲ ಪೂರಕ ಚಟುವಟಿಕೆಗಳ ಪರಿಣಾಮ ಬೇಸಿಗೆ ಮತ್ತು ಬಿರು ಬೇಸಿಗೆ ಕಾಲ ತಗ್ಗಿ ಕೇವಲ ಎರಡು ತಿಂಗಳು ಕಾಲಕ್ಕೆ ಇಳಿಕೆಗೊಂಡಿದೆ ಎಂದು ತಿಳಿಸಿದರು.
ಜನವರಿ, ಫೇಬ್ರುವರಿ, ಮಾರ್ಚ ತಿಂಗಳಲ್ಲಿ ಸಾಮಾನ್ಯವಾಗಿದ್ದು, ಎಪ್ರೀಲ್ ತಿಂಗಳಲ್ಲಿ ಮಾತ್ರ ನಾವು ಬೇಸಿಗೆಯ ಅನುಭವವನ್ನು ಪಡೆಯುತ್ತಿದ್ದೇವೆ. ಅದೇ ರೀತಿ ಮೇನಲ್ಲೂ ಕೂಡ ಮುಂದುವರೆಯುತ್ತದೆ ಎಂದು ಹೇಳಿದರು.
ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರು ಈ ಭೂಮಿಗೆ ಬೊಗಸೆ ನೀರು ಕೊಟ್ಟರೆ ಇದು ಅಮೆರಿಕದ ಕ್ಯಾಲಿಪೋರ್ನಿಯಾ ಆಗುತ್ತದೆ ಎಂಬ ಕಳಕಳಿಯ ಮಾತುಗಳು ಇಂದು ನೂರಕ್ಕೆ ನೂರರಷ್ಟು ಅವರ ಮಾತು ಸಿದ್ಧಗೊಳಿಸುವತ್ತ ನಮ್ಮ ರೈತರು ಮುಂದುವರೆದಿದ್ದು, ತಿಕೋಟಾದ ಕೃಷ್ಣವೇಣಿ ಎಫ್.ಬಿ.ಓ (ಫಾರ್ಮರ್ಸ್ ಪ್ರೊಡ್ಯೂಜರ್ಸ್ ಆರ್ಗಾನೈಜೇಶನ್) ಇಂದು ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್ ನ ಶ್ರೀ ವಿಲಾಸರಾವ ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿಯ ಬೆಳೆಯನ್ನು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಇದನ್ನು ಒಂದು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಲಿದ್ದಾರೆ. ಇದಕ್ಕೆ ಮುಖ್ಯವಾಗಿ ತಿಕೋಟಾದ ಕೃಷ್ಣವೇಣಿ ಎಫ್.ಬಿ.ಓ ನ ಸಂದೀಪ ಪಾಟೀಲ, ಸಚಿನ ಪಾಟೀಲ ಹಡಲಸಂಗ ಇವರು ತೋಟಗಾರಿಕೆ ಪದವಿಧರರಾಗಿದ್ದು, ಸ್ಥಳೀಯ ರೈತರ ತಂಡವನ್ನು ಕಟ್ಟಿ ಉತ್ಸಾಹದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ದ್ರಾಕ್ಷಿಯ ತಳಿಯಿಂದ ವಿಜಯಪುರ ದ್ರಾಕ್ಷಿ ಬೆಳೆಗಾರರ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ. ಸಂಶಯವೇ ಇಲ್ಲ. ಇದರಿಂದ ರೈತರ ಆರ್ಥಿಕ ಬಲವರ್ಧನೆ ಆಗುತ್ತದೆ. ಈಗಾಗಲೇ ನಮ್ಮ ಬಿ.ಎಲ್.ಡಿ.ಇ ತಂಡ ನಾಸಿಕನ ಸಹ್ಯಾದ್ರಿಗೆ ಫಾರ್ಮ್ ಗೆ ಭೇಟಿ ನೀಡಿ, ಶ್ರೀ ವಿಲಾಸರಾವ ಶಿಂಧೆ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿಯೂ ಪೆಸಿಲಿಟಿ ನಿರ್ಮಾಣ ಮಾಡಲು ಕೋರಿದ್ದೇವೆ, ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದಿದ್ದಾರೆ.
ಈ ಕಾರ್ಯದ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿಯವ ಕನಸು ನನಸಾಗಿದೆ. ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟದರ್ಜೆಯ ಔರಾ-36 ತಳಿಯ ದ್ರಾಕ್ಷಿಯ ಬೆಳೆ ಇಲ್ಲಿ ಕಂಗೋಳಿಸುತ್ತಿದೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ, ಕೃಷ್ಣವೇಣಿ ಎಫ್ ಬಿ ಓ ಪದಾಧಿಕಾರಿ ಸಂದೀಪ ಪಾಟೀಲ, ಸಚಿನ ಪಾಟೀಲ ಉಪಸ್ಥಿತರಿದ್ದರು.

Share this