ನೈಋತ್ಯ ರೈಲ್ವೆಯಿಂದ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 10:
ಪ್ರಯಾಣಿಕರ ಸಾಮರ್ಥ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು, ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳಿಗೆ ಶಾಶ್ವತವಾಗಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರತಿ ರೈಲಿಗೂ ತಲಾ ಒಂದು ಎಸಿ 3-ಟೈರ್ ಬೋಗಿ, ಮೂರು ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಸೇರಿಸಲಾಗುವುದು.
ರೈಲು ಸಂಖ್ಯೆ 16547/16548 ಯಶವಂತಪುರ–ವಿಜಯಪುರ–ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ ರೈಲುಗಳಿಗೆ ಐದು ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಇದರೊಂದಿಗೆ ರೈಲಿನ ಒಟ್ಟು ಬೋಗಿಗಳ ಸಂಖ್ಯೆ 13ರಿಂದ 18ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ಬದಲಾವಣೆಯು ಯಶವಂತಪುರದಿಂದ ಮೇ 8, 2026 ಮತ್ತು ವಿಜಯಪುರದಿಂದ ಮೇ 9, 2026 ರಿಂದ ಜಾರಿಗೆ ಬರಲಿದೆ.
ರೈಲು ಸಂಖ್ಯೆ 16545/16546 ಯಶವಂತಪುರ–ಸಿಂಧನೂರು–ಯಶವಂತಪುರ ದೈನಂದಿನ ಎಕ್ಸ್’ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆಯನ್ನು 13 ರಿಂದ 18ಕ್ಕೆ ಹೆಚ್ಚಿಸಲಾಗುವುದು. ಇದರ ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ವ್ಯವಸ್ಥೆಯು ಯಶವಂತಪುರದಿಂದ ಮೇ 10, 2026 ಮತ್ತು ಸಿಂಧನೂರಿನಿಂದ ಮೇ 11, 2026 ರಿಂದ ಜಾರಿಗೆ ಬರಲಿದೆ.
ರೈಲು ಸಂಖ್ಯೆ 06517/06518 ಯಶವಂತಪುರ–ಹಿಂದೂಪುರ–ಯಶವಂತಪುರ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆಯನ್ನು ಸಹ 13 ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಪರಿಷ್ಕೃತ ಸಂಯೋಜನೆಯಲ್ಲಿ 2 ಎಸಿ 3-ಟೈರ್ ಬೋಗಿಗಳು (ಬೀಗ ಹಾಕಿದ), 7 ಸ್ಲೀಪರ್ ಕ್ಲಾಸ್ ಬೋಗಿಗಳು, 7 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ ಬೋಗಿಗಳು ಇರಲಿವೆ. ಈ ಪರಿಷ್ಕೃತ ಸಂಯೋಜನೆಯು ಮೇ 10, 2026 ರಿಂದ ಯಶವಂತಪುರ ಮತ್ತು ಹಿಂದೂಪುರ ಎರಡೂ ಕಡೆಗಳಿಂದ ಜಾರಿಗೆ ಬರಲಿದೆ.

Share this