ಸಪ್ತಸಾಗರ ವಾರ್ತೆ,ವಿಜಯಪುರ ಮೇ 23:
ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಮೇ 17 ರಿಂದ 7 ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಪಂದ್ಯಾವಳಿಗೆ ಶನಿವಾರ ವಿದ್ಯುಕ್ತವಾಗಿ ತೆರೆಬಿತ್ತು.
ಇದೇ ಮೊದಲ ಬಾರಿಗೆ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟ ಗುಮ್ಮಟ ನಗರಿಯ ಜನತೆಯನ್ನು ಕಳೆದ 7 ದಿನಗಳಿಂದ ಬ್ಯಾಡ್ಮಿಂಟನ್ ಲೋಕದಲ್ಲಿ ಮಿಂದೇಳಿಸಿತು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ ರೈಸ್ ಪ್ರಾಯೋಕತ್ವದಡಿ ನಗರದ ಬಿಎಲ್ ಡಿ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ಈ ಪಂದ್ಯಾಟ ನಡೆದಿದ್ದರಿಂದ ಯಶಸ್ವಿಯಾಗುವುದರ ಮೂಲಕ ಜಿಲ್ಲೆಯ ಇತಿಹಾಸ ಪುಟಗಳಲ್ಲಿ ದಾಖಲೆಯನ್ನು ಬರೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಆಟ ಪ್ರಸಿದ್ಧಿ ಪಡೆದು ಯುವಕರು ಪ್ರೇರಣೆ ಹೊಂದುವಂತಾಗಲಿ ಎಂಬುದರ ಸದಾಶಯದಂತೆ ಜಿಲ್ಲೆ ಆ ನಿಟ್ಟಿನಲ್ಲೂ ಆಯೋಜಿಸುವ ಕ್ರೀಡೆಗಳಿಗೆ ಆತಿಥ್ಯ ವಹಿಸಿಕೊಂಡು ಈ ಬ್ಯಾಡ್ಮಿಂಟನ್ ಪಂದ್ಯಾವಳಿ ಬ್ಯಾಡ್ಮಿಂಟನ್ ಆಟದತ್ತ ಜಿಲ್ಲೆಯ ಜನತೆಯ ಗಮನಸೆಳೆಯಿತು.
ನಗರದ ಡಾ.ಬಿ. ಆರ್. ಅಂಬೇಡ್ಕರ್ ಒಳಾಂಗಣ ಹಾಗೂ ಬಿಎಲ್ಡಿಇ ಸಂಸ್ಥೆಯ ಒಳಾಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಆಟಗಳು ನಗರದ ಬ್ಯಾಡ್ಮಿಂಟನ್ ಪ್ರೇಮಿಗಳನ್ನು ಬ್ಯಾಡ್ಮಿಂಟನ್ ಆಟದತ್ತ ಪ್ರೇರೆಪಿಸಿತು.
ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಲ್ಲಿನ ಜನತೆ ನೀಡಿದ ಆತಿಥ್ಯ ನಮಗೆ ಸಂಪೂರ್ಣ ಸಂತೋಷವಾಗಿದೆ ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಬ್ಯಾಡ್ಮಿಂಟನ್ ಆಟಗಾರರು ತಿಳಿಸಿದರು.
ಮಾತ್ರವಲ್ಲ, ಈ ಟೂರ್ನಮೆಂಟ್ ಆಟಗಾರರು, ಅಧಿಕಾರಿಗಳು ಹಾಗೂ ಬ್ಯಾಡ್ಮಿಂಟನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಬಂತು ಎಂದು ಸಂತಸ ಹಂಚಿಕೊಂಡರು.
ಕಳೆದ 7 ದಿನಗಳಲ್ಲಿ ಸುಮಾರು 760 ಆಟಗಾರರ ಎಂಟ್ರಿಗಳು ದಾಖಲಾಗಿದ್ದು, 750ಕ್ಕೂ ಹೆಚ್ಚು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ.
