ಸಪ್ತಸಾಗರ ವಾರ್ತೆ,ವಿಜಯಪುರ, ಮೇ 16:
ನಗರದಲ್ಲಿ ಹಲವು ವರ್ಷಗಳಿಂದ ಮೆರಾಥಾನ್ ನಡೆಸುತ್ತಿದ್ದೇವೆ. ಇದರಿಂದಾಗಿ ವಿಜಯಪುರದ ವಾತಾವರಣ ಸಂಪೂರ್ಣ ಬದಲಾಗಿದೆ. ಈ ವರ್ಷ ಜಿಲ್ಲೆಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಕ್ರಾಸ್ ಆಗಿಲ್ಲ. ಇದರಿಂದಾಗಿ ವಿಜಯಪುರಕ್ಕೆ ಗ್ರೇಟರ್ ಲುಕ್ ಬಂದಿದೆ ಎಂದು ವೃಕ್ಷೋತ್ಥಾನ್ ಹಾಗೂ ಮೆರಾಥಾನ್ ರೂವಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ಬಿಎಲ್ ಡಿಇ ಸಂಸ್ಥೆಯಲ್ಲಿ ಶನಿವಾರ ಬ್ಯಾಡ್ಮಿಂಟನ್ ಅಂಗಳ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆರಾಥಾನ್ ಕೂಡಾ ನಡೆಸುತ್ತಿರುವುದರಿಂದ ವಿಜಯಪುರಕ್ಕೆ ಹೊಸ ಲುಕ್ ಬಂದಿದೆ. ಶೀಘ್ರದಲ್ಲಿ ವಿಜಯಪುರ ನಗರ ದೇಶ ಹಾಗೂ ರಾಜ್ಯದಲ್ಲಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ ಎಂದರು.
ಬ್ಯಾಡ್ಮಿಂಟನ್ ಪಂದ್ಯಾಟದ ಈ ಸಂದರ್ಭದಲ್ಲಿ ಸಾವಿರಾರು ಜನರು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ.
ಇದರಿಂದಾಗಿ ವಿಜಯಪುರದಲ್ಲಿ ಹೊಸ ವಾತಾವರಣ ಸೃಷ್ಟಿಯಾಗಲಿದೆ ಎಂದರು.
ಇದರೊಟ್ಟಿಗೆ ಬಾಸ್ಕೆಟ್ ಬಾಲ್ ರಾಷ್ಟ್ರೀಯ ಅಧ್ಯಕ್ಷ ಗೋವಿಂದರಾಜ ಅವರು, ವಿಜಯಪುರದಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾಟ ಆಯೋಜಿಸಲು ನಿರ್ಧರಿಸಿದ್ದಾರೆ. ಈ ಎಲ್ಲ ಪಂದ್ಯಾಟಗಳು ನಡೆದರೆ ವಿಜಯಪುರದಲ್ಲಿ ಹೊಸ ಔಟ್ ಲುಕ್ ಬರಲಿದೆ.
ಕೋಟಿ ವೃಕ್ಷ ಅಭಿಯಾನದ ಪ್ರತಿಫಲವಾಗಿ ವಿಜಯಪುರ ಜಿಲ್ಲೆಯ ತಾಪಮಾನ ಈ ವರ್ಷ 40 ಡಿಗ್ರಿ ಸೆಲ್ಸಿಯಸ್ ಕ್ರಾಸ್ ಆಗಿಲ್ಲ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಕೋಟಿ ವೃಕ್ಷ ಅಭಿಯಾನದಡಿ, ಆಲಮಟ್ಟಿಯಲ್ಲಿ ನರ್ಸರಿ ಆರಂಭಿಸಿದ್ದೇವೆ. ಈ ಕುರಿತು ಡಿಸಿಎಂ ಅವರಿಗೆ ಮಾತನಾಡಿದ್ದೇನೆ. 5ಕೋಟಿ ಸಸಿ ನೆಡುವ ಕೆಲಸ ಮಾಡಬೇಕು. ಆದಾಗ್ಯೂ ಹಳ್ಳ-ಕೊಳ್ಳ ತುಂಬಿಸುವ ಕೆಲಸ ಮಾಡಲಿದ್ದೇವೆ. ಗಿಡ ಹಚ್ಚಿ ನಿರ್ವಹಣೆ ಮಾಡುವುದರ ಮೂಲಕ ವಿಜಯಪುರಕ್ಕೆ ಹೊಸ ಸೌಂದರ್ಯ ಕಲ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಅವರು ತಿಳಿಸಿದರು.
ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಸೇರಿದಂತೆ ಮತ್ತಿತರರು ಇದ್ದರು.
ಹವಾ ನಿಯಂತ್ರಿತ ವಾತಾವರಣ
ವಿಜಯಪುರದಲ್ಲಿ ಹಸರೀಕರಣ ದೊಡ್ಡ ಮಟ್ಟದಲ್ಲಿ ಆಗಿದೆ. ಇದಾಗಿದ್ದರಿಂದ ವಿಜಯಪುರದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಡಿಮೆಯಾಗಿದೆ. ಇಲ್ಲಿಗೆ ಬರಬೇಕಾದರೆ ವಿಜಯಪುರದಲ್ಲಿ ಸೆಕೆ ಅಧಿಕವಾಗಿರುತ್ತದೆ ಎಂದು ತಿಳಿದಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು. ವಿಜಯಪುರದಲ್ಲಿ ಈಗ ಹವಾನಿಯಂತ್ರಿತ ವಾತಾವರಣ ನಿರ್ಮಾಣವಾಗಿದ್ದು, ಸಂತಸ ಮೂಡಿಸಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇನ್ ಅಧ್ಯಕ್ಷ ಕುಮಾರ ಬಂಗಾರಪ್ಪ ಹೇಳಿದರು.


