ಅಪ್ರಾಪ್ತ ಬಾಲಕ ದ್ವಿ ಚಕ್ರ ವಾಹನ ಚಾಲನೆ: ಪೋಷಕರಿಗೆ 25,000 ದಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 4:
ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಅಪರಾಧಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನ ಪೋಷಕರಿಗೆ ನ್ಯಾಯಾಲಯ 25,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಿಜಯಪುರ ನಗರದ ಪಾಟೀಲ್ ಪ್ಲಾನೆಟ್ ಬಳಿ ಒಬ್ಬ ಬಾಲಕ ದ್ವಿಚಕ್ರ ನಡೆಸುವ ವೇಳೆ ವಿಜಯಪುರ ಸಂಚಾರಿ ಪೊಲೀಸರು ಗಮನಿಸಿ ಬಾಲಕನನ್ನು ತಡೆದು ಪರಿಶೀಲಿಸಿದಾಗ ಆ ಬಾಲಕ ಅಪ್ರಾಪ್ತ ಎಂಬುವುದು ಪೊಲೀಸರಿಗೆ ಖಚಿತಪಟ್ಟಿದೆ. ಆಗ ಸಂಚಾರಿ ಪೊಲೀಸರು ಬಾಲಕನ ಪೋಷಕರ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸಿಜೆಎಂ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಆಗ ಬಾಲಕನ ಮೇಲಿನ ಆರೋಪಗಳು ಸಾಕ್ಷ್ಯಾಧಾರ ಸಮೇತ ರುಜುವಾತು ಪಟ್ಟಿದ್ದರಿಂದ ನ್ಯಾಯಾಲಯ ಬಾಲಕನ ಪೋಷಕರಿಗೆ 25,000 ದಂಡ ವಿಧಿಸಿ ಒಂದು ವರ್ಷದ ವರೆಗೆ ವಾಹನ ನೋಂದಣಿ ರದ್ದುಪಡಿಸಿ ಕೋರ್ಟ್ ತೀರ್ಪು ನೀಡಿದೆ.

Share this