ಟೂರ್ನಮೆಂಟ್ ಅವಧಿಯಲ್ಲಿ
ಸುಮಾರು 200 ಶಟಲ್ ಬಾಕ್ಸ್ಗಳು (2400ಕ್ಕೂ ಹೆಚ್ಚು ಶಟಲ್ಗಳು) ಬಳಸಲ್ಪಟ್ಟಿದ್ದು, ಸ್ಪರ್ಧೆಯ ವ್ಯಾಪ್ತಿ ಮತ್ತು ಮಟ್ಟವನ್ನು ತೋರಿಸುತ್ತದೆ. ಈ ಪಂದ್ಯಾವಳಿಯನ್ನು 3000ಕ್ಕೂ ಹೆಚ್ಚು ಸದಸ್ಯರು ಹಾಗೂ ಪ್ರೇಕ್ಷಕರು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
ಈ ಟೂರ್ನಮೆಂಟ್ ಹೊಸ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿಶೇಷವಾಗಿ ವಿಜಯಪುರದಿಂದ 10ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಈ ಯಶಸ್ವಿ ಆಯೋಜನೆಯ ಮೂಲಕ ಕರ್ನಾಟಕವು ದೊಡ್ಡ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಬ್ಯಡ್ಮಿಂಟನ್ ಅಸೀಷಿಯಶನ್ ತಿಳಿಸಿದೆ.
ಬ್ಯಾಡ್ಮಿಂಟನ್ ಪಂದ್ಯಾಟದ ಫಲಿತಾಂಶ
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧಿಕೃತ ಮಾನ್ಯತೆಯೊಂದಿಗೆ ಯೊನೆಕ್ಸ್ ಸನ್ ರೈಸ್ ಪ್ರಾಯೋಜಕ್ವತದಲ್ಲಿ ಐತಿಹಾಸಿಕ ಗುಮ್ಮಟ ನಗರಿಯಲ್ಲಿ ನಡೆದ ಕರ್ನಾಟಕ ಸಬ್ ಜ್ಯೂನಿಯರ್ ಪಂದ್ಯದ ಫಲಿತಾಂಶ ಇಲ್ಲಿದೆ.
ಬಾಲಕರ ಸಿಂಗಲ್ಸ್ U-15 (BS U15)
ಫೈನಲ್
ಗೌತಮ್ ಎಸ್ ನಾಯರ್, ಬೆಂಗಳೂರು ಅರ್ಬನ್, ಯಶವರ್ಧನ್ ಎಸ್ ಆರ್ (13), ಬೆಂಗಳೂರು ರೂರಲ್ ವಿರುದ್ಧ 21-12, 21-19 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಸಿಂಗಲ್ಸ್ U-15 (GS U15)
ಫೈನಲ್
ಮಹಿತಾ ನಾಯ್ಡು ಸುರಿಸೆಟ್ಟಿ (1), ಬೆಂಗಳೂರು ಅರ್ಬನ್, ಸ್ಮೃತಿ ಎಸ್, ಬೆಂಗಳೂರು ಅರ್ಬನ್ ವಿರುದ್ಧ 21-10, 21-7 ಅಂತರದಿಂದ ಜಯಗಳಿಸಿದರು.
ಬಾಲಕರ ಡಬಲ್ಸ್ U-15 (BD U15)
ಫೈನಲ್
ಚೇತಸ್ ಮುಂಡರ್ಗಿ, ಬೆಂಗಳೂರು ಅರ್ಬನ್ ಮತ್ತು ವಿಶಾಲ್ ಡಿ ಆನಂದ್ ಆನಂದ್, ಕೊಡಗು, ಗೌತಮ್ ಎಸ್ ನಾಯರ್ ಮತ್ತು ಸಿದ್ಧಾರ್ಥ್ ಎಸ್ ನಾಯರ್ (5), ಬೆಂಗಳೂರು ಅರ್ಬನ್ ವಿರುದ್ಧ 14-21, 21-14, 21-16 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಡಬಲ್ಸ್ U-15 (GD U15)
ಫೈನಲ್
ಹಂಸಾ ಮುರಳಿಧರ ಮತ್ತು ಮಹಿತಾ ನಾಯ್ಡು ಸುರಿಸೆಟ್ಟಿ, ಬೆಂಗಳೂರು ಅರ್ಬನ್, ಜೀವಿಕಾಹ್ ಸಾಯಿ ರಾಜೇಶ್ಕುಮಾರ್, ಬೆಂಗಳೂರು ಅರ್ಬನ್ ಮತ್ತು ಮನಿಕಾ ನವೀನ್ (2), ಬೆಂಗಳೂರು ರೂರಲ್ ವಿರುದ್ಧ 21-18, 21-15 ಅಂತರದಿಂದ ಜಯಗಳಿಸಿದರು.
