ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 5:
ವಿಶ್ವ ನಗು ದಿನವನ್ನು ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅವಳಿ ಸಹೋದರಿಯರಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ವಿಶ್ವ ನಗು ದಿನವನ್ನು ಆಚರಿಸಿದರು.
ನಗುವಿನ ಆರೋಗ್ಯಕರ ಲಾಭಗಳು ಮತ್ತು ವಿಶ್ವ ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ, 1998 ರಲ್ಲಿ ಡಾ. ಮದನ್ ಕಟಾರಿಯಾ ಅವರು ಈ ದಿನವನ್ನು ಪ್ರಾರಂಭಿಸಿದರು. ನಗು ಒತ್ತಡ ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನಗು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ನಗು ಅತ್ಯುತ್ತಮ ಔಷಧವಾಗಿದ್ದು, ಜೀವನದ ಗುಣಮಟ್ಟವನ್ನು ಕೂಡ ಸುಧಾರಿಸುತ್ತದೆ.
ನಗು ನಮಗೆ ದೇವರು ನೀಡಿದ ವರದಾನ. ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ನಗು ಧನಾತ್ಮಕ ಸಂವಹನದ ಒಂದು ರೂಪವಾಗಿದೆ. ನಗುವವರ ನಡುವೆ ಮಾನವ ಸಂಬಂಧಗಳು ಗಟ್ಟಿಯಾಗುತ್ತವೆ.
ವಿಶ್ವ ನಗು ದಿನ ಆಚರಿಸಿದ ಬಂಡೆ ಸಹೋದರಿಯರು