ಮಿಶ್ರ ಡಬಲ್ಸ್ U-15 (XD U15)
ಫೈನಲ್
ಯಶವರ್ಧನ್ ಎಸ್ ಆರ್ ಮತ್ತು ಆದಿತಿ ಸುಶಾಂತ್ (2), ಬೆಂಗಳೂರು ರೂರಲ್, ಬಿ.ಬಿ. ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕಾ ರಾಕೇಶ್, ಮೈಸೂರು ವಿರುದ್ಧ 21-11, 21-16 ಅಂತರದಿಂದ ಜಯಗಳಿಸಿದರು.
ಬಾಲಕರ ಸಿಂಗಲ್ಸ್ U-17 (BS U17)
ಫೈನಲ್
ಪೀಯೂಷ್ ತ್ರಿಪಾಠಿ (3), ಬೆಂಗಳೂರು ಅರ್ಬನ್, ಡಿಲನ್ ಪಿ ತೋಕ್ಚೊಂ, ಬೆಂಗಳೂರು ಅರ್ಬನ್ ವಿರುದ್ಧ 21-19, 10-21, 21-17 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಸಿಂಗಲ್ಸ್ U-17 (GS U17)
ಫೈನಲ್
ಆದಿತಿ ಸುಶಾಂತ್, ಬೆಂಗಳೂರು ರೂರಲ್, ಕೀರ್ತಿ ಬಾಲಾಜಿ (1), ಬೆಂಗಳೂರು ಅರ್ಬನ್ ವಿರುದ್ಧ 21-18, 21-16 ಅಂತರದಿಂದ ಜಯಗಳಿಸಿದರು.
ಬಾಲಕರ ಡಬಲ್ಸ್ U-17 (BD U17)
ಫೈನಲ್
ಮೆಹುಲ್ ಮನವ್ ಅರುಳ್ಮುರುಗನ್, ಬೆಂಗಳೂರು ಅರ್ಬನ್ ಹಾಗೂ ಸಾತ್ವಿಕ್ ಎಸ್ ಪ್ರಭು (2), ದಕ್ಷಿಣ ಕನ್ನಡ, ಚಿರಾಗ್ ಪ್ರಕಾಶ್ ಮತ್ತು ನಿಕೇತನ ಹರಿ ಎನ್ ಡಿ, ಬೆಂಗಳೂರು ಅರ್ಬನ್ ವಿರುದ್ಧ 15-21, 21-19, 21-18 ಅಂತರದಿಂದ ಜಯಗಳಿಸಿದರು.
ಬಾಲಕಿಯರ ಡಬಲ್ಸ್ U-17 (GD U17)
ಫೈನಲ್
ದಿಶಾ ರವಿ ಭಟ್ ಮತ್ತು ತನ್ವಿ ಮುನೋತ್, ಬೆಂಗಳೂರು ಅರ್ಬನ್, ರಕ್ಷಾ ಎನ್ ಮತ್ತು ಶ್ರಿಯಾ ಜೋಶಿ, ಬೆಂಗಳೂರು ಅರ್ಬನ್ ವಿರುದ್ಧ 21-11, 21-13 ಅಂತರದಿಂದ ಜಯಗಳಿಸಿದರು.
ಮಿಶ್ರ ಡಬಲ್ಸ್ U-17 (XD U17)
ಫೈನಲ್
ಈಶ್ವರ್ ಸಾಯಿ ಕಟಂ ಮತ್ತು ಡೆಬೋರಾ ಜಾನ್, ಬೆಂಗಳೂರು ಅರ್ಬನ್, ಚಿರಾಗ್ ಪ್ರಕಾಶ್ ಮತ್ತು ತನ್ವಿ ಮುನೋತ್, ಬೆಂಗಳೂರು ಅರ್ಬನ್ ವಿರುದ್ಧ 21-17, 21-16 ಅಂತರದಿಂದ ಜಯಗಳಿಸಿದರು.


